Quantcast
Channel: VijayKarnataka
Viewing all articles
Browse latest Browse all 6795

ಕೆಂಪು ನೆತ್ತರಿನಲಿ ಅರಳಿತು ಅಮರ ಪ್ರೇಮ

$
0
0

ಕನ್ನಡ ಚಿತ್ರ : ರಿಕ್ಕಿ

-ಎಚ್. ಮಹೇಶ್

ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ರಾಧಾ ( ಹರಿಪ್ರಿಯಾ ) ನಕ್ಸಲೈಟ್ ಆಗುತ್ತಾಳೆ. ಸ್ಪೆಶಲ್ ಎಕಾನಮಿಕ್ ಜೋನ್ (ಎಸ್.ಇ.ಜೆಡ್)ನಿಂದಾಗಿ ಮನೆ, ಅಪ್ಪ-ಅಮ್ಮನನ್ನು ಕಳೆದುಕೊಳ್ಳುವ ರಾಧಾ, ಸಾಂದರ್ಭಿಕ ಒತ್ತಡದಿಂದಾಗಿ ನಕ್ಸಲೈಟ್ ಆಗುತ್ತಾಳೆ. ಆದರೆ ರಾಧಾಳೇ ಉಸಿರು ಎಂದು ಪ್ರೀತಿಸುವ ರಿಕ್ಕಿ ( ರಕ್ಷಿತ್ ಶೆಟ್ಟಿ)ಗೆ ರಾಧಾ, ನಕ್ಸ್‌ಲೈಟ್ ಆಗಿರುವ ವಿಷಯ ತಿಳಿದು ಕುಸಿದು ಬೀಳುತ್ತಾನೆ. ಅಷ್ಟೇ ಅಲ್ಲ; ಅವಳನ್ನು ನಕ್ಸಲೈಟ್ ಗುಂಪಿನಿಂದ ವಾಪಸ್ಸು ಕರೆದುಕೊಂಡು ಬಂದು ಬಾಳ್ವೆ ನಡೆಸಲು ಪ್ರಯತ್ನಿಸುತ್ತಾನೆ. ಅವರಿಬ್ಬರೂ ತಮ್ಮ ಪ್ರೀತಿ ಉಳಿಸಿಕೊಳ್ಳುತ್ತಾರಾ? ರಾಧಾ, ನಕ್ಸಲೈಟ್ ಗುಂಪಿನಿಂದ ಹೊರ ಬರುವುದಕ್ಕೆ ಆಗುತ್ತದಾ..? ಇದು ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತದೆ.

ಸಾಧಾರಾಣ ಲವ್ ಸ್ಟೋರಿಗೆ ನಿರ್ದೇಶಕ ರಿಷಬ್ ಶೆಟ್ಟಿ ನಕ್ಸಲಿಸಂ ಝಲಕ್ ತೂರಿಸಿದ್ದಾರೆ. ಇಬ್ಬರು ಪ್ರೇಮಿಗಳಿಗೆ ಎಸ್.ಇ.ಜೆಡ್ ಹಾಗೂ ನಕ್ಸಲಿಂಸ ಯಾವ ರೀತಿ ಮಾರಕವಾಗಿ ನಿಲ್ಲುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಪ್ರೇಮಿಗಳಿಗೆ ಕೆಂಪುಗುಲಾಬಿ ಪ್ರೀತಿಯ ಸಂಕೇತ. ಆದರೆ ಇಲ್ಲಿ ಕೆಂಪು ಬಾವುಟ ತೊಟ್ಟು ಪೊಲೀಸ್ ವ್ಯವಸ್ಥೆಯ ವಿರುದ್ಧ ನಾಯಕಿ ಹೋರಾಟ ಮಾಡುತ್ತಾಳೆ. ನಿರ್ದೇಶಕರು ನಕ್ಸಲಿಸಂ ಹಾಗೂ ಎಸ್‌ಇಜೆಡ್ ಬಗ್ಗೆ ಇನ್ನಷ್ಟು ಖಚಿತ ಮಾಹಿತಿ ಕಲೆ ಹಾಕಬೇಕಿತ್ತು. ಇನ್ನಷ್ಟು ಸೂಕ್ಷ್ಮವಾಗಿ ತೋರಿಸಬೇಕಿತ್ತು. ಸಾಮಾನ್ಯ ಪ್ರೇಕ್ಷಕನಿಗೆ ಎಸ್‌ಇಜೆಡ್ ಸಂಭಾಷಣೆ ಗೊತ್ತಾಗುವುದಿಲ್ಲ. ಚಿತ್ರದಲ್ಲಿ ಸಾಧುಕೋಕಿಲಾ ಹಾಗೇ ಬಂದು ಹಾಗೇ ಹೋಗುತ್ತಾರೆ. ಆದರೆ ಅವರ ಕಾಡಿಮಿ ಚಿತ್ರಕ್ಕೆ ಪ್ಲಸ್ ಅಗಿಲ್ಲ. ಮನರಂಜನೆಯಿಂದ ದೂರ ಇರುವ ನಕ್ಸಲಿಸಂ ಹಾಗೂ ಎಸ್‌ಇಝೆಡ್ ವಿಷಯಗಳನ್ನು ಸಿನಿಮಾ ಚೌಕಟ್ಟಿಗೆ ಬಗ್ಗಿಸಿಕೊಳ್ಳುವುದು ಕಷ್ಟದ ಕೆಲಸ ಎಂಬುದು ರಿಕ್ಕಿ ಚಿತ್ರ ನೋಡಿದ ನಂತರ ಗೊತ್ತಾಗುತ್ತದೆ.

ಚಿತ್ರದ ಮೊದಲಾರ್ಧ ಹರಿಪ್ರಿಯಾ, ರಕ್ಷಿತ್ ಶೆಟ್ಟಿ ಪ್ರೀತಿಯಲ್ಲಿ ಬೀಳುವ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ. ವಿರಾಮದ ನಂತರ ಚಿತ್ರದ ನಿಜವಾದ ನಾಯಕ ಹರಿಪ್ರಿಯಾ ಎನ್ನಬಹುದು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗ ಕಾಡಿಗೆ ಹುಡುಕಿಕೊಂಡು ಬಂದರೂ ನಕ್ಸಲಿಸಂಗೆ ಗೌರವ ಕೊಡುವುದಕ್ಕಾಗಿ ನಿರ್ಭಾವುಕಳಾಗಿ ನಿಲ್ಲುವ ದೃಶ್ಯ ಚೆನ್ನಾಗಿ ಮೂಡಿ ಬಂದಿದೆ. ಭಾವುಕತೆ ಹಾಗೂ ನಿರ್ಭಾವುಕತೆ ದೃಶ್ಯಗಳಲ್ಲಿ ಹರಿಪ್ರಿಯಾ ಸಖತ್ ಸ್ಕೋರ್ ಮಾಡುತ್ತಾರೆ. ಚಿತ್ರದ ಕ್ಲೈಮಾಕ್ಸ್‌ನಲ್ಲಂತೂ ಹರಿಪ್ರಿಯಾ ನಟನೆ ನೋಡಿ ಪ್ರೇಕ್ಷಕ ಎರಡು ಹನಿ ಕಣ್ಣೀರು ಸುರಿಸುತ್ತಾನೆ. ರಕ್ಷಿತ್ ಶೆಟ್ಟಿ ನಟನೆಗೆ ಇನ್ನಷ್ಟು ಜೀವ ತುಂಬ ಬಹುದಿತ್ತು. ರಾಧಾಳ ತಂದೆಯಾಗಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ಅವರ ನಟನೆ ಸೂಪರ್. ಆದರೆ ಅವರ ಪಾತ್ರ ಆತ್ಮಹತ್ಯೆ ಮಾಡಿಕೊಳ್ಳುವುದು ಅನಾವಶ್ಯಕ ಅನಿಸುತ್ತದೆ. ಈ ಪಾತ್ರದ ಬಗ್ಗೆ ನಿರ್ದೇಶಕರು ಇನ್ನಷ್ಟು ವರ್ಕ್ ಮಾಡಬಹುದಿತ್ತು.

ಅರ್ಜುನ್ ಜನ್ಯ ಸಂಗೀತ ಈ ಚಿತ್ರದಲ್ಲಿ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿಲ್ಲ. ಯಾವ ಹಾಡುಗಳು ಗುನುಗುವಂತಿಲ್ಲ. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಕ್ಯಾಮೆರಾ ವರ್ಕ್ ಸಾಧಾರಾಣ. ಎಡಿಟಿಂಗ್‌ನಲ್ಲಿ ಅಂಥಹ ವಿಶೇಷತೆ ಇಲ್ಲ. ಸುದೀಪ್ ಎರಡು ಕಡೆ ವಾಯ್ಸ್ ಓವರ್ ಕೊಟ್ಟು ತಮ್ಮ ಧ್ವನಿ ಮೂಲಕವೇ ಚಪ್ಪಾಳೆ ಗಿಟ್ಟಿಸುತ್ತಾರೆ. ಮನರಂಜನಯೇ ಪ್ರಧಾನ ಎಂದು ಬಯಸುವ ಪ್ರೇಕ್ಷಕನಿಗೆ ರಿಕ್ಕಿ ಉಪ್ಪಿಲ್ಲದ ಅಡುಗೆ ಅನಿಸಬಹುದು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>