Quantcast
Channel: VijayKarnataka
Viewing all articles
Browse latest Browse all 6795

ಬಿಡದಿ ಕೈಗಾರಿಕಾ ಅಭಿವೃದ್ಧಿಗೆ ಯೋಜನೆ

$
0
0

ಬಿಡದಿ ಕೈಗಾರಿಕಾ ಒಕ್ಕೂಟದಿಂದ (ಬಿಐಎ) ಸಮಗ್ರ ಯೋಜನೆ / 2018ಕ್ಕೆ ಸಮಗ್ರ ಅಭಿವೃದ್ಧಿಯ ಗುರಿ

ರಾಮನಗರ: ಬಿಡದಿ ಕೈಗಾರಿಕೆಗಳ ಒಕ್ಕೂಟದ(ಬಿಐಎ) ನೇತತ್ವದಲ್ಲಿ ಬಿಡದಿಯನ್ನು ಮಾದರಿ ಕೈಗಾರಿಕಾ ಪ್ರದೇಶ ವನ್ನಾಗಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಬಿಐಎ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯಾನಿವಾಹಕ ಅಧಿಕಾರಿ ಕೆ.ವಿ. ರಾಜೇಂದ್ರ ಹೆಗ್ಡೆ ಹೇಳಿದರು.

ಬಿಡದಿಯ ಟೊಯೋಟಾ ಸಂಸ್ಥೆಯ ಆವರಣದಲ್ಲಿರುವ ಬಿಐಎ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, '' ಕೈಗಾರಿಕೆಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸರಕಾರವನ್ನು ಮಾತ್ರ ಅವಲಂಬಿ ಸುವುದು ಸೂಕ್ತವಲ್ಲ. ಆದ್ದರಿಂದ ಬಿಡದಿ ಕೈಗಾರಿಕೆಗಳ ಒಕ್ಕೂಟವನ್ನು ಈಗ ಅಸ್ತಿತ್ವಕ್ಕೆ ತರಲಾಗಿದೆ '' ಎಂದರು.

''1998ರಲ್ಲಿ ಬಿಡದಿ ಕೈಗಾರಿಕಾ ಪ್ರದೇಶ ಕಾರ್ಯಾರಂಭವಾಗಿದೆ. ಆದರೆ, ಕಳೆದ 15 ವರ್ಷಗಳಲ್ಲಿ ಕೈಗಾರಿಕಾ ಪ್ರದೇಶ ನಿರೀಕ್ಷಿಸಿದಷ್ಟು ಅಭಿವೃದ್ಧಿ ಹೊಂದಿಲ್ಲ. ಸಾಕಷ್ಟು ಮೂಲ ಸೌಲಭ್ಯಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಉದ್ಯಮಿಗಳ ಸಮಸ್ಯೆಗಳನ್ನು ಉದ್ಯಮಿಗಳೇ ಬಗೆಹರಿ ಸಿಕೊಳ್ಳಲು ರಚಿಸಿಕೊಂಡಿರುವ ಬಿಐಎ ಒಕ್ಕೂಟಕ್ಕೆ ಈಗಾಗಲೇ ಬಿಡದಿ ಕೈಗಾರಿಕಾ ಪ್ರದೇಶದ 92 ಕಂಪನಿಗಳು ಕೈಜೋಡಿಸಿವೆ '' ಎಂದರು.

ಬಿಡದಿ ಕೈಗಾರಿಕೆ ಪ್ರದೇಶದಲ್ಲಿನ ಕೈಗಾರಿಕೆ ಗಳ ಸಂಪೂರ್ಣ ಮಾಹಿತಿ, ಸಮಸ್ಯೆಗಳ ಪಟ್ಟಿ ಮಾಡಲಾಗಿದ್ದು, ಎಲ್ಲ ಸಂಸ್ಥೆಗಳ ಪ್ರತಿನಿಧಿಯಾಗಿ ಬಿಐಎ ಸರಕಾರದೊಂದಿಗೆ ವ್ಯವಹರಿ ಸಲಿದೆ. ಸಮುದಾಯ ಅಭಿವದ್ಧಿ ಕಾರ್ಯ ಕ್ರಮಗಳಿಗೆ ಪ್ರಾರಂಭಿವಾಗಿ 19 ಗ್ರಾಮಗಳನ್ನು ಒಳಗೂಡಿಸಲಾಗಿದೆ. ಈಗಾಗಲೇ ಸರಕಾ ದಿಂದ ದೊರೆಯುವ ಅನುದಾನವನ್ನು ಸಮರ್ಪಕವಾಗಿ ಬಳಸಲು ನೆರವಾಗು ವುದಲ್ಲದೇ ನಂತರ ನಮ್ಮ ಬಿಐಎಯೂ ಸಹ ಅನುದಾನವನ್ನು ವಿನಿಯೋಗಿಸಲಿದೆ ಎಂದರು. ಕಷಿ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವ್ಯವಸಾಯದಲ್ಲಿ ನೂತನ ಪ್ರಯೋಗಗಳನ್ನು ಮಾಡಲು ಸಹಕಾರ ನೀಡಲಾಗುವುದು. ಬಿಐಎ ರೂಪಿಸಿರುವ ಅಭಿವದ್ಧಿ ಯೋಜನೆ ಯನ್ನು ಅನುಷ್ಠಾನಕ್ಕೆ ತರಲು 100 ಕೋಟಿ ರೂ ಅನುದಾನದ ಅಗತ್ಯವಿದೆ ಎಂದೆರು.

ಈ ವೇಳೆ ಬಿಐಎನ ಸಮುದಾಯ ಅಭಿವದ್ಧಿ ಕಾರ್ಯಕ್ರಮ ನಿದೇರ್ಶಕರಾದ ಎಂ.ಪಿ. ಕಾಮತ್ ಮತ್ತಿತರು ಹಾಜರಿದ್ದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>