Quantcast
Channel: VijayKarnataka
Viewing all articles
Browse latest Browse all 6795

ಐಸಿಸ್ ವಿರುದ್ಧ ಹಿಂದೂಧರ್ಮ ಸೇನೆ

$
0
0

ಐಸಿಸ್ ವಿರುದ್ಧ ಸಮರಕ್ಕೆ ಧರ್ಮಸೇನೆ ಸಿದ್ಧ

ಮೀರತ್: ಐಸಿಸ್ ವಿರುದ್ಧ ಹೋರಾಡಲು ಉತ್ತರ ಪ್ರದೇಶದಲ್ಲಿ 15,000 ಸದಸ್ಯ ಬಲದ ಧರ್ಮಸೇನೆ ಸಜ್ಜುಗೊಂಡಿದೆ. ದೇಶದ ರಾಜಧಾನಿ ದಿಲ್ಲಿಯ ಹೊರವಲಯದಿಂದ ಹಿಡಿದು ಉತ್ತರಾಖಂಡ ಗಡಿಯ ವರೆಗಿನ ಪ್ರದೇಶದಲ್ಲಿ ಸಕ್ರಿಯವಾಗಿರುವ ಹಿಂದು ಸ್ವಾಭಿಮಾನ ಸಂಘಟನೆಯು ಭಾರತದಲ್ಲೀಗ ತಳವೂರಲು ಯತ್ನಿಸುತ್ತಿರುವ ಐಸಿಸ್ ಉಗ್ರ ಸಂಘಟನೆಯ ವಿರುದ್ಧ ಹೋರಾಡಲು ಧರ್ಮಸೇನೆಯನ್ನು ಸಿದ್ಧಪಡಿಸಿದೆ. ಈ ಸೇನೆಯಲ್ಲಿ ಸುಮಾರು 15 ಸಾವಿರ ಮಂದಿ ಯೋಧರು ಸಮರಕ್ಕೆ ಸಿದ್ಧಗೊಂಡಿದ್ದಾರೆ.

ಐಸಿಸ್ ಸಂಚು ತಡೆಯುವುದು ಗುರಿ

2020ರೊಳಗಾಗಿ ಉತ್ತರ ಪ್ರದೇಶದ ಪಶ್ಚಿಮ ಭಾಗವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದಾಗಿ ಐಸಿಸ್ ಉಗ್ರರು ಈಗಾಗಲೇ ಘೋಷಿಸಿದ್ದಾರೆ. ಈ ಸಂಚನ್ನು ಭಗ್ನಗೊಳಿಸುವುದೇ ಧರ್ಮಸೇನೆಯ ಗುರಿ.

ಸಮರಕಲೆಗಳಲ್ಲಿ ಪರಿಣತಿ

ಧರ್ಮಸೇನೆಯ ಯೋಧರು ಸಾಮಾನ್ಯರಲ್ಲ. ಕತ್ತಿವರಸೆಯಂಥ ಸಾಂಪ್ರದಾಯಿಕ ಸಮರಕಲೆಯಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವುದರಲ್ಲಿ ಪರಿಣತಿ ಸಾಧಿಸುತ್ತಿದ್ದಾರೆ. ಧರ್ಮಸೇನೆಯ ಯೋಧರಿಗೆ ಹೋರಾಟದ ತರಬೇತಿ ನೀಡುವುದಕ್ಕಾಗಿಯೇ ಹಿಂದು ಸ್ವಾಭಿಮಾನ್ ಸಂಘಟನೆಯು ಪಶ್ಚಿಮ ಉತ್ತರ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಯುದ್ಧ ತರಬೇತಿ ಶಿಬಿರಗಳನ್ನು ಆರಂಭಿಸಿದೆ. ಧರ್ಮ ಸೇನೆಯ ಸೈನಿಕರಾಗುವುದಕ್ಕೆ ವಿವಿಧ ಜಾತಿಗಳಿಗೆ ಸೇರಿದ ಮಹಿಳೆಯರು, ಪುರುಷರು ಮುಂದೆ ಬಂದಿದ್ದಾರೆ. ಎಂಟು ವರ್ಷದ ಮಕ್ಕಳನ್ನೂ ಕೂಡ ಸೇನೆಗೆ ಸೇರಿಸಿಕೊಳ್ಳಲಾಗುತ್ತಿದೆ. ತರಬೇತಿ ಶಿಬಿರಗಳು ಪಶ್ಚಿಮ ಉತ್ತರ ಪ್ರದೇಶದ ಬಾಮ್‌ಹೇತಾ ಮತ್ತು ರೋರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಗೊಂಡಿವೆ. ಮೀರತ್ ನಗರದಲ್ಲಿ ಮೂರು ಮತ್ತು ಮುಜಫ್ಫರನಗರ ಜಿಲ್ಲೆಯಲ್ಲಿ ಐದು ತರಬೇತಿ ಶಿಬಿರಗಳು ಇವೆ ಎಂದು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>