Quantcast
Channel: VijayKarnataka
Viewing all articles
Browse latest Browse all 6795

ದಿಲ್‌ವಾಲೆ: ಫ್ಯಾಮಿಲಿ ದಿಲ್ ಕದ್ದ ದಿಲ್‌ವಾಲೆ

$
0
0

ಚಿತ್ರ : ದಿಲ್‌ವಾಲೆ

- ಎಚ್. ಮಹೇಶ್

ನಿರ್ದೇಶಕ ರೋಹಿತ್ ಶೆಟ್ಟಿ ಚಿತ್ರಗಳು ಎಂದರೆ ಸಖತ್ ಕಾಮಿಡಿ, ಆಕ್ಷನ್ ಸೀನ್‌ಗಳು, ಒಂದಷ್ಟು ಲವ್ ಸೀನ್‌ಗಳಿರುತ್ತವೆ. ಮಾಸ್ ಪ್ರೇಕ್ಷಕರಿಗೆ ಬೇಕಾಗುವ ಮಸಾಲೆ ಅಂಶಗಳೂ ಚಿತ್ರದಲ್ಲಿರುತ್ತವೆ. ದಿಲ್‌ವಾಲೆ ಚಿತ್ರ ಕೂಡ ಅದಕ್ಕೆ ಹೊರತಲ್ಲ. ಕಾರುಗಳ ಚೇಸಿಂಗ್ ಇಲ್ಲಿಯೂ ಜೋರಾಗಿದೆ. ಸುಂದರ ತಾಣಗಳು ಕಣ್ಣಿಗೆ ಖುಷಿ ಕೊಡುತ್ತವೆ. ಕೊನೆಯ 20 ನಿಮಿಷವನ್ನು ಫ್ಯಾಮಿಲಿ ಪ್ರೇಕ್ಷಕರಿಗೆಂದೇ ಮೀಸಲಿಟ್ಟಿದ್ದಾರೆ. ಜಾನಿ ಲಿವರ್ ಕಾಮಿಡಿ ದೃಶ್ಯಗಳಂತೂ ಪ್ರೇಕ್ಷಕರನ್ನು ನಗೆಯ ಅಲೆಯಲ್ಲಿ ತೇಲಿಸಿವೆ.

ವರು (ವರುಣ್ ದಾವನ್) ಕಾರು ಡಿಸೈನರ್. ಇಶಿತಾಳನ್ನು (ಸನೂನ್) ತನ್ನ ಕಾರಿನಲ್ಲಿ ಡ್ರಾಪ್ ಮಾಡಿದ ಕ್ಷಣದಿಂದ ಲವ್‌ನಲ್ಲಿ ಬೀಳುತ್ತಾನೆ. ಅವಳನ್ನೇ ಮದುವೆಯಾಗಬೇಕು ಎಂದು ಬಯಸುತ್ತಾನೆ. ಅದನ್ನು ತನ್ನ ಅಣ್ಣ ರಾಜ್ ( ಶಾರುಖ್ ಖಾನ್) ಬಳಿ ಹೇಳಿಕೊಳ್ಳುತ್ತಾನೆ. ರಾಜ್‌ಗೂ ಒಂದು ಫ್ಲಾಶ್‌ಬ್ಯಾಕ್ ಇದೆ. ಬಲ್ಗೇರಿಯಾದ ರೌಡಿ ಗ್ಯಾಂಗ್ ಜತೆ ಕಾದಾಟ ನಡೆಸಿರುತ್ತಾನೆ. ಅಲ್ಲಿದ್ದಾಗಲೇ ಮೀರಾಳನ್ನು (ಕಾಜೋಲ್) ಲವ್ ಮಾಡುತ್ತಿರುತ್ತಾನೆ. ಆದರೆ ಅವಳನ್ನು ಪಡೆಯುವುದು ಸುಲಭವಾಗಿರುವುದಿಲ್ಲ. ಕಾರಣ ರಾಜ್ ಫ್ಯಾಮಿಲಿಗೂ ಮೀರಾ ಫ್ಯಾಮಿಲಿಗೂ ಸಂಘರ್ಷ ಇರುತ್ತದೆ.

ಇಲ್ಲಿ ವರು ಹಾಗೂ ಇಶಿತಾ , ಹಳೆಯ ಲವ್ವರ್‌ಗಳನ್ನು ಒಂದು ಮಾಡುವ ಕೆಲಸ ಮಾಡುತ್ತಾರೆ. ಇಶಿತಾಳೇ ಮೀರಾ ತಂಗಿ ಎಂದು ಗೊತ್ತಾಗುತ್ತದೆ. ಹೀಗೆ ಚಿತ್ರದ ಕತೆ ಸಾಗುತ್ತದೆ.

ಚಿತ್ರದ ಕತೆ ವೆರಿ ಸಿಂಪಲ್. ಚಿತ್ರಕತೆ ಕೂಡ ಅಷ್ಟಾಗಿ ಬಿಗಿಯಾಗಿಲ್ಲ. ಆದರೆ ಶಾರುಖ್, ಕಾಜೋಲ್ ಲವ್ ಸೀನ್‌ಗಳು, ಅವರಿಬ್ಬರ ಹಾಡು , ಕೊರಿಯಾಗ್ರಫಿ ಸೂಪರ್ ಆಗಿ ಮೂಡಿ ಬಂದಿದೆ. ಇದುವರೆಗೂ ಯಾರೂ ನೋಡಿರದ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಶಾರುಖ್, ಕಾಜೋಲ್ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿದೆ. ಭಾವನಾತ್ಮಕ ದೃಶ್ಯಗಳಲ್ಲಿ ಇವರನ್ನು ಮೀರಿಸುವವರೇ ಇಲ್ಲ. ವರುಣ್ ದಾವನ್ ಎಂದಿನಂತೆ ಹ್ಯಾಂಡ್‌ಸಮ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್, ಕಾಜೋಲ್ ಡ್ರೆಸ್‌ಗಳು ಸೂಪರ್ಬ್‌. ಆ್ಯಕ್ಷನ್ ಸೀನ್‌ಗಳು ಎದೆ ಝಲ್ ಅನಿಸುವಂತೆ ಚಿತ್ರಿಸಲಾಗಿದೆ. ರೋಹಿತ್ ಶೆಟ್ಟಿ ಸಿನಿಮಾಗಳು ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬದ್ಧವಾಗಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>