ತನಿಷ್ಕಾ ಕಪೂರ್ ತಮ್ಮ ಸಿನಿಮಾ ಹಿಟ್ ಆದ ಹಿನ್ನೆಲೆಯಲ್ಲಿ ಸಂತಸದಿಂದಿದ್ದಾರೆ.
ಮುಂಬರುವ ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್ ಪಟ್ಟಿ ಮಾಡಿಕೊಂಡಿದ್ದಾರೆ.
ಆ ಪಟ್ಟಿಯ ಮೊದಲ ಲಿಸ್ಟ್ನಲ್ಲಿರುವುದು ಸ್ಪಷ್ಟವಾಗಿ ಕನ್ನಡ ಮಾತನಾಡಲು ಕಲಿಯುವುದು. ಅಂದಹಾಗೆ, ತನಿಷ್ಕಾ ತಮ್ಮ ಸಿನಿಮಾ ಫಸ್ಟ್ ರ್ಯಾಂಕ್ ರಾಜುವಿನಲ್ಲಿ ಕನ್ನಡ ಬಾರದ ಹುಡುಗಿ. ರಿಯಲ್ ಲೈಫ್ನಲ್ಲೂ ತನಿಷ್ಕಾಗೆ ಅಷ್ಟಾಗಿ ಕನ್ನಡ ಬರುವುದಿಲ್ಲ. ಮಿಸ್ ಮಂಗಳೂರು ಪಟ್ಟ ಮುಡಿಗೇರಿಸಿಕೊಂಡಿರುವ ಮಾಡೆಲ್ ಫೀಚರ್ ಹೊಂದಿರುವ ತನಿಷ್ಕಾ ಎಲ್ಲರಂತೆ ತಾನು ಕೂಡ ಪ್ರತಿ ವರ್ಷ ರೆಸಲ್ಯೂಷನ್ ಕೈಗೊಳ್ಳುತ್ತೆನೆ. ಈ ಬಾರಿ ಆಸಕ್ತಿಯಿಂದ ಕಂಪ್ಲೀಟ್ ಕನ್ನಡದಲ್ಲಿ ಮಾತನಾಡಲು ಕಲಿಯುತ್ತೇನೆ ಎಂದು ಲವಲವಿಕೆಗೆ ತಿಳಿಸಿದ್ದಾರೆ.
↧
ತನಿಷ್ಕಾ ಕನ್ನಡ ಪ್ರೇಮ
↧