Quantcast
Channel: VijayKarnataka
Viewing all articles
Browse latest Browse all 6795

ದಾರಿ ದೀಪ: ಭ್ರಮೆಯಿಂದ ಹೊರ ಬನ್ನಿ

$
0
0

*ರಾಶಿ ಪ್ರಕಾರ ಹೆಸರಿಟ್ಟರೆ ಅದೃಷ್ಟ ಎನ್ನುವರು. ಮಗಳಿಗೆ ಬದಲಾಯಿಸಬೇಕೆಂದು ನಿಮ್ಮಲ್ಲಿ ವಿವರ ಕಳಿಸಿದ್ದೇನೆ.
- ಸಿ.ಮಂಜು, ಬಿಡದಿ

ಜಗದಲ್ಲಿ ಪ್ರತಿಯೊಬ್ಬರಿಗೆ ಒಂದೊಂದು ಭ್ರಮೆ. ಹಲವರಿಗೆ ಶಾಸ್ತ್ರದ ಭ್ರಮೆ, ಹಲವರಿಗೆ ಶಸ್ತ್ರದ ಭ್ರಮೆ! ಸಮಸ್ಯೆ ಶಾಸ್ತ್ರ-ಶಸ್ತ್ರದ್ದಲ್ಲ-ಭ್ರಮೆಯದ್ದು ಮಾತ್ರ! ಅದೇ ಬಿಡಲೊಲ್ಲರು ಜನ, ಏನು ಮಾಡೋದು?! ಹಿಂದಿನ ಕಾಲದಲ್ಲಿ ಬರೆದು ಡೇಟಾ ಸ್ಟೋರ್ ಮಾಡುವುದಕ್ಕಾಗುತ್ತಿರಲಿಲ್ಲ. ಹೀಗಾಗಿ ಪ್ರತಿ ರಾಶಿಗೆ ಕೆಲ 'ಅಕ್ಷರ-ನಾಮ-ನಕ್ಷತ್ರ' ಇಟ್ಟು ಅದರ ಪ್ರಕಾರ ನೆನಪಲ್ಲಿ ಉಳಿಯುತ್ತಿತ್ತು. ಹಾಗಾಗಿ ರಾಶಿ ಜನ್ಮನಾಮ ಪದ್ಧತಿ ಬಂತೇ ಹೊರತು, ಅದೃಷ್ಟಕ್ಕಾಗಿ ಅಲ್ಲ. ಮೌಢ್ಯ ಇರುವುದು ಅನರಿವಿನಿಂದ ಮತ್ತದರ ಇಂಥ ಭ್ರಮೆಯಿಂದ ಹೊರತು, ಶಾಸ್ತ್ರದಲ್ಲಿ ಮೌಢ್ಯವಿಲ್ಲ.

*ಮಗನು ಓದಿನಲ್ಲಿ ಹಿಂದುಳಿದು, ಬುದ್ಧಿವಂತನಾಗಿಯೂ ಉದ್ಧಟನಾಗುತ್ತಿರುವ. ದಯ ಮಾಡಿ ಪರಿಹಾರ ಹೇಳಿ...

- ಓಂಕಾರ್ ನಾಯಕ್, ಭದ್ರಾವತಿ

ಜಗದಲ್ಲಿ ಬುದ್ಧಿವಂತರು ಮಾತ್ರ ಉದ್ಧಟರಾಗುವರೇ ಹೊರತು, ಪೆದ್ದರಲ್ಲ, ನೆನಪಿರಲಿ. ಜನ್ಮ ರಾಹು ಕುಜ ಬಾಧೆಯಿಂದ ಹೀಗಾಗಿದೆ. ಸರಿಯಾಗುವನು, ಸಮಾಧಾನವಿರಲಿ. ಈತನಿಗೆ ಡಿಪ್ಲೊಮಾ ಎಂಜಿನಿಯರಿಂಗ್‌ಗಿಂತಲೂ ಪ್ಯಾರಾ ಮೆಡಿಕಲ್, ಇಂಟೀರಿಯರ್ ಡಿಸೈನಿಂಗ್, ಈವೆಂಟ್ ಮಾನೇಜ್‌ಮೆಂಟ್ ಆಗಿ ಬರುತ್ತದೆ. ಸಾವಧಾನ. ತಜ್ಞರಿಂದ ಆಪ್ತ ಸಲಹೆ ಕೊಡಿಸಿ, ಲೈನ್ ಬದಲಾಯಿಸಿ. ಹಾಗೆಯೇ ಶ್ರೀ ಧರ್ಮಸ್ಥಳ ದೇವಾಲಯದಲ್ಲಿ 'ತೀರ್ಥ ಪ್ರೋಕ್ಷಣೆ, ತುಲಾಭಾರ ಸೇವೆ' ಮಾಡಿಸಿ. ದಾರಿಯಾಗುವುದು.

*ಡಿಗ್ರಿ ಈಗ ಸೇರಬೇಕಷ್ಟೆ. ಯಾವ ವಿಷಯ ನನಗೆ ಒಳ್ಳೆಯದು ತಿಳಿಸಿ ಗುರುಗಳೆ.

- ಮಾನಸಿ, ಬ್ರಹ್ಮಾವರ, ದ.ಕ

ನಿಮ್ಮ ರುಚಿ ನೀವೇ ಮೊದಲು ಅರಿವುದು- ಇತರರಲ್ಲ. ಆದರೂ ಜಾತಕ ಫಲ ರೀತ್ಯಾ ನೀವು ಕಾಮರ್ಸ್ ತೆಗೆದುಕೊಂಡು ಮುಂದೆ ಜರ್ನಲಿಸಂ ಮಾಡಬಹುದು. ಅಥವಾ ಉಪನ್ಯಾಸಕ ವೃತ್ತಿ ಓದಬಹುದು. ಏಕ ಮನಸ್ಕರಾಗಿ ಹೆಚ್ಚು ಪರಿಶ್ರಮ ಹಾಕಬೇಕಾಗುವುದು. ಗಮನವಿರಲಿ.

*ತಂದೆಯ ಅಕಾಲ ಮರಣದಿಂದ ಕಂಗೆಟ್ಟು ಹೇಗೋ ಕೆಲಸ ಹಿಡಿದು ಜೀವನ (ಸಮಸ್ಯೆ ವಿವರ ಬಹಳವಿದೆ).

-ಸೌಮ್ಯಾ ಶೆಟ್ಟಿ, ಉಡುಪಿ

ನಿಮ್ಮಂತೆ ನೊಂದವರ ಸಮಾಧಾನಕ್ಕೆಂದೇ ದಾರಿ ದೀಪ ಇರುವುದು. ಬಹಳ ವಿನಂತಿಸಿಕೊಂಡಿದ್ದೀರಿ. ಅದು ಬೇಡ. ಹಲವು ಕಷ್ಟಗಳ ನೋಡಿ ಈಗ ಕೆಲಸಕ್ಕೆ ಪುನಃ ಸೇರಿರುವಿರಿ. ಮುಂದುವರಿಸಿ. ಜಾತಕ ಫಲ, ದೇವರ ದಯೆ ಒಳ್ಳೆಯದಿದೆ. ಧೈರ್ಯವಾಗಿರಿ. 'ಈಗ ಮದುವೆ ಬೇಡ. ಹುಡುಗನು ದುಶ್ಚಟ ಬಿಟ್ಟು ಎಲ್ಲರ ಮುಂದೆ ಶ್ರೀ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿ, ನಾರ್ಮಲ್ ಆದ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬಂದರೆ ಮದುವೆ, ಇಲ್ಲವಾದಲ್ಲಿ ಬೇಡ.

*ಓದಿನಲ್ಲಿ ಹಿನ್ನಡೆ, ಬಹಳ ಗೊಂದಲ-ಕುಟುಂಬದ ನಾಗ ದೋಷವೂ ಇದೆ. ಪರಿಹಾರ ಹೇಳಿ ಗುರುಗಳೇ...

-ನಾಗರಾಜ, ಬೆಳಗಾವಿ

ಲಗ್ನ ಚರ್ತುಗ್ರಹದ ನಿರ್ಬಲ ಬುಧನ ದೆಸೆಯ ಪರಿಣಾಮವಿದು. ತಾಳ್ಮೆ ಇರಲಿ, ಓದು-ಯತ್ನ ಬಿಡದೆ ಮುಂದುವರಿಸಿ, ಸಾಧನೆ ಮಾಡಿ, ದೈವಾನುಗ್ರಹ ಇದ್ದು ಒಳಿತಾಗುವುದು. ತಂದೆಯಿಂದಾದ ನಾಗಹತ್ಯಾ ದೋಷಕ್ಕೆ ಊರಲ್ಲೇ ಯೋಗ್ಯ ಪುರೋಹಿತರಿಂದ ನಾಗ ಪ್ರತಿಷ್ಠೆ ಮಾಡಿಸಿ, ಶಾಂತಿ ಮಾಡಿಸಿ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಬಟ್ಟೆ ಕಳಚಿ ಸೆಕ್ಸ್ ಗೆ ಕರೆದ ಮಂಗಳಮುಖಿಯರು


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>