Quantcast
Channel: VijayKarnataka
Viewing all articles
Browse latest Browse all 6795

ದಿನಭವಿಷ್ಯ ಮಾರ್ಚ್‌ 8, 2017

$
0
0

ಮೇಷ:- ಆರೋಗ್ಯ ವಿಚಾರಿಸಲು ಸ್ನೇಹಿತರು ಬರುವ ಸಾಧ್ಯತೆಯಿದೆ. ಆದರೆ ಅಪರಿಚಿತ ವ್ಯಕ್ತಿಗಳ ಭೇಟಿಗೆ ಅವಕಾಶ ಕೊಡಬೇಡಿ. ನಿಮ್ಮ ಸಮಸ್ಯೆಯನ್ನು ಅವರು ಭೂತಗನ್ನಡಿಯಲ್ಲಿ ನೋಡಿ ಅಪಪ್ರಚಾರ ಮಾಡುವರು. ರಾಜಕೀಯ ಜನರಿಗೆ ಟೀಕೆ ತಪ್ಪವು.

ವೃಷಭ:- ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಕೌಟುಂಬಿಕವಾಗಿ ಉತ್ತಮ ದಿನ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಮಿಥುನ:- ಆಸ್ತಿ ವ್ಯವಹಾರಗಳು ಚರ್ಚೆ ಬರಲಿವೆ. ನಿಮ್ಮ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿಕೊಳ್ಳಿರಿ. ಸಹೋದರರ ನಡುವೆ ವೈಷಮ್ಯ ಕಡಿಮೆ ಆಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕಟಕ:- ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವಂತೆ ಇಂದು ನೀವು ಮಾಡುವ ಕೆಲಸದಲ್ಲಿ ಪೂರ್ಣವಿಶ್ವಾಸ ತೋರಿರಿ. ಇದರಿಂದ ಒಳಿತಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಿಂಹ:- ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣವಿರುವುದು. ಕಚೇರಿ ಕೆಲಸಗಳಲ್ಲಿನ ಬಿಕ್ಕಟ್ಟು ನಿವಾರಣೆ ಆಗಲಿದೆ. ಹಿತ ಚಿಂತಕರೊಡನೆ ಸಮಾಲೋಚನೆ ನಡೆಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕನ್ಯಾ:- ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆಯಿದೆ. ವ್ಯಾಪಾರ-ವ್ಯವಹಾರದಲ್ಲಿ ಎಂದಿಗಿಂತ ಲಾಭಾಂಶ ಹೆಚ್ಚಾಗಲಿದೆ. ಮಡದಿ ಮಕ್ಕಳ ಜೊತೆ ಸಂತಸದ ಜೀವನವನ್ನು ಕಳೆಯುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ತುಲಾ:- ಆರ್ಥಿಕ ಅಭಿವೃದ್ಧಿ ಸ್ವಲ್ಪ ನಿಧಾನವಾದರೂ ಸಂತೃಪ್ತಿಯ ಬದುಕು ನಿಮ್ಮದಾಗುವುದು. ಹೊಸ ಹೊಸ ಆಲೋಚನೆಗಳು ನಿಮ್ಮ ಕಾರ್ಯಕ್ಷ ಮತೆಗೆ ಒರೆಗಲ್ಲಾಗಿ ನಿಲ್ಲುವುದು. ಸ್ನೇಹಿತರ ಸಹಾಯ ಉತ್ತಮವಾಗಿರುವುದು.

ವೃಶ್ಚಿಕ:- ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಮಿತ್ರರ ಸಹಕಾರವೂ ದೊರೆಯುವುದು. ಹಿರಿಯರ ಆಶೀರ್ವಾದದಿಂದ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು.

ಧನಸ್ಸು:- ಆರೋಗ್ಯ ಉತ್ತಮವಿರುವುದು. ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು. ಇಂದು ನಿಮಗೆ ಸಂತೋಷದ ದಿನ. ಆದಾಗ್ಯೂ ಗುರು-ಹಿರಿಯರ ಮಾತನ್ನು ಮೀರುವುದು ಉಚಿತವಲ್ಲ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.

ಮಕರ:- ಉದ್ಯೋಗಿಗಳು ತಮ್ಮ ಬೇಡಿಕೆ ಈಡೇರುವುದಕ್ಕಾಗಿ ಮುಷ್ಕರ ಹೂಡುವುದು ಅನಿವಾರ್ಯವಾಗುವುದು. ಗೆಳೆಯರು ನಿಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವರು. ಸಂಜೆಯ ವೇಳೆಗೆ ಅಧಿಕಾರ ವರ್ಗದವರು ನಿಮ್ಮ ಬೇಡಿಕೆಯನ್ನು ಈಡೇರಿಸುವರು.

ಕುಂಭ:- ನೌಕರಿಯಲ್ಲಿ ಸಮಸ್ಯೆಗಳು ಎದುರಾಗುವ ಸಂಭವವಿದ್ದು ಅಧೈರ್ಯದಿಂದ ಕೂಡುವ ಕಾಲವಲ್ಲ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮೀನ:- ಕುಟುಂಬದಲ್ಲಿ ಉತ್ತಮ ಪ್ರಗತಿ ಕಾಣುವುದು. ಕಚೇರಿಯಲ್ಲಿನ ಕೆಲಸಗಾರರು ಅಸಹಕಾರವನ್ನು ನೀಡುವರು. ಆದಾಗ್ಯೂ ಸೇವಕ ಮತ್ತು ಮಾಲಕರ ನಡುವೆ ಒಪ್ಪಂದವಾಗಿ ಸುಖವಾಗಿರುವರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>