Quantcast
Channel: VijayKarnataka
Viewing all articles
Browse latest Browse all 6795

ದಿನಭವಿಷ್ಯ: 7 ಮಾರ್ಚ್‌ 2017

$
0
0

ಮೇಷ:- ಇಂದಿನ ದಿನ ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ದೊರೆಯಲಿದೆ. ಮಂಗಳದ ಕಾರ್ಯದಲ್ಲಿ ಭಾಗವಹಿಸುವಿರಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಷಭ:- ಮನೆಯ ಅಭಿವೃದ್ಧಿಯ ಕಡೆ ಗಮನ ಹರಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳ ಪ್ರತಿಭೆಯು ಸಾರ್ವತ್ರಿಕವಾಗಿ ಅನಾವರಣಗೊಳ್ಳುವುದರಿಂದ ಮನೆ ಮಂದಿಯೆಲ್ಲಾ ಸಂತಸದಿಂದ ಸಂಭ್ರಮಿಸುವಿರಿ.

ಮಿಥುನ:- ವಿವಾಹ ಯೋಗ್ಯ ವಧು, ವರರಿಗೆ ಇಂದು ಕಂಕಣಭಾಗ್ಯ ಒದಗಿ ಬರುವುದು. ಷೇರು ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಕುಲದೇವರ ಪ್ರಾರ್ಥನೆ ಮಾಡಿರಿ.

ಕಟಕ:- ಯೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ. ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಸಲ್ಲದು. ಕುಟುಂಬದ ಸದಸ್ಯರ ನಡುವೆ ಇರುವ ತಪ್ಪು ಕಲ್ಪನೆಗಳನ್ನು ಬಗೆಹರಿಸಿಕೊಳ್ಳಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಿಂಹ:- ಈ ದಿನ ನಿಮ್ಮ ಕಾರ್ಯ ಸಾಧನೆಗೆ ಉತ್ತಮ ದಿನವಾಗಿದೆ. ಆದ್ದರಿಂದ ಈ ದಿನವನ್ನು ಪೂರ್ಣ ಪ್ರಮಾಣವಾಗಿ ಉಪಯೋಗಿಸಿಕೊಳ್ಳಿರಿ. ಇದಕ್ಕೆ ನಿಮ್ಮ ಮನೆಯವರ ಸಹಕಾರವೂ ದೊರೆಯಲಿದೆ. ಹಣಕಾಸು ಕೂಡಾ ಒದಗಿ ಬರುವುದು.

ಕನ್ಯಾ:- ಭವಿಷ್ಯದಲ್ಲಿ ಒಳ್ಳೆಯ ಯೋಜನೆಗಳಿಗೆ ಅವಕಾಶವಿದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಸಿಗುವುದು. ಬೆಲೆಬಾಳುವ ವಸ್ತುಗಳ ಖರೀದಿ ಅಥವಾ ಉಡುಗೊರೆ ರೂಪವಾಗಿ ಕೈಸೇರುವ ಸಾಧ್ಯತೆಯಿದೆ. ಹಿರಿಯರ ಆಶೀರ್ವಾದ ಪಡೆಯಿರಿ.

ತುಲಾ:- ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಅನುಕೂಲವಿದೆ. ಗೃಹೋಪಕರಣಗಳ ಖರೀದಿಯಾಗುವುದು. ಉದ್ಯೋಗಿಗಳಿಗೆ ಶುಭ ಫಲಗಳು ಉಂಟಾಗುವುದು. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಕೌಟುಂಬಿಕವಾಗಿ ನೆಮ್ಮದಿಯ ದಿನ.

ವೃಶ್ಚಿಕ:- ಭರವಸೆಯ ಅವಕಾಶವೊಂದರಿಂದ ಉತ್ತೇಜಿತರಾಗುತ್ತೀರಿ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಸಿಗುವುದು. ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತವಾದ ಆದಾಯ ತೋರಿಬರುವುದು. ಆಭರಣಗಳಿಂದ ಲಾಭವಿದೆ.

ಧನಸ್ಸು:- ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಹಣಕಾಸಿನ ವಿಷಯದಲ್ಲಿ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿರಿ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರಕಿ ಗೊಂದಲ ನಿವಾರಣೆ ಆಗುವುದು.

ಮಕರ:- ಉತ್ತಮ ಫಲಗಳನ್ನು ಕಾಣುವಿರಿ. ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭಾಂಶ ಬರುವ ಸಾಧ್ಯತೆ ಇರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವುದು.

ಕುಂಭ:- ಮನರಂಜನೆಗಾಗಿ ಯೋಚಿಸುವ ಸಮಯವಿದೆ. ಮನೆ ಮಂದಿಯಲ್ಲಾ ಸೇರಿ ಹೊರ ಸಂಚಾರ ಕೈಗೊಳ್ಳುವಿರಿ. ಹಿರಿಯರ ಆಶೀರ್ವಾದದಿಂದ ಇಂದಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವವು.

ಮೀನ:- ಸ್ನೇಹಿತರಿಂದ ಸಹಾಯ ಪಡೆಯುವಿರಿ. ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿಯು ಸಂತಸವನ್ನು ನೀಡುವುದು. ಕೌಟುಂಬಿಕವಾಗಿ ಆಶಾದಾಯಕ ದಿನ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>