Quantcast
Channel: VijayKarnataka
Viewing all articles
Browse latest Browse all 6795

ದಿನ ಭವಿಷ್ಯ 10.3.2017

$
0
0

ಮೇಷ:- ವೃತ್ತಿಯಲ್ಲಿ ಸದಾ ಯಶಸ್ಸು ಸಿಗಲಿದೆ. ನವ ದಂಪತಿಗಳು ಹಿರಿಯರ ಅಶೀರ್ವಾದ ಪಡೆಯಿರಿ. ಸಮಸ್ಯೆಗಳ ಬಗ್ಗೆ ಈ ದಿನ ಚರ್ಚಿಸುವುದು ಸೂಕ್ತವಲ್ಲ. ಚರ-ಸ್ಥಿರ ಆಸ್ತಿ ಕೊಳ್ಳಲು ಇಂದು ಸರಿಯಾದ ಸಮಯ. ಇಡೀ ದಿನ ಉಲ್ಲಾಸದಿಂದ ಇರುವಿರಿ.

ವೃಷಭ:- ಕೆಲಸ ಕಾರ್ಯಗಳಲ್ಲಿ ಧೈರ್ಯದಿಂದ ಮುನ್ನುಗ್ಗಿರಿ. ಚಿಂತಕರಿಗೆ ಸಮಾಜದಲ್ಲಿ ವಿಶೇಷ ಗೌರವ-ಮಾನ್ಯತೆ ದೊರೆಯಲಿದೆ. ಮಗನ ಮನಸ್ಸಿನ ಬಯಕೆ ಈಡೇರುವುದು. ಮಾನಸಿಕ ತಳಮಳಗಳನ್ನು ಸ್ನೇಹಿತರಲ್ಲಿ ಹಂಚಿಕೊಂಡು ಹಗುರವಾಗಿರಿ.

ಮಿಥುನ:- ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಗೆಲುವು ದೊರೆಯುವುದು. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು. ಆದರೆ ಸ್ಥಿರಾಸ್ಥಿ ಕೊಳ್ಳಲು ಅಡೆ-ತಡೆಯುಂಟಾಗುವುದು. ಆರೋಗ್ಯ ಉತ್ತಮವಿರುವುದು.

ಕಟಕ:- ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ಸಿಗಲಿದೆ. ದೇಹಾಲಸ್ಯ ಕೊಡವಿಕೊಂಡು ಎದ್ದು ನಿಲ್ಲುವಿರಿ. ಕೆಲವರಿಗೆ ನಿವೃತ್ತಿ ನಂತರದ ಜೀವನದ ಬಗ್ಗೆ ಚಿಂತೆ ಆಗುವುದು.

ಸಿಂಹ:- ಹೊರಗಿನ ಪ್ರಪಂಚವನ್ನಷ್ಟೆ ನೋಡುವ ನಿಮಗೆ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಕೊಂಚ ಅರಿವಿರಲಿ. ಮನಸ್ಸಿನ ಮೇಲೆ ಹತೋಟಿಯಿರಲಿ. ಅನಿರೀಕ್ಷಿತ ಪ್ರಯಾಣ ನಿಮ್ಮನ್ನು ಆಯಾಸಗೊಳಿಸುವ ಸಾಧ್ಯತೆ ಇರುವುದು.

ಕನ್ಯಾ:- ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಮನೆಯಿಂದ ದೂರವಿದ್ದು ವಾಸಿಸುವ ಯೋಗ ಸಿಗುವುದು. ಹೆಚ್ಚಿನ ಜವಾಬ್ದಾರಿ ಕೆಲಸವು ನಿಮ್ಮಲ್ಲಿ ಹೆಚ್ಚಿನ ಶಿಸ್ತನ್ನು ಮೂಡಿಸುವುದು. ಕಾಲಕಾಲಕ್ಕೆ ವಿಶ್ರಾಂತಿ ಪಡೆಯಿರಿ.

ತುಲಾ:- ನೀವು ತೆಗೆದುಕೊಳ್ಳುವ ನಿರ್ಧಾರ ಸಮಯೋಚಿತವಾಗಿರಲಿ. ಕೈಗಾರಿಕೋದ್ಯಮಿಗಳಿಗೆ ನೌಕರರ ಸಮಸ್ಯೆ ಕಾಡುವುದು. ಯಂತ್ರ ಹಾಗೂ ವಿದ್ಯುತ್‌ ಉಪಕರಣಗಳಿಂದ ಆದಷ್ಟು ದೂರವಿರಿ. ತಲೆ ನೋವು ಈ ದಿನ ಕಾಡುವುದು. ಸೂಕ್ತ ಚಿಕಿತ್ಸೆ ಪಡೆಯಿರಿ.

ವೃಶ್ಚಿಕ:- ಅವಿವಾಹಿತ ಮಗನಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ. ಅನಿರೀಕ್ಷಿತ ಧನಾಗಮನ ನಿಮ್ಮನ್ನು ಆಶ್ಚರ್ಯ ಪಡಿಸಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನವಿದು. ಸ್ನೇಹಿತರ ಆಗಮನದಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.

ಧನಸ್ಸು:- ಮನೆಯಲ್ಲಿದ್ದ ಅಹಿತಕರ ವಾತಾವರಣ ದೂರವಾಗಲಿದೆ. ವಸ್ತ್ರ ವ್ಯಾಪಾರ ಜೋರಿರುವುದು. ತಾಳ್ಮೆ ಕಳೆದುಕೊಳ್ಳದಂತೆ ನೋಡಿಕೊಳ್ಳಿ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಮಕರ:- ನೀವು ವಹಿಸಲಿರುವ ತಾಳ್ಮೆ ನಾಳಿನ ಕನಸನ್ನು ನನಸು ಮಾಡುವುದು. ಮನೋಬಲ ಹೆಚ್ಚಿಸಿಕೊಳ್ಳುವಿರಿ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಚಿಂತೆ ಬೇಡ.

ಕುಂಭ:- ಗೃಹ ನಿರ್ಮಾಣ ಅಥವಾ ಅದಕ್ಕೆ ಸಂಬಂಧಪಟ್ಟ ವ್ಯಾಪಾರ, ವ್ಯವಹಾರಗಳಿಂದ ಅಧಿಕ ಲಾಭಾಂಶ ಕಂಡುಬರುವುದು. ಬರಬೇಕಿದ್ದ ಬಾಕಿ ಹಣಕಾಸು ಒದಗಿ ಬರುವುದರಿಂದ ಮುಂದಿನ ಕೆಲಸಗಳಿಗೆ ಅನುಕೂಲವಾಗುವುದು.

ಮೀನ:- ಪ್ರೇಮಿಗಳು ವಿವಾಹ ಬಂಧನಕ್ಕೆ ಸಿಲುಕುವ ಮುನ್ನ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು. ಹಿರಿಯರ ಅಪ್ಪಣೆ ಪಡೆಯುವುದು ಅನಿವಾರ್ಯ. ಹಿರಿಯ ಮಿತ್ರರ ಸಲಹೆ ಸಕಾಲಕ್ಕೆ ದೊರೆಯಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>