Quantcast
Channel: VijayKarnataka
Viewing all articles
Browse latest Browse all 6795

ರಯೀಸ್‌: ಡಾನ್‌ ಈಸ್‌ ಬ್ಯಾಕ್‌

$
0
0

- ಹರೀಶ್‌ ಬಸವರಾಜ್‌

ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್‌ ಖಾನ್‌, ರಯೀಸ್‌ ಮೂಲಕ ಒಂದು ದೊಡ್ಡ ಗೆಲುವು ದಾಖಲಿಸಲು ಸಜ್ಜಾಗಿದ್ದರು. ಅದಕ್ಕೆ ತಕ್ಕಂತೆ ಈ ಸಿನಿಮಾ ಕೂಡ ಅದ್ಧೂರಿಯಿಂದ ಕೂಡಿದೆ. 80 ಮತ್ತು 90ರ ದಶಕದ ಕತೆಯಲ್ಲಿ ಶಾರುಖ್‌, ಶಾನ್‌ದಾರ್‌ ಪರ್ಫಾಮನ್ಸ್‌ ನೀಡಿದ್ದಾರೆ. ಹೀಗಾಗಿ ಇವರ ಫಿಲ್ಮ್‌ ಕರಿಯರ್‌ನಲ್ಲಿ 'ರಯೀಸ್‌' ಪ್ರಮುಖ ಚಿತ್ರವಾಗಲಿದೆ.

ಗುಜರಾತ್‌ನ ಫತೇಪುರದಲ್ಲಿ ಲಿಕ್ಕರ್‌ ದಂಧೆ ಜೋರಾಗಿ ನಡೆಯುತ್ತಿರುತ್ತದೆ. ಆ ಊರಿನ ದೊಡ್ಡ ದಂಧೆಕೋರರಲ್ಲಿ ಒಬ್ಬನಾದ ಸೇಠ್‌ (ಅತುಲ್‌ ಕುಲಕರ್ಣಿ) ಜತೆ ಕೆಲಸಕ್ಕೆ ಸೇರುವ ರಯೀಸ್‌ ದೊಡ್ಡವನಾದ ಮೇಲೆ ಸ್ವಂತ ದಂಧೆ ಆರಂಭಿಸಲು ಇಷ್ಟಪಡುತ್ತಾನೆ. ಆದರೆ ಅದನ್ನು ಇಷ್ಟಪಡದ ಸೇಠ್‌ ಅವನ ವಿರುದ್ಧ ನಿಲ್ಲುತ್ತಾನೆ. ಅದಲ್ಲೆವನ್ನೂ ಮೀರಿ ರಯೀಸ್‌ ಅಕ್ರಮ ಲಿಕ್ಕರ್‌ ದಂಧೆಯಲ್ಲಿ ಗುರುತಿಸಿಕೊಳ್ಳುತ್ತಾನೆ. ಇದು ಕತೆಯ ಒನ್‌ಲೈನ್‌ ಸ್ಟೋರಿ. ಇಂಥದೊಂದು ಸಿನಿಮಾದಲ್ಲಿ ರೌಡಿಸಂ, ಗುಜರಾತ್‌ನ ಲಿಕ್ಕರ್‌ ಮಾಫಿಯಾ, ದಕ್ಷ ಅಧಿಧಿಕಾರಿಗೆ ಭ್ರಷ್ಟರು ನೀಡುವ ಉಪಟಳ, ಲವ್‌, ಅಭಿಮಾನಿಗಳು ಇಷ್ಟ ಪಡುವ ಫೈಟ್ಸ್‌ ಎಲ್ಲವೂ ಇದೆ. ಅದು ರೆಟ್ರೋ ಸ್ಟೈಲ್‌ನಲ್ಲಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ತಮ್ಮ ಅಭಿನಯದಲ್ಲಿ ಮತ್ತಷ್ಟು ಮಾಗಿರುವಂತೆ ಕಂಡಿರುವ ಶಾರುಖ್‌, ಡೈಲಾಗ್‌ ಡೆಲಿವರಿಯಲ್ಲಂತೂ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಿಸುತ್ತಾರೆ. ಸಿನಿಮಾದ ಅಚ್ಚರಿಗಳಲ್ಲೊಂದು ನವಾಜುದ್ದೀನ್‌ ಸಿದ್ದಿಕಿ ನಟನೆ. ಮೊದಲ ಬಾರಿಗೆ ಐಪಿಎಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿರುವ ಅವರು ಒಂದೇ ಒಂದು ಫೈಟ್‌ ಮಾಡದೇ ಖಡಕ್‌ತನವನ್ನು ಅಭಿನಯದಲ್ಲಿ ತೋರಿದ್ದಾರೆ. ಲಿಕ್ಕರ್‌ ಮಾಫಿಯಾದವರನ್ನು ಅರೆಸ್ಟ್‌ ಮಾಡಿದಾಗ ಹಿರಿಯ ಅಧಿಧಿಕಾರಿಗಳು ಮತ್ತು ಮುಖ್ಯಮಂತ್ರಿ ಬಿಡುಗಡೆ ಮಾಡಲು ಹೇಳಿದರೆ, ಅವರಿಗೆ ರೈಟಿಂಗ್‌ನಲ್ಲಿ ಬರೆದುಕೊಡಿ ಎಂದು ಕೇಳುವ ಪೊಲೀಸ್‌ ಅಧಿಧಿಕಾರಿಯಾಗಿ ಮಿಂಚಿದ್ದಾರೆ. ಒಬ್ಬ ದಕ್ಷ ಪೊಲೀಸ್‌ ಅಧಿಧಿಕಾರಿಯನ್ನು ಕೆಲಸವಿಲ್ಲದ ಕಂಟ್ರೋಲ್‌ ರೂಮ್‌ಗೆ ವರ್ಗ ಮಾಡಿದರೂ ಅಲ್ಲಿಯೂ ತನ್ನ ದಕ್ಷತನದಿಂದ ಕ್ರಿಮಿನಲ್‌ಗಳನ್ನು ಮಟ್ಟಹಾಕಬಹುದು ಎಂಬುದನ್ನು ನಿರ್ದೇಶಕ ಅದ್ಭುತವಾಗಿ ತೋರಿಸಿದ್ದಾರೆ.

'ಮೈ ದಂಧಾ ಕರ್ತಾ ಹೂಂ, ಧರ್ಮ ಕಾ ದಂಧಾ ನಹಿ ಕರ್ತಾ', ಇಂತಹ ಹತ್ತು ಹಲವು ಡೈಲಾಗ್‌ಗಳು ಆಗಾಗ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತವೆ. ಸಿನಿಮಾ ಅದ್ಭುತವಾಗಿ ಕಾಣಲು ಮುಖ್ಯ ಕಾರಣ ಮೋಹನನ್‌ ಅವರ ಕ್ಯಾಮೆರಾ ಕೈಚಳಕ. 80ರ ದಶಕದ ಗುಜರಾತ್‌ ಅನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನು ಸಿನಿಮಾದಲ್ಲಿ ಗಮನಸೆಳೆಯುವ ಮತ್ತೊಂದು ಅಂಶ ಕನ್ನಡಿಗ ರವಿವರ್ಮಾ ಅವರ ಸಾಹಸ ದೃಶ್ಯಗಳು. ಸಾಕಷ್ಟು ನೈಜವಾಗಿ ಫೈಟ್ಸ್‌ಗಳನ್ನು ರವಿವರ್ಮಾ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಮಟನ್‌ ಮಾರ್ಕೆಟ್‌ನಲ್ಲಿ ನಡೆಯುವ ಫೈಟ್‌ ಅಂತೂ ಕಲಾತ್ಮಕವಾಗಿ ಮೂಡಿಬಂದಿದೆ. ಪಾಕ್‌ ನಟಿ ಮಹಿರಾ ಖಾನ್‌ ಬದಲಿಗೆ ನಮ್ಮವರನ್ನೇ ಆಯ್ಕೆ ಮಾಡಬಹುದಿತ್ತೇನೊ. ಅಷ್ಟೇನೂ ಕೆಲಸ ಇಲ್ಲದೇ ಸುಂದರವಾಗಿಯೂ ಇಲ್ಲದ ನಟಿಯನ್ನು ಶಾರುಖ್‌ ಕರೆತಂದು ಸುಮ್ಮನೆ ವಿವಾದ ಮಾಡಿಕೊಂಡರು. ಇನ್ನುಳಿದ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಮ್‌ ಸಂಪತ್‌ ಸಂಗೀತದಲ್ಲಿ ಎರಡು ಹಾಡುಗಳಷ್ಟೇ ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಶಾರುಖ್‌, ರಯೀಸ್‌ ಸಿನಿಮಾದಿಂದ ಗೆಲುವನ್ನು ದಾಖಲಿಸುವ ಭರವಸೆ ಮೂಡಿಸಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>