Quantcast
Channel: VijayKarnataka
Viewing all articles
Browse latest Browse all 6795

ಕಾಬಿಲ್‌ನ ಪ್ರೇಮ ಕುರುಡಲ್ಲ

$
0
0

- ಪದ್ಮಾ ಶಿವಮೊಗ್ಗ

ಅತ್ಯುತ್ತಮ ನಟನೆಗೆ ಹೆಸರಾದ ಹೃತಿಕ್‌ ರೋಷನ್‌ ದೃಷ್ಟಿ ವಿಕಲಚೇತನರಾಗಿ ನಟಿಸಿರುವ ಚಿತ್ರ ಕಾಬಿಲ್‌. ಇದರಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ದೃಷ್ಟಿ ವಿಕಲಚೇತನರು. ನವಿರಾದ ಪ್ರೇಮಕತೆಯೊಂದಿಗೆ ಆ್ಯಕ್ಷನ್‌ ಮತ್ತು ಥ್ರಿಲ್ಲರ್‌ ಸಿನಿಮಾ ಮಾಡಿದ್ದಾರೆ ಸಂಜಯ್‌ ಗುಪ್ತಾ. ಹಾಲಿವುಡ್‌ ಚಿತ್ರ 'ಬ್ಲೈಂಡ್‌ ಫ್ಯೂರಿ' ಮತ್ತು ಕೊರಿಯನ್‌ ಮೂವಿ 'ಬ್ರೋಕನ್‌'ನ ಛಾಯೆ ಇರುವ ಕಾಬಿಲ್‌ನಲ್ಲಿ ತಮ್ಮ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಸೇಡು ತೀರಿಸಿಕೊಳ್ಳುವ ಕತೆ ಇದೆ.

ರೋಹನ್‌ ಭಟ್ನಾಗರ್‌ (ಹೃತಿಕ್‌ ರೋಷನ್‌) ದೃಷ್ಟಿ ಇಲ್ಲದಿದ್ದರೂ ಅದ್ಭುತ ಕಂಠದಾನ ಕಲಾವಿದ. ಕೇಳಿದ ಧ್ವನಿಯನ್ನು ಯಥಾವತ್‌ ನಕಲು ಮಾಡಬಲ್ಲ. ಇವನಿಗೆ ಜೋಡಿಯಾದ ಹುಡುಗಿ ಸುಪ್ರಿಯಾ (ಯಾಮಿ ಗೌತಮ್‌) ಪಿಯಾನೋ ವಾದಕಿ. ಸ್ವಸಾಮರ್ಥ್ಯ‌ದಿಂದ ಒಂಟಿಯಾಗಿ ಜೀವನ ನಡೆಸಿರುತ್ತಾಳೆ. ಇವರಿಬ್ಬರೂ ಮದುವೆಯಾಗಲು ಸ್ನೇಹಿತರ ಪ್ರೋತ್ಸಾಹವೂ ಇರುತ್ತದೆ. ಸುಪ್ರಿಯಾ ಒಪ್ಪುವುದಿಲ್ಲವಾದರೂ ಇಬ್ಬರ ನಡುವ ಸ್ನೇಹ ಇರುತ್ತದೆ. ಒಮ್ಮೆ ಮಾಲ್‌ಗೆ ಹೋಗಿದ್ದಾಗ ಇಬ್ಬರೂ ಜನರ ನೂಕುನುಗ್ಗಲಿನಲ್ಲಿ ಬೇರೆಯಾಗುತ್ತಾರೆ. ಆಗ ಇಬ್ಬರಿಗೂ ಪ್ರೀತಿಯ ಅರಿವಾಗುತ್ತದೆ. ನಿರ್ಮಾಣ ಹಂತದಲ್ಲಿದ್ದ ಹೊಸ ಅಪಾರ್ಟ್‌ಮೆಂಟ್‌ ಕೊಂಡುಕೊಂಡ ಹೃತಿಕ್‌, ಸುಪ್ರಿಯಾಳನ್ನು ಮದುವೆಯಾಗುತ್ತಾನೆ. ಕಣ್ಣು ಕಾಣದಿದ್ದರೂ ಬದುಕಿನಲ್ಲಿ ಬೆಳಕಿನ ಕಾರಂಜಿ ಚಿಮ್ಮುತ್ತದೆ. ಇಬ್ಬರೂ ಸಂತೋಷಪಡುವಷ್ಟರಲ್ಲೇ ಕೆಟ್ಟ ಘಟನೆ ಬರಸಿಡಿಲಿನಂತೆ ಎರಗುತ್ತದೆ. ಅಕ್ಕಪಕ್ಕದ ಮನೆಯವರೇ ಆದ ಅಮಿತ್‌ (ರೋಹಿತ್‌ ರಾಯ್‌) ಮತ್ತು ಅವನ ಗೆಳೆಯ ವಾಸಿಮ್‌ ಇವರ ಬದುಕಿನಲ್ಲಿ ವಿಲನ್‌ ಆಗಿ ಬರುತ್ತಾರೆ. ಸುಪ್ರಿಯಾಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ.

ಅಮಿತ್‌ ಸ್ಥಳೀಯ ಕಾರ್ಪೊರೇಟರ್‌ ಮಾಧವರಾವ್‌ ಶೆಲ್ಲಾರ್‌ನ ತಮ್ಮ. ಹಾಗಾಗಿ ಪೊಲೀಸ್‌ ಇಲಾಖೆ ಈ ದಂಪತಿ ಸಹಾಯಕ್ಕೆ ಬರುವುದಿಲ್ಲ. ಸಾಕ್ಷಿ ನಾಶವಾದ ಕಾರಣ ಅಸಹಾಯಕರಾಗುತ್ತಾರೆ. ಮತ್ತೊಂದು ದುರಂತ ರೋಹನ್‌ ಬಾಳಲ್ಲಿ ಅಂಧಕಾರ ತುಂಬುತ್ತದೆ. ಚಿತ್ರದ ದ್ವಿತೀಯಾರ್ಧದಲ್ಲಿ ರೋಹನ್‌ ಹೇಗೆ ಇವರೆಲ್ಲರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗಿದೆ. ಕುತೂಹಲ ಕೆರಳಿಸುವುದೇ ಇಲ್ಲಿಂದ ಮುಂದೆ.

ಎಷ್ಟೋ ಚಿತ್ರಗಳಲ್ಲಿ ನೋಡಿರುವ ಅದೇ ಕೆಟ್ಟ ಪೊಲಿಟಿಷಿಯನ್‌, ಅವನ ರೌಡಿ ಬ್ರದರ್‌, ಅವರಿಗೆ ಸಹಾಯ ಮಾಡೋ ಪೊಲೀಸ್‌ ಅಧಿಕಾರಿಗಳು ಇಲ್ಲೂ ಇದ್ದಾರೆ. ಆದರೆ, ರೋಹನ್‌ ತನ್ನ ಕಲೆ ಮತ್ತು ಬುದ್ಧಿವಂತಿಕೆಯಿಂದ ಹೇಗೆ ಸಾಕ್ಷಿ ಇಲ್ಲದಂತೆ ಮಾಡಿ, ಎಲ್ಲರನ್ನೂ ಹಳ್ಳಕ್ಕೆ ಕೆಡವುತ್ತಾನೆ ಎನ್ನುವುದು ಕುತೂಹಲಕರ ಸಂಗತಿ. ಮನರಂಜನೆಗೆ ಒಂದು ಐಟಂ ಸಾಂಗ್‌ ಇದೆ. ನಾಯಕಿ ಯಾಮಿ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸೋತಿದ್ದಾರೆ. ಹೃತಿಕ್‌ ರೋಷನ್‌ ಇನ್ನೂ ಚೆನ್ನಾಗಿ ನಟಿಸಬಹುದಿತ್ತು ಎನಿಸುತ್ತದೆ. ದೃಷ್ಟಿ ವಿಕಲಚೇತನರ ಪಾತ್ರ ಪೋಷಣೆ ದುರ್ಬಲವಾಗಿದೆ. ನೋಡುಗರನ್ನು ಭಾವುಕರನ್ನಾಗಿ ಮಾಡುವುದಿಲ್ಲ. ಚಿತ್ರದಲ್ಲಿ ಕೆಲ ತಪ್ಪುಗಳೂ ಕಾಣುತ್ತವೆ. ಉದಾಹರಣೆಗೆ ಪೊಲೀಸರ ಕಣ್ಗಾವಲು ತಪ್ಪಿಸಿ ರೋಹನ್‌ ಹೇಗೆ ಕಾರ್ಪೊರೇಟರ್‌ನ ಕೊಂದ ಎನ್ನುವುದನ್ನು ಅವನ ಬಾಯಲ್ಲೇ ಕೇಳುವ ಪೊಲೀಸ್‌ ಅಧಿಕಾರಿ ಅದನ್ನು ರೆಕಾರ್ಡ್‌ ಮಾಡಿಕೊಳ್ಳುವ ಕನಿಷ್ಠ ಬುದ್ಧಿವಂತಿಕೆಯನ್ನು ತೋರದೆ, ಸಾಕ್ಷಿಗಾಗಿ ಟೆಲಿಫೋನ್‌ ಬೂತ್‌ನವನನ್ನು ಹುಡುಕಿಕೊಂಡು ಹೋಗುತ್ತಾನೆ. ಛಾಯಾಗ್ರಹಣ ಚೆನ್ನಾಗಿದೆ. ಹಾಡೊಂದರಲ್ಲಿ ನಾಯಕ, ನಾಯಕಿಯ ಡಾನ್ಸ್‌ ಸೂಪರ್‌ ಆಗಿದೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>