Quantcast
Channel: VijayKarnataka
Viewing all articles
Browse latest Browse all 6795

ಜಬರದಸ್ತ್ ಜಾಗ್ವಾರ್

$
0
0

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಮಾಣದ ಜಾಗ್ವಾರ್ ಸಿನಿಮಾ ಅವರ ಹುಟ್ಟುಹಬ್ಬದ ದಿನ (ಡಿ.16)ದಂದೇ ಮುಹೂರ್ತ ಕಾಣುತ್ತಿದೆ. ಇವರ ಪುತ್ರ ನಿಖಿಲ್ ನಾಯಕನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

- ಎಚ್. ಮಹೇಶ್

ಬಹು ನಿರೀಕ್ಷಿತ ಜಾಗ್ವಾರ್ ಸಿನಿಮಾಕ್ಕೆ ಇಂದು (ಡಿ.16) ಮುಹೂರ್ತ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಇದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರವು ಇವರ ಹೋಂ ಪ್ರೊಡಕ್ಷನ್ ಸಿನಿಮಾ.

ನಿಖಿಲ್ ಕಳೆದ ಒಂದು ವರ್ಷದಿಂದ ಚಿತ್ರಕ್ಕಾಗಿ ದೇಹ ದಂಡಿಸಿದ್ದಾರೆ. ಎಲ್ಲರೂ ಟ್ರೇಲರ್ ಎಂದರೆ ಸಿನಿಮಾದ ಕತೆಯನ್ನಿಟ್ಟುಕೊಂಡು ಅದನ್ನು ಶೂಟಿಂಗ್ ಮಾಡಿದರೆ, ಇಲ್ಲಿ ನಿಖಿಲ್ ಪಡೆದುಕೊಂಡ ತರಬೇತಿಯನ್ನೇ ಶೂಟ್ ಮಾಡಿ ಅದಕ್ಕೆ ಹಿನ್ನೆಲೆ ಸಂಗೀತ ಕೊಟ್ಟು ಹೊಸ ರೀತಿಯಲ್ಲಿ ಟ್ರೇಲರ್ ಮಾಡಲಾಗಿದೆ. ಅದೂ ಕೂಡ ಇಂದು ಲಾಂಚ್ ಆಗಲಿದೆ. ಸಿನಿಮಾ ನಿರ್ದೇಶನದ ಜವಾಬ್ದಾರಿ ಎ. ಮಹದೇವ್ ಅವರದ್ದು.

ಈ ಚಿತ್ರದ ಬಗ್ಗೆ ನಿಖಿಲ್ ಅವರನ್ನು ಕೇಳಿದಾಗ, 'ಜಾಗ್ವಾರ್ ಸಿನಿಮಾ ಮಾಡುತ್ತೇವೆ ಎಂದು ಹೇಳಿದ ದಿನದಿಂದ ಇಲ್ಲಿವರೆಗೂ ಚಿತ್ರದ ಬಗ್ಗೆ ಜನರಲ್ಲಿ ಇನ್ನಿಲ್ಲದ ಕುತೂಹಲ ಮೂಡಿದೆ. ಅದಕ್ಕಾಗಿಯೇ ನಾನು ತುಂಬ ಸಮಯ ತೆಗೆದುಕೊಂಡು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಅಪ್ಪನ ಹುಟ್ಟುಹಬ್ಬದ ದಿನದಂದು ಚಿತ್ರ ಲಾಂಚ್ ಆಗುತ್ತಿರುವುದರಿಂದ ತುಂಬಾನೇ ಖುಷಿ ಇದೆ. ಅವರಿಗೆ ಸಿನಿಮಾ ಜ್ಞಾನ ಚೆನ್ನಾಗಿದೆ. ಪ್ರತಿ ಹಂತದಲ್ಲೂ ಅವರು ನನ್ನ ಜೊತೆ ಚಿತ್ರದ ಕುರಿತು ಚರ್ಚೆ ಮಾಡುತ್ತಿದ್ದಾರೆ. ಅವರ ರಾಜಕೀಯದ ಬಿಝಿ ಶೆಡ್ಯೂಲ್‌ನಲ್ಲೂ ನನಗೆ ಸಮಯ ಕೊಟ್ಟಿರುವುದು ಖುಷಿ ತರಿಸಿದೆ' ಎನ್ನುತ್ತಾರೆ ಅವರು.

ಸಿನಿಮಾದ ಉಸ್ತುವಾರಿ ಹೊತ್ತಿರುವ ಕುಮಾರಸ್ವಾಮಿ ಕೂಡ ತಮ್ಮ ಮಗ ಸಿನಿಮಾವನ್ನು ಪ್ರೀತಿಸುತ್ತಿರುವ ರೀತಿ ಕಂಡು ಬೆರಗಾಗಿದ್ದಾರೆ. 'ನಾನು ಈ ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕಾಗಿ ನಾಲ್ಕು ತಿಂಗಳು ಸಮಯ ಮೀಸಲಿಟ್ಟಿದ್ದೇನೆ. ರಾಜಕೀಯ ಜೊತೆ ಜೊತೆಯಲ್ಲೇ ಸಿನಿಮಾದಲ್ಲೂ ತೊಡಗಿಸಿಕೊಳ್ಳುವೆ. ಕ್ವಾಲಿಟಿ ವಿಚಾರದಲ್ಲಿ ಎಲ್ಲೂ ರಾಜಿ ಮಾಡಿಕೊಂಡಿಲ್ಲ. ಇತ್ತೀಚೆಗೆ ನಾನು ಹೆಚ್ಚು ತೆಲುಗು ಸಿನಿಮಾಗಳನ್ನು ನೋಡುತ್ತಿದ್ದೇನೆ. ನಮ್ಮ ಸಿನಿಮಾ ಯಾವ ಭಾಷೆಗೂ ಕಡಿಮೆ ಇಲ್ಲದಂತೆ ತೋರಿಸಬೇಕು. ಅದಕ್ಕಾಗಿ ನಾನು ಕೂಡ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇನೆ' ಎನ್ನುತ್ತಾರೆ ಕುಮಾರಸ್ವಾಮಿ.

ಇದೇ ಸಂದರ್ಭದಲ್ಲಿ ಡಾ. ಅಂಬರೀಶ್, ಬಿ. ಸರೋಜಾದೇವಿ, ಜಯಂತಿ, ಭಾರತಿ ವಿಷ್ಣುವರ್ಧನ್, ಶಿವರಾಜ್‌ಕುಮಾರ್ ಹಾಗೂ ರವಿಚಂದ್ರನ್ ಅವರನ್ನು ಸನ್ಮಾನಿಸಲಾಗುವುದು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>