ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗೋದು ಕಷ್ಟ. ಸಿಕ್ಕರೂ ಒಂದೆರಡು ವಾರಗಳಿಗೆ ಮಾತ್ರ ಸೀಮಿತ ಎನ್ನಬಹುದು. ಹೀಗಿರುವಾಗ ರಂಗಿತರಂಗ ಚಿತ್ರ 25ನೇವಾರ ಪೂರೈಸಿದ ಮೊದಲ ಚಿತ್ರವೆನಿಸಿಕೊಂಡಿದೆ.
ಅನೂಪ್ ಭಂಡಾರಿ ನಿರ್ದೇಶನದ ನಿರೂಪ್ ಅಭಿನಯದ ರಂಗಿತರಂಗ ಚಿತ್ರ ಮಾಡಿದ ದಾಖಲೆಗಳ ಪಟ್ಟಿ ದೊಡ್ಡದಿದೆ. ಹಲವು ವರ್ಷಗಳ ನಂತರ ಕನ್ನಡ ಚಿತ್ರವೊಂದು ಯಶಸ್ವಿಯಾಗಿ 25ನೇ ವಾರ ಪೂರೈಸಿ, ಯಶಸ್ವಿಯಾಗಿ ಪ್ರದರ್ಶನ ಮುಂದುವರಿಸಿದೆ. ಎಲ್ಲಕ್ಕಿಂತ ಮಲ್ಟಿಪ್ಲೆಕ್ಸ್‌ನಲ್ಲೂ ಇದು 25ನೇ ವಾರ ಸತತವಾಗಿ ಪ್ರದರ್ಶನ ಕಾಣುತ್ತಿರುವುದು ವಿಶೇಷ.
ವಿಭಿನ್ನ ಕತೆಯ ಹೊಸ ರೀತಿಯ ನಿರೂಪಣೆಯಿಂದ ಚೊಚ್ಚಲ ಚಿತ್ರದಲ್ಲೇ ಅನೂಪ್ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ದೇಶ ವಿದೇಶಗಳಲ್ಲೂ ಕನ್ನಡ ಸಿನಿಮಾ ನೋಡದೇ ಇದ್ದವರೂ ಕೂಡಾ ಬಂದು ನೋಡುವಂತೆ ಮಾಡಿದ ಹೆಗ್ಗಳಿಕೆ ಅವರದು. ಈಗ ಹೊಸ ಚಿತ್ರದ ತಯಾರಿಯಲ್ಲಿ ಅನೂಪ್ ಬಿಝಿಯಾಗಿದ್ದಾರೆ.
↧
ಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಚಿತ್ರದ ದಾಖಲೆ
↧