Quantcast
Channel: VijayKarnataka
Viewing all articles
Browse latest Browse all 6795

ಆಹಾರ ಹಣದುಬ್ಬರ ಎರಡು ಪಟ್ಟು ಹೆಚ್ಚಳ

$
0
0

ಹೊಸದಿಲ್ಲಿ: ಬೇಳೆ ಮತ್ತು ಈರುಳ್ಳಿ, ತರಕಾರಿಯಂಥ ನಿತ್ಯಾವಶ್ಯಕ ಆಹಾರ ಪದಾರ್ಥಗಳ ದರ ಏರಿದ್ದು, ನವೆಂಬರ್‌ನಲ್ಲಿ ಹಣದುಬ್ಬರ ಮೈನಸ್ 1.99 ಪರ್ಸೆಂಟ್‌ಗೆ ಏರಿಕೆಯಾಗಿದೆ. ಇದು ಕಳೆದ ನವೆಂಬರ್‌ನಲ್ಲಿ ಮೈನಸ್ 0.17 ಪರ್ಸೆಂಟ್‌ನಷ್ಟಿತ್ತು.

ಕಳೆದ ಅಕ್ಟೋಬರ್‌ನಲ್ಲಿ ಶೇ.2.44ರಷ್ಟಿದ್ದ ಆಹಾರ ಹಣದುಬ್ಬರ, ಎರಡು ಪಟ್ಟು ಅಂದರೆ ನವೆಂಬರ್‌ನಲ್ಲಿ ಶೇ.5.20ಕ್ಕೆ ಹೆಚ್ಚಿದೆ. ಬೇಳೆ ಮತ್ತು ಈರುಳ್ಳಿ ಹಣದುಬ್ಬರ ಕ್ರಮವಾಗಿ ಶೇ.58.17 ಮತ್ತು ಶೇ.52.69ರಷ್ಟಿತ್ತು. ''ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಳೆ ಮತ್ತು ಪೂರೈಕೆಗೆ ತೊಡಕಾಗಿ ನವೆಂಬರ್‌ನಲ್ಲಿ ಆಹಾರ ಪದಾರ್ಥಗಳ ದರಗಳು ಶೇ.2.3 ಹೆಚ್ಚಳವಾಗಿದ್ದವು. ಬೇಡಿಕೆಗೆ ತಕ್ಕಂತೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ,'' ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತರಕಾರಿ, ಆಲೂಗಡ್ಡೆ, ಮೊಟ್ಟೆ, ಮಾಂಸ, ಮೀನು ದರಗಳು ಗಣನೀಯವಾಗಿ ಹೆಚ್ಚಿದ್ದು ಹಣದುಬ್ಬರ ಏರಿಕೆಗೆ ಕಾರಣವಾಗಿದೆ. ನವೆಂಬರ್‌ನಲ್ಲಿ ಇಂಧನ ಮತ್ತು ವಿದ್ಯುತ್ ವಲಯದಲ್ಲಿ ಹಣದುಬ್ಬರ ಮೈನಸ್ 11.09 ಪರ್ಸೆಂಟ್, ಸಿದ್ಧಪಡಿಸಿದ ಉತ್ಪನ್ನಗಳ ಹಣದುಬ್ಬರ ಮೈನಸ್ 1.42 ಪರ್ಸೆಂಟ್‌ನಷ್ಟಿತ್ತು.

ಆಹಾರ ಪದಾರ್ಥಗಳ ದರ ಹೆಚ್ಚಳ, ಏಳನೇ ವೇತನ ಆಯೋಗದ ಶಿಫಾರಸಿನಿಂದ ಸರಕಾರಿ ನೌಕರರ ಸಂಬಳ ಹೆಚ್ಚಳವು ಹಣದುಬ್ಬರದ ಮೇಲೆ ಮುಂದಿನ ದಿನಗಳಲ್ಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>