ಮೇಕ್ ಇನ್ ಇಂಡಿಯಾ
ಹೊಸದಿಲ್ಲಿ: ಮೊಬೈಲ್ ತಯಾರಿಸುವ ಮೈಕ್ರೊಮ್ಯಾಕ್ಸ್ ಕಂಪನಿಯು ಮುಂದಿನ ಕೆಲವು ತಿಂಗಳಲ್ಲಿ 'ಮೇಕ್ ಇನ್ ಇಂಡಿಯಾ'ದ ಭಾಗವಾಗಿ 300 ಕೋಟಿ ರೂ. ಹೂಡಿಕೆಗೆ ನಿರ್ಧರಿಸಿದೆ.
ಭಾರತದಲ್ಲಿ ಮೂರು ನೂತನ ಉತ್ಪಾದನಾ ಘಟಕಗಳನ್ನು ರೂಪಿಸಲು ಮೈಕ್ರೊಮ್ಯಾಕ್ಸ್ ಯೋಜನೆ ಹೊಂದಿದೆ. ಹೊಸ ಘಟಕಗಳು ರಾಜಸ್ಥಾನ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮುಂದಿನ ವರ್ಷ ತಲೆ ಎತ್ತಲಿವೆ. ''ಈ ಯೋಜನೆಗಾಗಿ ತೆಲಂಗಾಣದಲ್ಲಿ 20 ಎಕರೆ ಭೂಮಿಯನ್ನು ಹೊಂದಿದ್ದೇವೆ. ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ರಾಜಸ್ಥಾನದಲ್ಲೂ 25 ಎಕರೆಯನ್ನು ಹೊಂದಿದ್ದು, ಕಾಮಗಾರಿ ಕೆಲಸ ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ. ತಿರುಪತಿಯಲ್ಲೂ ಶೀಘ್ರ ಆರಂಭವಾಗಲಿದೆ. ಇವು ಕಾರ್ಯಾರಂಭವಾದರೆ 3000-3500 ಮಂದಿಗೆ ಕೆಲಸ ದೊರೆಯುತ್ತದೆ. ಚೀನಾ ಮೇಲಿನ ಅವಲಂಬನೆ ತಪ್ಪಲಿದೆ,'' ಎಂದು ಮೈಕ್ರೊಮ್ಯಾಕ್ಸ್ ಸಹ-ಸಂಸ್ಥಾಪಕ ರಾಜೇಶ್ ಅಗರವಾಲ್ ತಿಳಿಸಿದ್ದಾರೆ.
↧
ಮೈಕ್ರೊಮ್ಯಾಕ್ಸ್‌ನಿಂದ 300 ಕೋಟಿ ಹೂಡಿಕೆ
↧