Quantcast
Channel: VijayKarnataka
Viewing all articles
Browse latest Browse all 6795

ಹಂಪಿ ಸ್ಮಾರಕಗಳ ಅಂದ ಚೆಂದ ಮೂರಾ‘ಬಟ್ಟೆ’

$
0
0

ಕೃಷ್ಣ ಎನ್‌.ಲಮಾಣಿ

ಹೊಸಪೇಟೆ: ವಿಶ್ವಪರಂಪರೆ ತಾಣ ಹಂಪಿಯ ಸ್ಮಾರಕಗಳ ಅಂದ ಚೆಂದ ಮೂರಾಬಟ್ಟೆಯಾಗಿದೆ.

ಬಹುತೇಕ ಸ್ಮಾರಕಗಳು ಪ್ರವಾಸಿಗರ ಪಾಲಿಗೆ ಬಟ್ಟೆ ಒಣಗಿಸುವ ತಾಣಗಳಾಗಿವೆ. ಇಲ್ಲಿನ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ 1986ರಲ್ಲೇ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಈ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂಬುದು ಯುನೆಸ್ಕೊ ಒತ್ತಾಸೆಯಾಗಿದೆ. ಅಷ್ಟೇ ಅಲ್ಲದೆ ಶ್ರೀ ವಿರೂಪಾಕ್ಷೇಶ್ವರ ದೇಗುಲ, ವಿಜಯ ವಿಠ್ಠಲ, ಕೃಷ್ಣ ದೇಗುಲ, ಕಮಲ ಮಹಲ್‌, ಕಲ್ಲಿನ ತೇರು, ಮಹಾನವಮಿ ದಿಬ್ಬ, ಹಜಾರ ರಾಮ ದೇಗುಲ ಸೇರಿ ಇತರ ಸ್ಮಾರಕಗಳನ್ನು ರಾಷ್ಟ್ರೀಯ ಮಹತ್ವದ ಸ್ಮಾರಕಗಳು ಎಂದು ಭಾರತ ಸರಕಾರ ಗುರುತಿಸಿದೆ. ಹೀಗಿದ್ದರೂ ಇಲ್ಲಿನ ಸ್ಮಾರಕಗಳಿಗೆ ಧಕ್ಕೆ ತಪ್ಪದಾಗಿದೆ.

ಹಂಪಿಯ ಸ್ಮಾರಕಗಳ ವೀಕ್ಷಣೆಗೆ ದೇಶ-ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ವಾರ್ಷಿಕ 25ಲಕ್ಷ ದೇಶೀ ಪ್ರವಾಸಿಗರು ಹಾಗೂ ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿನೀಡುತ್ತಾರೆ. ಉತ್ತರಪ್ರದೇಶ ಹಾಗೂ ಬಿಹಾರ್‌ ರಾಜ್ಯಗಳಿಂದ ಬಸ್‌ಗಳಲ್ಲಿ ಆಗಮಿಸುವ ಪ್ರವಾಸಿಗರು ಹಂಪಿಯ ಸ್ಮಾರಕಗಳ ಬಳಿಯೇ ಬಟ್ಟೆಗಳನ್ನು ತೊಳೆದು ಒಣ ಹಾಕುತ್ತಾರೆ. ಇದರಿಂದ ಸ್ಮಾರಕಗಳ ಅಂದ ಚೆಂದಕ್ಕೆ ಹೊಡೆತ ಬೀಳುತ್ತಿದೆ. ಕೃಷ್ಣ ಬಜಾರ್‌, ನೆಲದಡಿಯ ಶಿವ ದೇಗುಲ ಸಮೀಪದ ಮಂಟಪಗಳ ಬಳಿ ದಿನದ ಬಹುತೇಕ ಅವಧಿಯಲ್ಲಿ ಬಟ್ಟೆಗಳನ್ನು ಒಣಹಾಕಿರುವುದು ಕಂಡುಬರುತ್ತದೆ.

ಸ್ಮಾರಕಗಳ ಮಹತ್ವಕ್ಕೆ ಚ್ಯುತಿ:

ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಹಲವು ಅಧಿನಿಯಮಗಳನ್ನು ರೂಪಿಸಿದೆ. ಸ್ಮಾರಕಗಳಿಗೆ ಧಕ್ಕೆ ತಂದರೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದರೂ ಸಂಬಂಧಿಸಿದ ಇಲಾಖೆಗಳು ಪ್ರವಾಸಿಗರಿಗೆ ತಿಳಿಹೇಳುತ್ತಿಲ್ಲ. ಇದರಿಂದ ಹಲವು ಪ್ರವಾಸಿಗರು ಸ್ಮಾರಕಗಳ ಮೇಲೆಯೇ ಬಟ್ಟೆಗಳನ್ನು ಒಣಹಾಕುತ್ತ, ಸ್ಮಾರಕಗಳ ಮಹತ್ವಕ್ಕೆ ಚ್ಯುತಿ ತರುತ್ತಿದ್ದಾರೆ.

ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರಗಳಿವೆ. ಜತೆಗೆ ಹಂಪಿಯಲ್ಲೆ ಪ್ರವಾಸೋದ್ಯಮ ಇಲಾಖೆ ಕಾರ್ಯಾಚರಿಸುತ್ತಿವೆ. ಹಂಪಿಗೆ ಪ್ರತ್ಯೇಕವಾಗಿ ಪೊಲೀಸ್‌ ಉಪ ವಿಭಾಗ ತೆರೆಯಲಾಗಿದೆ. ಪ್ರವಾಸಿ ಮಿತ್ರ ಸೆಕ್ಯೂರಿಟಿ ಗಾರ್ಡ್‌ಗಳು, ಭಾರತೀಯ ಪುರಾತತ್ವ ಇಲಾಖೆಯ ಸೆಕ್ಯೂರಿಟಿ ಗಾರ್ಡ್‌ಗಳು ಕೆಲಸ ಮಾಡುತ್ತಿದ್ದರೂ ಸ್ಮಾರಕಗಳ ಮೇಲೆ ಬಟ್ಟೆ ಒಣಹಾಕುವುದಕ್ಕೆ ತಡೆಬಿದ್ದಿಲ್ಲ.

ಹಂಪಿಯ ಸ್ಮಾರಕಗಳ ಮೇಲೆ ಬಟ್ಟೆಗಳನ್ನು ಒಣಹಾಕುತ್ತಿರುವ ಪ್ರವಾಸಿಗರಿಗೆ ಹಲವು ಬಾರಿ ಬುದ್ಧಿವಾದ ಹೇಳಲಾಗಿದೆ. ಈ ಸಂಬಂಧ ನಿರಂತರ ಜಾಗೃತಿ ಮೂಡಿಸಲಾಗುವುದು.

-ರವೀಂದ್ರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ, ಹಂಪಿ

ಹಂಪಿಯ ಸ್ಮಾರಕಗಳ ಮೇಲೆ ಉತ್ತರ ಭಾರತದಿಂದ ಆಗಮಿಸುವ ಪ್ರವಾಸಿಗರು ಬಟ್ಟೆಗಳನ್ನು ಒಣಹಾಕುತ್ತಾರೆ. ದೂರದಿಂದ ಬರುವ ಪ್ರವಾಸಿಗರು ಹಾಗೂ ಯಾತ್ರಿಗಳಿಗೆ ವಾಸ್ತವ್ಯಕ್ಕೆ ಹಂಪಿಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಬಸ್‌ನಲ್ಲೆ ಮಲಗುವ ಪ್ರವಾಸಿಗರು ಬೆಳಗ್ಗೆ ಸ್ನಾನಮಾಡಿದ ಬಳಿಕ ಬಟ್ಟೆಗಳನ್ನು ಸ್ಮಾರಕಗಳ ಮೇಲೆ ಒಣಹಾಕುವುದು ಸಾಮಾನ್ಯವಾಗಿದೆ. ಇದರಿಂದ ಸ್ಮಾರಕಗಳ ಅಂದ ಚೆಂದ ಮರೆಮಾಚುತ್ತಿದೆ.

-ರಾಚಯ್ಯ, ಕಮಲಾಪುರ ನಿವಾಸಿ



Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>