Quantcast
Channel: VijayKarnataka
Viewing all articles
Browse latest Browse all 6795

ಕ್ಷಿಪ್ರ ತನಿಖೆ ಅಗತ್ಯ

$
0
0

ಭಾರತೀಯ ವಾಯುಪಡೆಗಾಗಿ 3,600 ಕೋಟಿ ರೂಪಾಯಿ ಮೊತ್ತದಲ್ಲಿ ಇಟಲಿ ಆಗಸ್ಟಾವೆಸ್ಟ್‌ಲಾಂಡ್‌ ಕಂಪನಿಯಿಂದ 12 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಹಗರಣ ಕೊನೆಗೂ ತಾರ್ಕಿಕ ಅಂತ್ಯ ಮುಟ್ಟುವ ಸೂಚನೆಗಳು ಸಿಕ್ಕಿವೆ. ಈ ಹಗರಣದಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿದ್ದ ವಾಯುಪಡೆ ಮುಖ್ಯಸ್ಥ ಎಸ್‌ಪಿ ತ್ಯಾಗಿ, ಅವರ ಸಹೋದರ ಸಂಬಂಧಿ ಸಂಜೀವ್‌ ತ್ಯಾಗಿ ಮತ್ತು ಇವರ ವಕೀಲ ಗೌತಮ್‌ ಖೇತನ್‌ ಅವರನ್ನು ಸಿಬಿಐ ಬಂಧಿಸಿದೆ. ಆರು ವರ್ಷಗಳ ಹಿಂದೆ ಈ ಕಾಪ್ಟರ್‌ಗಳನ್ನು ತರಿಸಿಕೊಳ್ಳುವ ಒಪ್ಪಂದವನ್ನು ಯುಪಿಎ ಸರಕಾರ ಮಾಡಿಕೊಂಡಿತ್ತು. ಆದರೆ ಫೆಬ್ರವರಿ 12, 2013ರಲ್ಲಿ ಇಟಲಿ ಪೊಲೀಸರು ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಮಾತೃ ಸಂಸ್ಥೆ ಫಿನ್‌ಮೆಕ್ಯಾನಿಕಾದ ಮುಖ್ಯಸ್ಥ ಜುಸೆಪ್ಪಿ ಒರ್ಸಿಯನ್ನು ಬಂಧಿಸಿದ್ದರು. ಇದಾದ ಬಳಿಕ ಹೆಲಿಕಾಪ್ಟರ್‌ ಖರೀದಿ ಕರ್ಮಕಾಂಡ ಬಯಲಿಗೆ ಬಂದಿತು. ತಕ್ಷ ಣವೇ ಭಾರತದ ಅಂದಿನ ರಕ್ಷ ಣಾ ಸಚಿವ ಎ.ಕೆ. ಆ್ಯಂಟನಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರು. ಈ ಉನ್ನತ ತನಿಖಾ ಸಂಸ್ಥೆ ತ್ಯಾಗಿ ಸೇರಿದಂತೆ 12 ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡಿತ್ತು. ತ್ಯಾಗಿ ಅವರು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಅನ್ನು ಹರಾಜುದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅನುಕೂಲವಾಗುವಂತೆ, ಕಾಪ್ಟರ್‌ ಹಾರಾಟದ ಮಿತಿಯನ್ನು 6,000 ಮಿ.ನಿಂದ 4500 ಮಿ.ಗಳಿಗೆ ಇಳಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರಿ ಪ್ರಮಾಣದ ಕಿಕ್‌ ಬ್ಯಾಕ್‌ ಪಡೆದಿದ್ದರು. ಇದಲ್ಲದೆ ತ್ಯಾಗಿ ಸಕುಟುಂಬ ಪರಿವಾರ ಸಮೇತರಾಗಿ ಅನೇಕ ಬಾರಿ ವಿದೇಶ ಪ್ರವಾಸ ಮಾಡಿದ್ದರು. ಈ ಖರ್ಚುವೆಚ್ಚಗಳನ್ನು ಮಧ್ಯವರ್ತಿಗಳು ವಹಿಸಿಕೊಂಡಿದ್ದರು ಎನ್ನಲಾಗಿದೆ. ಹಗರಣದ ವಾಸನೆ ಬಡಿಯುತ್ತಲೇ ಎನ್‌ಡಿಎ ಸರಕಾರ 2014, ಜನವರಿಯಲ್ಲಿ ಖರೀದಿ ಒಪ್ಪಂದವನ್ನು ರದ್ದು ಮಾಡಿತ್ತು. ನಾಲ್ಕು ತಿಂಗಳ ಹಿಂದೆಯಷ್ಟೇ ಇಟಲಿ ಕೋರ್ಟೊಂದು ಈ ವ್ಯವಹಾರದಲ್ಲಿ ಭಾರಿ ಅಕ್ರಮಗಳು ನಡೆದಿವೆ. ಈ ಡೀಲ್‌ ಕುದುರಿಸುವುದಕ್ಕೆ ಭಾರತದ ರಾಜಕೀಯ ಪಕ್ಷ ವೊಂದಕ್ಕೆ 120 ಕೋಟಿ ರೂ ಲಂಚನೀಡಲಾಗಿದೆ. ಇದರಲ್ಲಿ ಅಂದಿನ ವಾಯುಪಡೆ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ನೇರವಾಗಿ ಪಾಲ್ಗೊಂಡಿದ್ದಾರೆ, ಎಂದು ತೀರ್ಪು ನೀಡಿತ್ತು. ಇಷ್ಟಲ್ಲ ಆದರೂ ತ್ಯಾಗಿಯನ್ನು ಬಂಧಿಸಲು ಇಷ್ಟು ದಿನ ಬೇಕಿತ್ತೇ? ಒಪ್ಪಂದವನ್ನು ರದ್ದುಮಾಡಿದ ಕೇಂದ್ರ ಸರಕಾರ ಕ್ಷಿಪ್ರ ಕ್ರಮ ಏಕೆ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಯಾವ ಪಕ್ಷ ಆಡಳಿತಕ್ಕೆ ಬಂದರೂ ಯಾವುದೇ ಹಗರಣವನ್ನು ಬಯಲು ಮಾಡುವಾಗ ತನಗೆ ರಾಜಕೀಯವಾಗಿ ಅನುಕೂಲವಾಗುವ ಸಮಯ, ಸಂದರ್ಭ, ಸನ್ನಿವೇಶಕ್ಕಾಗಿ ಕಾಯುತ್ತದೆ ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ. ನೋಟು ಅಮಾನ್ಯದಿಂದ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಸರಕಾರ, ಜನರ ಗಮನವನ್ನು ಬೇರೆಡೆ ಸೆಳೆಯಲು ಹಾಗೂ ಸಂಸತ್‌ ಕಲಾಪವನ್ನು ಹಾಳು ಮಾಡುತ್ತಿರುವ ಕಾಂಗ್ರೆಸ್‌ ಅನ್ನು ಸೆಣೆಯಲು ಈ ಹಳೇ ಪ್ರಕರಣವನ್ನು ಅಸ್ತ್ರದಂತೆ ಪ್ರಯೋಗಿಸಿದೆ ಎನ್ನುವ ಪ್ರತಿಪಕ್ಷಗಳ ಟೀಕೆಯಲ್ಲಿ ಹುರುಳಿಲ್ಲ ಎನ್ನಲಾಗದು. ಆದರೆ ತಡವಾಗಿಯಾದರೂ ಈ ಹಗರಣದ ರೂವಾರಿಗಳನ್ನು ಬಂಧಿಸಲಾಗಿದೆ. ಹಾಗೆ ನೋಡಿದರೆ ಜೈಲು ಸೇರಿರುವ ಮೊದಲ ಸೇನಾಮುಖ್ಯಸ್ಥ ಎನ್ನುವ ಕಳಂಕವನ್ನು ತ್ಯಾಗಿ ಹೊತ್ತಿದ್ದಾರೆ. ಬಂಧನ ಎಂಬುದು ಕ್ಷಣಿಕ ಆವೇಶವಾಗಿ ಉಳಿಯಬಾರದು. ಈ ಪ್ರಕರಣದಲ್ಲಿ ಭಾಗಿಗಳಾದವರೆಲ್ಲರನ್ನೂ ಕೋರ್ಟ್‌ ಕಟಕಟೆಗೆ ನಿಲ್ಲಿಸಬೇಕು. ಭಾರತ ಜಗತ್ತಿನ ಬೃಹತ್‌ ಶಸ್ತ್ರಾಸ್ತ್ರ ಆಮದುದಾರ ದೇಶ. ಈ ವಿಷಯದಲ್ಲಿ ನೆರೆಯ ಪ್ರತಿಸ್ಪರ್ಧಿ ಚೀನಾವನ್ನು 2011ರಿಂದಲೇ ಹಿಂದೆ ತಳ್ಳಿದೆ. ಶಸ್ತ್ರಾಸ್ತ್ರ ಆಮದಿನ ಯಾವುದೇ ವ್ಯವಹಾರದಲ್ಲಿ ಪಾರದರ್ಶಕತೆಯ ಅಭಾವ ಇದ್ದೇ ಇರುತ್ತದೆ. ಇದರಿಂದ ಹಲವು ಶಂಕೆ, ಅನುಮಾನಗಳು ಹುತ್ತಗಟ್ಟುತ್ತವೆ. ಅಗಸ್ಟಾವೆಸ್ಟ್‌ಲ್ಯಾಂಡ್‌ ಕೂಡ ಇದಕ್ಕೆ ಹೊರತಲ್ಲ. ಈ ಕುರಿತು ನಡೆಯುತ್ತಿರುವ ತನಿಖೆಯನ್ನು ಆದಷ್ಟು ಬೇಗ ಮುಗಿಸಬೇಕು. ಜನರಿಗೆ ವಾಸ್ತವಾಂಶಗಳು ಗೊತ್ತಾಗಬೇಕು. ಲಂಚಕೋರರರಿಗೆ ಕಠಿಣ ಶಿಕ್ಷೆಯಾಗಬೇಕು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>