Quantcast
Channel: VijayKarnataka
Viewing all articles
Browse latest Browse all 6795

ಐಸಿಸಿ ರ‍್ಯಾಂಕಿಂಗ್: ಸ್ಪಿನ್ನರುಗಳ ಮೇಲುಗೈ, ಅಶ್ವಿನ್‌ ನಂ.1, ಜಡೇಜಾ ನಂ.2

$
0
0

ಐಸಿಸಿ ಬೌಲಿಂಗ್‌ ರ‍್ಯಾಂಕಿಂಗ್‌: 4 ದಶಕಗಳ ಹಿಂದಿನ ದಾಖಲೆ ಸರಿಗಟ್ಟಿದ ಭಾರತೀಯ ಸ್ಪಿನ್ನರ್‌ಗಳು

ದುಬೈ: ಭಾರತದ ಸ್ಪಿನ್‌ ಅಸ್ತ್ರಗಳಾದ ರವಿಚಂದ್ರನ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ, ಐಸಿಸಿ ಬುಧವಾರ ಬಿಡುಗಡೆಗೊಳಿಸಿರುವ ಟೆಸ್ಟ್‌ ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.

ಭಾರತೀಯ ಬೌಲರ್‌ಗಳಿಬ್ಬರು ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುತ್ತಿರುವುದು 1974ರ ನಂತರ ಇದೇ ಮೊದಲು. 1974ರಲ್ಲಿ ಎಡಗೈ ಸ್ಪಿನ್ನರ್‌ ಬಿಷನ್‌ ಸಿಂಗ್‌ ಬೇಡಿ ಮತ್ತು ಲೆಗ್‌ಸ್ಪಿನ್ನರ್‌ ಬಿ.ಎಸ್‌ ಚಂದ್ರಶೇಖರ್‌ ಈ ಸಾಧನೆ ಮಾಡಿದ್ದರು.

ಮಂಗಳವಾರ ಅಂತ್ಯಗೊಂಡ ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಶ್ವಿನ್‌ ಮತ್ತು ಜಡೇಜಾ ಉತ್ತಮ ಪ್ರದರ್ಶನ ತೋರಿದ್ದರು. ಆಫ್‌ಸ್ಪಿನ್ನರ್‌ ಅಶ್ವಿನ್‌ 3 ಬಾರಿ ಐದು ವಿಕೆಟ್‌ಗಳ ಸಾಧನೆ ಸಹಿತ ಸರಣಿಯಲ್ಲಿ ಗರಿಷ್ಠ 28 ವಿಕೆಟ್‌ ಪಡೆದಿದ್ದರೆ, ಎಡಗೈ ಸ್ಪಿನ್ನರ್‌ ಜಡೇಜಾ 26 ವಿಕೆಟ್‌ ತಮ್ಮದಾಗಿಸಿಕೊಂಡಿದ್ದರು.

ಅಶ್ವಿನ್‌ ಈ ಮೊದಲೇ ಅಗ್ರಸ್ಥಾನಕ್ಕೇರಿದ್ದರೆ, ಚೆನ್ನೈ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಸಹಿತ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ ಪಡೆಯುವುದರೊಂದಿಗೆ 66 ರೇಟಿಂಗ್‌ ಅಂಕ ಕಲೆ ಹಾಕಿದ ಜಡೇಜಾ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ತಮ್ಮ ಅದ್ಭುತ ಸಾಧನೆಯ ಮೂಲಕ ಜಡೇಜಾ, ಆಸೀಸ್‌ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಜಲ್‌ವುಡ್‌, ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆ್ಯಂಡರ್ಸನ್‌, ದಕ್ಷಿಣ ಆಫ್ರಿಕಾ ವೇಗಿ ಡೇಲ್‌ ಸ್ಟೇನ್‌, ಶ್ರೀಲಂಕಾ ಸ್ಪಿನ್ನರ್‌ ರಂಗನ ಹೆರತ್‌ ಅವರನ್ನು ಹಿಂದಿಕ್ಕಿ 2ನೇ ಸ್ಥಾನ ಗಳಿಸಿದ್ದಾರೆ.

ಆಲ್‌ರೌಂಡರ್ಸ್‌ ರ‍್ಯಾಂಕಿಂಗ್‌ನಲ್ಲೂ ಜಡೇಜಾಗೆ ಬಡ್ತಿ

ಇಂಗ್ಲೆಂಡ್‌ ವಿರುದ್ಧ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ರವೀಂದ್ರ ಜಡೇಜಾ (224 ರನ್‌, 2 ಅರ್ಧಶತಕ), ಟೆಸ್ಟ್‌ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲೂ ಬಡ್ತಿ ಪಡೆದಿದ್ದು, ವೃತ್ತಿಜೀವನ ಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಆರ್‌.ಅಶ್ವಿನ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ರಾಹುಲ್‌, ಕರುಣ್‌ಗೂ ಬಡ್ತಿ

ಚೆನ್ನೈ ಟೆಸ್ಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಕನ್ನಡಿಗರಾದ ಕೆ.ಎಲ್‌ ರಾಹುಲ್‌ ಹಾಗೂ ಕರುಣ್‌ ನಾಯರ್‌, ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. 199 ರನ್‌ ಗಳಿಸಿದ್ದ ರಾಹುಲ್‌ 29 ಸ್ಥಾನ ಮೇಲೇರಿ ವೃತ್ತಿಜೀವನ ಶ್ರೇಷ್ಠ 51ನೇ ಸ್ಥಾನ ಪಡೆದರೆ, 122 ಸ್ಥಾನ ಬಡ್ತಿ ಪಡೆದಿರುವ ಕರುಣ್‌ 55ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಆಸ್ಪ್ರೇಲಿಯಾ ತಂಡದ ನಾಯಕ ಸ್ಟೀವನ್‌ ಸ್ಮಿತ್‌, ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜೋ ರೂಟ್‌ ಮತ್ತು ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಕ್ರಮವಾಗಿ ಅಗ್ರ ನಾಲ್ಕು ಸ್ಥಾನಗಳಲ್ಲಿದ್ದಾರೆ. ತಂಡ ರ‍್ಯಾಂಕಿಂಗ್‌ನಲ್ಲಿ ಭಾರತದ ನಂ.1 ಸ್ಥಾನ ಭದ್ರವಾಗಿದ್ದು, ಇಂಗ್ಲೆಂಡ್‌ 2ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ.

ಐಸಿಸಿ ಬ್ಯಾಟಿಂಗ್‌ ರ‍್ಯಾಂಕಿಂಗ್‌: ಟಾಪ್‌-5

ಆಟಗಾರ | ರಾಷ್ಟ್ರ| ರೇಟಿಂಗ್‌

ಸ್ಟೀವನ್‌ ಸ್ಮಿತ್‌ ಆಸ್ಪ್ರೇಲಿಯಾ 918

ವಿರಾಟ್‌ ಕೊಹ್ಲಿ ಭಾರತ 875

ಜೋ ರೂಟ್‌ ಇಂಗ್ಲೆಂಡ್‌ 848

ಕೇನ್‌ ವಿಲಿಯಮ್ಸನ್‌ ನ್ಯೂಜಿಲೆಂಡ್‌ 817

ಹಶೀಮ್‌ ಆಮ್ಲಾ ದಕ್ಷಿಣ ಆಫ್ರಿಕಾ 791

ಐಸಿಸಿ ಬೌಲಿಂಗ್‌ ರ‍್ಯಾಂಕಿಂಗ್‌: ಟಾಪ್‌-5

ಆಟಗಾರ | ರಾಷ್ಟ್ರ| ರೇಟಿಂಗ್‌

ಆರ್‌.ಅಶ್ವಿನ್‌ ಭಾರತ 887

ರವೀಂದ್ರ ಜಡೇಜಾ ಭಾರತ 879

ರಂಗನ ಹೆರತ್‌ ಶ್ರೀಲಂಕಾ 867

ಡೇಲ್‌ ಸ್ಟೇನ್‌ ದಕ್ಷಿಣ ಆಫ್ರಿಕಾ 844

ಜೇಮ್ಸ್‌ ಆ್ಯಂಡರ್ಸನ್‌ ಇಂಗ್ಲೆಂಡ್‌ 810

ಐಸಿಸಿ ಆಲ್‌ರೌಂಡರ್ಸ್‌ ರ‍್ಯಾಂಕಿಂಗ್‌: ಟಾಪ್‌-5

ಆಟಗಾರ | ರಾಷ್ಟ್ರ | ರೇಟಿಂಗ್‌

ಆರ್‌.ಅಶ್ವಿನ್‌ ಭಾರತ 482

ಶಾಕಿಬ್‌ ಅಲ್‌ ಹಸನ್‌ ಬಾಂಗ್ಲಾದೇಶ 405

ರವೀಂದ್ರ ಜಡೇಜಾ ಭಾರತ 376

ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ 327

ಮೊಯೀನ್‌ ಅಲಿ ಇಂಗ್ಲೆಂಡ್‌ 312

ಐಸಿಸಿ ತಂಡ ರ‍್ಯಾಂಕಿಂಗ್‌: ಟಾಪ್‌-5

ತಂಡ ರೇಟಿಂಗ್‌

ಭಾರತ 120

ಆಸ್ಪ್ರೇಲಿಯಾ 105

ಪಾಕಿಸ್ತಾನ 102

ದಕ್ಷಿಣ ಆಫ್ರಿಕಾ 102

ಇಂಗ್ಲೆಂಡ್‌ 101


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>