Quantcast
Channel: VijayKarnataka
Viewing all articles
Browse latest Browse all 6795

ಹಿರೋಯಿನ್‌ಗಳ ಮದುವೆ ಸಡಗರ

$
0
0

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಪರ್ವ. ಕನ್ನಡದ ಸುಂದರ ನಟಿಯರೆಲ್ಲಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಪಟ್ಟಿಯಲ್ಲಿ ಯಾರಾರ‍ಯರು ಇದ್ದಾರೆಂಬ ಮಾಹಿತಿ ಇಲ್ಲಿದೆ.

ಹರೀಶ್‌ ಬಸವರಾಜ್‌

ಕನ್ನಡ ಚಿತ್ರರಂಗದಲ್ಲಿ ಈಗ ಕೆಲ ನಾಯಕಿಯರು ಮದುವೆಯಾಗಲಿದ್ದಾರೆ. ತಮ್ಮ ಕನಸಿನ ಹುಡುಗನ ಜತೆ ಹೊಸ ಜೀವನ ಪ್ರಾರಂಭಿಸಲು ರೆಡಿಯಾಗಿದ್ದಾರೆ. ನಟನೆಯ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದ ಈ ನಟಿಯರು ಇದೀಗ ಮದುವೆ ವಿಷಯಕ್ಕಾಗಿ ಅಭಿಮಾನಿಗಳಲ್ಲಿ ಕುತೂಹಲ ಉಂಟು ಮಾಡಿದ್ದಾರೆ.

ರಾಧಿಕಾ ಪಂಡಿತ್‌

ಕನ್ನಡದ ನಂ. 1 ನಟಿ ರಾಧಿಕಾ ಪಂಡಿತ್‌ ತಮ್ಮ ಬಹು ಕಾಲದ ಗೆಳೆಯ ಹಾಗೂ ನಟ ಯಶ್‌ ಅವರನ್ನು ಡಿ 9. ಮತ್ತು 10 ರಂದು ವಿವಾಹವಾಗಲಿದ್ದಾರೆ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಮದುವೆ ಇದಾಗಿದೆ. ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆಗಳು ಹಂಚಿಕೆಯಾಗಿವೆ. ಚಿತ್ರರಂಗದ ಗಣ್ಯರೂ ಸೇರಿದಂತೆ ತಮಗೆ ಗೊತ್ತಿರುವ ಬಹುತೇಕರನ್ನು ಯಶ್‌ ಮತ್ತು ರಾಧಿಕಾ ಮದುವೆಗೆ ಆಹ್ವಾನಿಸಿದ್ದಾರೆ. ಚಿತ್ರರಂಗಕ್ಕೆ ಬಂದು 10 ವರ್ಷ ಕಳೆದರೂ ಗಾಸಿಪ್‌ಗೆ ಸಿಲುಕದೇ ರಾಧಿಕಾ ಹೆಸರು ಗಳಿಸಿದ್ದಾರೆ. ಮೂಲತಃ ಯಶ್‌ ಮತ್ತು ರಾಧಿಕಾ ಪಂಡಿತ್‌ ಇಬ್ಬರೂ ಧಾರವಾಹಿಯಿಂದ ಬೆಳ್ಳಿತೆರೆಗೆ ಬಂದವರು. ಅಂದಿನಿಂದಲೂ ಉತ್ತಮ ಸ್ನೇಹಿತರು, ಆ ಸ್ನೇಹ ಪ್ರೀತಿಗೆ ತಿರುಗಿ ಕಳೆದ ಆಗಸ್ಟ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ಗೋವಾದಲ್ಲಿ ನಡೆದಿತ್ತು. ಇದೀಗ ಯಶ್‌ ಸಹ ಕನ್ನಡದ ಸ್ಟಾರ್‌ ನಟ. ಇವರಿಬ್ಬರ ಮದುವೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಗಾಗಲೇ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ದೀಪಿಕಾ ಕಾಮಯ್ಯ

ದರ್ಶನ್‌ ಅಭಿನಯದ ಚಿಂಗಾರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಚೆಲುವೆ ಡಿಸೆಂಬರ್‌ 4 ಮತ್ತು 5 ರಂದು ಹಸೆಮಣೆ ಏರಲಿದ್ದಾರೆ. ದೀಪಿಕಾ ಸಹ ಲವ್‌ ಮ್ಯಾರೇಜ್‌ ಆಗುತ್ತಿದ್ದಾರೆ.ಆಸ್ಪ್ರೇಲಿಯಾದಲ್ಲಿ ಬ್ಯಾಂಕ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಕನ್ನಡ ಮೂಲದ ಸುಮಂತ್‌ ಗೋಪಿ ಎಂಬವವರನ್ನು ದೀಪಿಕಾ ವರಿಸಲಿದ್ದಾರೆ. ಮದುವೆಗೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಮಣಿಪಾಲ್‌ ಹಾಲ್‌ನಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ದೀಪಿಕಾ ಸಖತ್‌ ಎಕ್ಸೈಟ್‌ಮೆಂಟ್‌ನಲ್ಲಿ ಓಡಾಡುತ್ತಿದ್ದಾರೆ. ದೀಪಿಕಾ ಮೂಲತಃ ಕೊಡಗಿನವರಾದರೂ ಮದುವೆ ಮಾತ್ರ ನಾಯ್ಡು ಶೈಲಿಯಲ್ಲಿ ನಡೆಯುತ್ತದೆ. ಮದುವೆ ಫಿಕ್ಸ್‌ ಆದ ಕಾರಣ ದೀಪಿಕಾ ಅವರು ಒಪ್ಪಿಕೊಂಡ ಸಿನಿಮಾಗಳಿಂದ ಹೊರಬಂದಿದ್ದರು. ಆದರೆ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಯಜ್ಞಾ ಶೆಟ್ಟಿ

ಒಂದು ಪ್ರೀತಿಯ ಕತೆ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ಯಜ್ಞಾಶೆಟ್ಟಿ, ಎದ್ದೇಳು ಮಂಜುನಾಥ ಸಿನಿಮಾದ ನಟನೆಗಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದರು. ಕಳ್ಳ ಮಳ್ಳ ಸುಳ್ಳ, ಲವ್‌ ಗುರು, ಸುಗ್ರೀವ, ಉಳಿದವರು ಕಂಡಂತೆ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಎಂದು ಗುರುತಿಸಿಕೊಂಡಿದ್ದರು. ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಯಜ್ಞಾಶೆಟ್ಟಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಈಗ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ 'ವಾರಾಸ್ದಾರ' ಎಂಬ ಸೀರಿಯಲ್‌ ಮೂಲಕ ಮತ್ತೆ ವಾಪಾಸ್ಸಾಗಿದ್ದಾರೆ. ಇದೆಲ್ಲದರ ನಡುವೆ ಅವರು ಸಹ ಮದುವೆಯಾಗುವ ಸುದ್ದಿ ನೀಡಿದ್ದರು. ತಮ್ಮ ಮನೆಯವರು ನೋಡಿದ ಹುಡುಗನನ್ನೇ ಅವರು ಮದುವೆ ಆಗುತ್ತಾರಂತೆ. ಈಗಾಗಲೇ ಅವರ ತಾಯಿ ಮಗಳಿಗೆ ಉತ್ತಮ ವರನನ್ನು ಹುಡುಕುತ್ತಿದ್ದಾರಂತೆ. ಮದುವೆ ಆದರೂ ಸಹ ಸಿನಿಮಾ ರಂಗದಲ್ಲಿ ಮುಂದುವರೆಯವ ಆಸೆಯನ್ನು ಅವರ ವ್ಯಕ್ತಪಡಿಸಿದ್ದಾರೆ.

ಪೂಜಾ ಗಾಂಧಿ

ಕನ್ನಡದ ಮಳೆ ಹುಡುಗಿ ಪೂಜಾ ಗಾಂಧಿ ಸಹ ಹೊಸ ಜೀವನಕ್ಕೆ ಕಾಲಿಡಲು ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಪಂಜಾಬಿ ಬೆಡಗಿ ಕನ್ನಡ ಕಲಿತು ಇಲ್ಲಿಯೇ ನೆಲೆಸಿದ್ದಾರೆ. ಒಂದು ಸಿನಿಮಾವನ್ನು ನಿರ್ಮಿಸಿದ್ದರು ಕೂಡಾ. ಈಗ ಬೆಂಗಳೂರು ಮೂಲಕ ಉದ್ಯಮಿ ಪ್ರಶಾಂತ್‌ ರಾಜು ಎಂಬುವವರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅವರು ಕೈ ಮೇಲೆ ಪ್ರಶಾಂತ್‌ ಅಂತ ಟ್ಯಾಟು ಕೂಡಾ ಹಾಕಿಸಿಕೊಂಡಿದ್ದಾರೆ. ಅವರ ಮದುವೆ ಬಗ್ಗೆ ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ತಿವ್ರ ಕುತೂಹಲವಿದೆ.

ಹೋಸ ಜೀವನಕ್ಕೆ ಕಾಲಿಡುತ್ತಿದ್ದೇನೆ. ತುಂಬಾ ಎಕ್ಸೈಟ್‌ ಆಗಿದ್ದೇನೆ. ನಮ್ಮದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌. ನಮ್ಮ ಮನೆಯಲ್ಲಿ ಎಲ್ಲರೂ ಒಪ್ಪಿ ಮದುವೆ ಮಾಡುತ್ತಿದ್ದಾರೆ. ಮದುವೆ ಆಗಿ ಆಸ್ಪ್ರೇಲಿಯಾಗೆ ಹೋದರೂ ಕನ್ನಡ ಚಿತ್ರರಂಗದ ನಂಟು ಬಿಡುವುದಿಲ್ಲ. ಇನ್ನು ಹೆಚ್ಚಿನ ಸಿನಿಮಾಗಳಲ್ಲಿ ನಾನು ನಟಿಸುತ್ತೇನೆ.

-ದೀಪಿಕಾ ಕಾಮಯ್ಯ, ನಟಿ

====

ನಮ್ಮ ತಾಯಿ ನನಗೆ ಹುಡುಗನನ್ನು ನೋಡುತ್ತಿದ್ದಾರೆ. ಅವರು ನೋಡಿದ ಹುಡುಗನನ್ನೇ ಮದುವೆ ಆಗುತ್ತೇನೆ. ಮದುವೆ ಆದರೂ ಅಭಿನಯಿಸುವುದನ್ನು ನಿಲ್ಲಿಸುವುದಿಲ್ಲ. ಸದ್ಯಕ್ಕೆ ಸೀರಿಯಲ್‌ ನಡೆಯುತ್ತಿದೆ. ಮುಂದೆ ಸಿನಿಮಾಗಳಲ್ಲಿಯೂ ತೊಡಗಿಸಿಕೊಳ್ಳುತ್ತೇನೆ.

-ಯಜ್ಞಾಶೆಟ್ಟಿ, ನಟಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>