ಕಿರುಚಿತ್ರಕ್ಕಾಗಿ ರಾಜ್ಯಪ್ರಶಸ್ತಿ ಪಡೆದ ಚೌಕಬಾರ ಕಿರುಚಿತ್ರ ಮತ್ತೊಂದು ದಾಖಲೆಗೆ ಕಾರಣವಾಗಿದೆ. ಐವತ್ತು ಪ್ರದರ್ಶನ ಕಂಡ ಕನ್ನಡದ ಮೊದಲ ಕಿರುಚಿತ್ರ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲ ವೈರಲ್ ಆಗಿದೆ. ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಯೂಟ್ಯೂಬ್‌ನಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ಅಲ್ಲದೇ 52ನೇ ವಿಶೇಷ ಪ್ರದರ್ಶನ ಕೂಡ ಹಮ್ಮಿಕೊಂಡಿದೆ ಚಿತ್ರತಂಡ. 2015ನೇ ಸಾಲಿನ ರಾಜ್ಯ ಪ್ರಶಸ್ತಿ ಪಡೆದಿರುವ ಚಿತ್ರ ಇದಾಗಿದ್ದರಿಂದ ನಿರ್ದೇಶಕ ರಾಘು ಶಿವಮೊಗ್ಗ ಮತ್ತು ತಂಡ ಚಿತ್ರಕ್ಕಾಗಿ ದುಡಿದ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಗೌರವಿಸುತ್ತಿದೆ. ಡಿ.4ರಂದು ಬೆಂಗಳೂರಿನಲ್ಲಿ 52ನೇ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಹೆಸರಾಂತ ತಾರಾ ಬಳಗ ಇರುವ ಚೌಕಬಾರ ಕಿರುಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಅಶ್ವಿನಿ ಗೌಡ, ಮಂಜುನಾಥ್ ಹಗಡೆ ಮುಂತಾದ ಕಲಾವಿದರು ಇಲ್ಲಿ ನಟಿಸಿದ್ದಾರೆ. ಇದು 20 ನಿಮಿಷದ ಕಿರುಚಿತ್ರ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಸಿನಿಮಾಟೋಗ್ರಫಿಯಲ್ಲಿ ಚಿತ್ರ ಮೂಡಿ ಬಂದಿದೆ. ಜೀವನದಲ್ಲಿ ಎದುರಾಗುವಂತಹ ಆರ್ಥಿಕ ಸಮಸ್ಯೆ ಹಾಗೂ ಮಾನಸಿಕ ಒತ್ತಡಗಳಿಂದ ಮನುಷ್ಯನು ಹೇಗೆ ತನ್ನ ಜೀವನವನ್ನು ಹಾಳುಮಾಡಿಕೊಳ್ಳುತ್ತಾನೆ ಅನ್ನುವ ಅಂಶವನ್ನು ಆಧರಿಸಿದ ಕಿರುಚಿತ್ರವಿದು. ನೀನಾಸಂ ಸತೀಶ್ ಪಿಕ್ಚರ್ಸ್ ನಿರ್ಮಾಣದಲ್ಲಿ ತಯಾರಾಗಿದೆ.
↧
ದಾಖಲೆಯತ್ತ ದಾಪುಗಾಲು
↧