ದರ್ಶನ್ ಅಭಿನಯಿಸಿರುವ ಚಕ್ರವರ್ತಿ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಅವರು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ರಿಲ್ಯಾಕ್ಸ್ ಆಗಿದ್ದಾರೆ. ಕೆಲವು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅವುಗಳನ್ನು ಮುಗಿಸಿದ ಬಳಿಕ ರಿಲೀಸ್‌ಗೆ ರೆಡಿಯಾಗಲಿದೆ. ತಮ್ಮ ಹೊಸ ಚಿತ್ರದ ಬಗ್ಗೆ ದರ್ಶನ್ ತಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆಂದು ಗೊತ್ತಾಗಿದೆ. ಇದೇ ಮೊದಲ ಬಾರಿಗೆ ರೆಟ್ರೋ ಗೆಟಪ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ಅಂಡರ್‌ವರ್ಲ್ಡ್ ಕತೆಯುಳ್ಳ ಚಕ್ರವರ್ತಿ ಚಿತ್ರದಲ್ಲಿ ದೀಪಾ ಸನ್ನಿಧಿ ನಾಯಕಿ. ಸಾರಥಿ ಚಿತ್ರದ ನಂತರ ದೀಪಾ ಸನ್ನಿಧಿ ಈ ಚಿತ್ರದಲ್ಲಿ ದರ್ಶನ್ ಜೊತೆಯಾಗಿ ನಟಿಸಿದ್ದಾರೆ. ಅಂಬರೀಷ ಹಾಗೂ ಐರಾವತ ಚಿತ್ರಗಳ ನಂತರ ದರ್ಶನ್ ನಟಿಸಿರುವ ಚಿತ್ರ ಇದಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
↧
ಚಕ್ರವರ್ತಿ ಮುಗಿಸಿದ ದರ್ಶನ್
↧