Quantcast
Channel: VijayKarnataka
Viewing all articles
Browse latest Browse all 6795

ಹಾಂಕಾಂಗ್‌ ಸೂಪರ್‌ ಸೀರೀಸ್‌ ಟ್ವಿನ್‌ ಟೈಟಲ್‌ ಕನಸು ಭಗ್ನ

$
0
0


ಕೌಲೂನ್‌: ಹಾಂಕಾಂಗ್‌ ಓಪನ್‌ ಸೂಪರ್‌ ಸೀರೀಸ್‌ನಲ್ಲಿ ಟ್ವಿನ್‌ ಟೈಟಲ್‌ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. ರಾಷ್ಟ್ರೀಯ ಚಾಂಪಿಯನ್‌ ಸಮೀರ್‌ ವರ್ಮಾ ಮತ್ತು ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧೂ ಫೈನಲ್‌ ಪಂದ್ಯದಲ್ಲಿ ಸೋತಿದ್ದಾರೆ.

ಎರಡನೇ ಸೂಪರ್‌ ಸೀರೀಸ್‌ ಟೈಟಲ್‌ ಪಡೆಯುವ ತವಕದಲ್ಲಿದ್ದ ಸಿಂಧೂ, ಮಹಿಳೆಯರ ಸಿಂಗಲ್ಸ್‌ನಲ್ಲಿ ಚೀನಾದ ತಾಯ್‌ ಟ್ಜು ಯಿಂಗ್‌ ವಿರುದ್ಧ ಅಂತಿಮ ಪಂದ್ಯದಲ್ಲಿ 15-21, 17-21 ಸೆಟ್‌ಗಳಲ್ಲಿ ಸೋತರು.

ವರ್ಮಾ ಸ್ಥಳೀಯ ಫೇವರಿಟ್‌ ನ್ಗಾ ಕಾ ಲಾಂಗ್‌ ಅಂಗಸ್‌ ವಿರುದ್ಧ 50 ನಿಮಿಷಗಳ ಆಟದಲ್ಲಿ 14-21, 21-10,11-21 ಸೆಟ್‌ಗಳಲ್ಲಿ ಪರಾಭವಗೊಂಡರು.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಕದನದಲ್ಲಿ ಮಿಂಚಿದ ಸಮೀರ್‌ ವಿಶ್ವದ ಮೂರನೇ ರ‍್ಯಾಂಕಿನ ಆಟಗಾರ ಜಾನ್‌ ಓ ಜೊರ್ಗೆನ್ಸೆನ್‌ಗೆ ಅಚ್ಚರಿಯ ಆಘಾತ ನೀಡಿ ಪ್ರಶಸ್ತಿ ಸುತ್ತು ತಲುಪಿದ್ದರು.

ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ವಿಶ್ವದ 9ನೇ ರಾರ‍ಯಂಕಿನ ಸಿಂಧೂ, ಹಾಂಕಾಂಗ್‌ನ ನ್ಗಾನ್‌ ಯಿ ಚೆವುಂಗ್‌ ವಿರುದ್ಧ ಸುಲಭವಾಗಿ ಗೆದ್ದು ಫೈನಲ್‌ ಪ್ರವೇಶಿಸಿದ್ದರು. ಹಿಂದಿನ ವಾರವಷ್ಟೇ ಚೀನಾ ಓಪನ್‌ ಸೂಪರ್‌ ಸೀರೀಸ್‌ನಲ್ಲಿ ಸಿಂಧೂ ಕಿರೀಟ ಎತ್ತಿ ಹಿಡಿದಿದ್ದರು.

ಚೀನಾ ಸೂಪರ್‌ ಸೀರೀಸ್‌ ಪ್ರೀಮಿಯರ್‌ ಮುಡಿಗೇರಿಸಿಕೊಂಡಿದ್ದ ಡೆನ್ಮಾರ್ಕ್‌ನ ಜೊರ್ಗೆನ್ಸೆನ್‌ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ವರ್ಮಾ, ಇದೇ ಮೊದಲ ಬಾರಿ ಸೂಪರ್‌ ಸೀರೀಸ್‌ ಟೂರ್ನಿಯಲ್ಲಿ ಅಂತಿಮ ಘಟ್ಟಕೇರಿ ಸಾಧನೆ ಮಾಡಿದ್ದರು.

Hong Kong Super Series: India's hopes of winning twin titles in the Hong Kong Open Super Series were dashed when Olympic silver medallist PV Sindhu and national champion Sameer Verma lost their respective final clashes in contrasting fashion here.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>