Quantcast
Channel: VijayKarnataka
Viewing all articles
Browse latest Browse all 6795

ಟೇಬಲ್‌ ಟೆನಿಸ್‌ ಚಾಂಪಿಯನ್ನರಿಗೆ ಹಳೆ ನೋಟೇ ಗತಿ

$
0
0

ಬೆಂಗಳೂರು: ರಾಜ್ಯಮಟ್ಟದ ಸಿವಿಎಲ್‌ ಶಾಸ್ತ್ರಿ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ರಾಜ್ಯದ ಆಟಗಾರರು ಪ್ರಶಸ್ತಿ ಸ್ವೀಕರಿಸಿದ ನಂತರ ಅಚ್ಚರಿಗೊಂಡರೆ. ಏಕೆಂದರೆ ಪ್ರಶಸ್ತಿ ಗೆದ್ದವರಿಗೆ ನೀಡಿದ ನಗದು 500 ಹಾಗೂ 1000 ರೂ.ಗಳ ಹಳೆ ನೋಟು !

ರಾಜ್ಯ ಟೇಬಲ್‌ ಟೆನಿಸ್‌ ಸಂಸ್ಥೆ ಈ ಚಾಂಪಿಯನ್‌ಷಿಪ್‌ ಆಯೋಜಿಸಿತ್ತು. ಪ್ರವೇಶ ಶುಲ್ಕ ನೀಡುವಾಗ ಹಳೆ ನೋಟಿಗೆ ಬದಲು ಹೊಸ ನೋಟನ್ನೇ ನೀಡಿ ಎಂದು ಆದೇಶಿಸಿದ್ದ ಸಂಘಟಕರು. ಪ್ರಶಸ್ತಿ ಮೊತ್ತವನ್ನು ಮಾತ್ರ ಹಳೆ ನೋಟಿನ ರೂಪದಲ್ಲಿ ನೀಡಿ, ಕ್ರೀಡಾಪಟುಗಳಿಗೆ ಬ್ಯಾಂಕ್‌ನಲ್ಲಿ ಜಮೆ ಮಾಡುವಂತೆ ಸೂಚಿಸಿದ್ದಾರೆ. ಸಂಘಟಕರ ಈ ವರ್ತನೆಗೆ ಕ್ರೀಡಾಪಟುಗಳ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದವರಿಗೂ ಹಳೆ ನೋಟುಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ''ಇದು ಸಣ್ಣ ಮೊತ್ತವಾದ ಕಾರಣ ನಾವು ಒಪ್ಪಿಕೊಂಡು ಸ್ವೀಕರಿಸಿದ್ದೇವೆ. ಆದರೆ ಇದು ಸರಿಯಾದ ಮಾರ್ಗವಲ್ಲ. ಚೆಕ್‌ ಅಥವಾ ಪೇ ಆರ್ಡರ್‌ ಮೂಲಕ ಬಹುಮಾನ ನೀಡಬಹುದಾಗಿತ್ತು,'' ಎಂದು ಬಹುಮಾನ ಪಡೆದ ಆಟಗಾರರೊಬ್ಬರ ಪೋಷಕರು ಹೇಳಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್‌. ವಸಂತ್‌ ಕುಮಾರ್‌, ''ನಮ್ಮ ಖಾತೆಯಿಂದ ಕೇವಲ 24,000 ರೂ.ಗಳನ್ನು ಪಡೆಯಲು ಸಾಧ್ಯ. ಆ ಮೊತ್ತ ನಮ್ಮ ತರ್ತು ವೆಚ್ಚಗಳನ್ನು ನೋಡಿಕೊಳ್ಳಲು ಸಾಕಾಯಿತು. ಅಂಪೈರ್‌ ವೆಚ್ಚ ಹಾಗೂ ನಗದು ಬಹುಮಾನದ ಮೊತ್ತ ಒಟ್ಟು 95,000 ರೂ. ಈ ಮೊತ್ತವನ್ನು ಬ್ಯಾಂಕ್‌ನಿಂದ ಪಡೆಯುವುದು ಹೇಗೆ?'' ಎಂದು ಪ್ರಶ್ನಿಸಿದ್ದಾರೆ.

''ಪ್ರಶಸ್ತಿ ಗೆದ್ದಿರುವವರಲ್ಲಿ ಹೆಚ್ಚಿನವರು 12ವರ್ಷದೊಳಗಿನವರು. ಅವರಲ್ಲಿ ಬ್ಯಾಂಕ್‌ ಖಾತೆ ಇರುವುದಿಲ್ಲ. ಹೆತ್ತವರ ಹೆಸರಿನಲ್ಲಿ ಸಂಸ್ಥೆ ಚೆಕ್‌ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಚೆಕ್‌ನಲ್ಲಿ ನೀಡಿದರೂ ಎಲ್ಲ ಆಟಗಾರರಿಗೆ ನೀಡುವಷ್ಟು ಚೆಕ್‌ ನಮ್ಮಲ್ಲಿಲ್ಲ.ನಾವು ಸಂಗ್ರಹಿಸಿರುವ ಹಣವನ್ನು ಎಲ್ಲ ಬಾಡಿಗೆಗಳಿಗೆ ನೀಡಿದ್ದೇವೆ. ಒಂದು ವೇಳೆ ಆಟಗಾರರು ಈ ಹಣವನ್ನು ಹಿಂದಿರುಗಿಸಿದರೆ ಅವರಿಗೆ ಸ್ವಲ್ಪ ಸಮಯದ ನಂತರ ಹೊಸ ನೋಟನ್ನು ನೀಡುತ್ತೇವೆ, '' ಎಂದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>