ಮುಂಬಯಿ: ದೇಶದಲ್ಲಿನ ನಾನಾ ಬ್ಯಾಂಕ್‌ಗಳು ನ.10ರಿಂದ 18ರ ತನಕ ಸುಮಾರು 5.44 ಲಕ್ಷ ಕೋಟಿ ರೂ. ಹಳೆ ನೋಟುಗಳ ಠೇವಣಿ ಮತ್ತು ವಿನಿಮಯ ವಹಿವಾಟನ್ನು ನಡೆಸಿವೆ. ಇದೇ ವೇಳೆ, ಸುಮಾರು 1 ಲಕ್ಷ ಕೋಟಿ ರೂ. ಹಣವನ್ನು ಎಟಿಎಂ ಮತ್ತು ತನ್ನ ಶಾಖೆಗಳ ಮೂಲಕ ಗ್ರಾಹಕರಿಗೆ ವಿತರಿಸಿವೆ ಎಂದು ಆರ್‌ಬಿಐ ಹೇಳಿದೆ. ನ.8ರ ಮಧ್ಯರಾತ್ರಿಯಿಂದಲೇ ನೋಟುಗಳ ಅಮಾನ್ಯತೆ ನೀತಿಯನ್ನು ಸರಕಾರ ಜಾರಿಗೊಳಿಸಿದ್ದು, ರದ್ದಾದ ಹಳೆಯ 500 ಮತ್ತು 1000 ರೂ. ನೋಟುಗಳನ್ನು ಜನರು ಬ್ಯಾಂಕ್‌ಗಳಿಗೆ ನೀಡುತ್ತಿದ್ದು, ಬೃಹತ್ ಮೊತ್ತ ಸಂಗ್ರಹವಾಗಿದೆ. ನವೆಂಬರ್ 18ರ ತನಕ ಬ್ಯಾಂಕ್‌ಗಳಿಗೆ 5,44,571 ಕೋಟಿ ರೂ. ಜಮೆಯಾಗಿದೆ. ಇದರಲ್ಲಿ 33,006 ಕೋಟಿ ರೂ.ಗಳ ವಿನಿಮಯ ವಹಿವಾಟು ಸೇರಿದ್ದು, ಗ್ರಾಹಕರ ಠೇವಣಿ ಖಾತೆಗಳಿಗೆ 5,11,565 ಕೋಟಿ ರೂ. ಹರಿದು ಬಂದಿದೆ. ಇದೇ ವೇಳೆ ಗ್ರಾಹಕರಿಗೆ 1,03,316 ಕೋಟಿ ರೂ. ವಿತರಣೆ ಮಾಡಲಾಗಿದೆ.
↧
ಬ್ಯಾಂಕಿಗೆ ಬಂದಿದ್ದು 5 ಲಕ್ಷ ಕೋಟಿ, ಹೋಗಿದ್ದು 1 ಲಕ್ಷ ಕೋಟಿ!
↧