Quantcast
Channel: VijayKarnataka
Viewing all articles
Browse latest Browse all 6795

ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಬಂಕ್‌ನಲ್ಲೂ ಹಣ ಪಡೆಯಬಹುದು!

$
0
0

ಹೊಸದಿಲ್ಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ದಿಢೀರ್ ನಿಷೇಧಿಸಿದ್ದರಿಂದ ದೇಶದಲ್ಲಿ ತಲೆದೂರಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಂಬಂಧಿಸಿದ ಇಲಾಖೆ ಸಾಕಷ್ಟು ಕ್ರಮಗಳಿಗೆ ಮುಂದಾಗಿದ್ದು, ಇಂದಿನಿಂದ ಪೆಟ್ರೋಲ್‌ ಬಂಕ್‌ಗಳಲ್ಲಿಯೂ ಹಣ ವಿತರಿಸಲು ಮುಂದಾಗಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೈಪ್ ಮಾಡಿದರೆ 2 ಸಾವಿರ ರೂ.ವರೆಗೂ ಹಣ ಪಡೆಯಬಹುದು. ಈ ಸೌಲಭ್ಯವನ್ನು ದೇಶದ 2,500 ಪೆಟ್ರೋಲ್ ಪಂಪ್‌ಗಳಲ್ಲಿ ಮಾತ್ರ ಸದ್ಯಕ್ಕೆ ಒದಗಿಸಲಾಗಿದೆ.

ಇನ್ನು ಮೂರು ದಿನಗಳಲ್ಲಿಎಚ್‌ಡಿಎಫ್‌ಸಿ ಬ್ಯಾಂಕ್, ಸಿಟಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಸ್ವೈಪ್ ಯಂತ್ರಗಳಿರುವ 20 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಈ ಸೌಲಭ್ಯ ವಿಸ್ತರಣೆಯಾಗಲಿದೆ.

ಹೊಸ ನೋಟುಗಳ ವಿತರಣೆಗೆ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಜನ ಸಂದಣಿ ಹೆಚ್ಚಾಗಿದ್ದು, ಸುಗಮ ವ್ಯವಹಾರಕ್ಕೆ ಅಡೆತಡೆಯಾಗಿದೆ. ಈ ನಿಟ್ಟಿನಲ್ಲಿ ಇಂಥದ್ದೊಂದು ಪ್ರಯೋಗಕ್ಕೆ ಅಖಿಲ ಭಾರತ ಪೆಟ್ರೋಲಿಯಂ ವ್ಯಾಪಾರಿಗಳ ಸಂಘವೇ ಸಲಹೆ ನೀಡಿತ್ತು.

ಪೆಟ್ರೋಲ್ ಬಂಕ್‌ಗಳಲ್ಲಿಯೂ ಹಣಕ್ಕಾಗಿ ಜನರ ಮುಗಿ ಬೀಳುವ ಸಾಧ್ಯತೆ ಇದ್ದು, ಇದರಿಂದ ಪೆಟ್ರೋಲ್‌ಗಾಗಿ ನಿಲ್ಲುವ ಜನರಿಗೆ ತೊಂದರೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ.

ಇಂಥದ್ದೊಂದು ಯೋಜನೆ ಜಾರಿಗೊಳಿಸಲು ಗುರುವಾರ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂನ ಹಿರಿಯ ಅಧಿಕಾರಿಗಳೊಂದಿಗೆ ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಚಾರ್ಯ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಯಿತು.

ಅಗತ್ಯ ಸೇವಾ ಕ್ಷೇತ್ರಗಳಲ್ಲಿ ಹಳೆ ನೋಟುಗಳ ಚಲಾವಣೆಗೆ ಸರಕಾರ ನ.24ರವರೆಗೆ ಅವಕಾಶ ನೀಡಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಹಣ ವಿತರಿಸುವ ವ್ಯವಸ್ಥೆಯನ್ನು ನಂತರವೂ ಮುಂದುವರಿಸಲಾಗುವುದು ಎಂದು ಹೇಳಲಾಗುತ್ತಿದೆ. ಪ್ರತಿ ಡೆಬಿಟ್ ಕಾರ್ಡ್‌ಗೆ ಹಣ ಪಡೆಯುವ ಮಿತಿಯನ್ನು 2000 ರೂ.ಗೆ ಮಿತಿಗೊಳಿಸಲಾಗಿದೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>