ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಕಾರವು ಕೆಪಿಟಿಸಿಎಲ್‌ನ ಇರುವ ನಾನಾ ಹುದ್ದೆಗಳ ನೇಮಕಕ್ಕೆ ಕನ್ನಡ ಭಾಷಾ ಪರೀಕ್ಷೆಯನ್ನು ಡಿಸೆಂಬರ್ 3ರಂದು ಬೆಂಗಳೂರು ಕೇಂದ್ರದಲ್ಲಿ ನಡೆಸಲಿದೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಮೊದಲನೇ ಅಥವಾ ಎರಡನೇ ಭಾಷೆಯನ್ನಾಗಿ ವ್ಯಾಸಂಗ ಮಾಡದಿರುವ ಅಭ್ಯರ್ಥಿಗಳಿಗೆ ಈ ಪರೀಕ್ಷೆ ನಡೆಯಲಿದೆ. ವಿವರವಾದ ವೇಳಾಪಟ್ಟಿ ಹಾಗೂ ಪಠ್ಯಕ್ರಮವನ್ನು ಪ್ರಾಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರವೇಶ ಪತ್ರಗಳನ್ನು ಪ್ರಾಕಾರದ ವೆಬ್‌ಸೈಟ್‌ನಿಂದ ನ. 22ರ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ http://kea.kar.nic.in ಸಂಪರ್ಕಿಸಬಹುದು.
↧
ಡಿ. 3ರಂದು ಕನ್ನಡ ಭಾಷಾ ಪರೀಕ್ಷೆ
↧