ಸಾಮಾಜಿಕ ಜಾಲತಾಣ ಎನ್ನುವ ಮಾಯೆ ಯಾರನ್ನೂ ಬಿಡುವುದಿಲ್ಲ. ಜಗತ್ತಿನ ಶೇಕಡಾ 50ರಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿದ್ದಾರೆ. ಅದಕ್ಕೆ ನಮ್ಮ ಸ್ಟಾರ್ ನಟ-ನಟಿಯರು ಹೋರತಾಗಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಅವರ ಮಕ್ಕಳ ಸರದಿ. ಕನ್ನಡದಲ್ಲಿ ಮೊಟ್ಟ ಮೊದಲಿಗೆ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದಾರೆ ನಟ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಪುತ್ರಿ ಐಶ್ವರ್ಯಾ. - ಹರೀಶ್ ಬಸವರಾಜ್ ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟರ ಮಕ್ಕಳೂ ಫೇಮಸ್ ಆಗುತ್ತಿದ್ದಾರೆ. ಇದರ ಅರ್ಥ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಲ್ಲ. ಬದಲಿಗೆ ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಕ್ರಿಯೆಟ್ ಮಾಡಿಕೊಂಡು ತಾವೂ ಕೂಡಾ ತಮ್ಮ ಪೋಷಕರಂತೆ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಈ ಮೊದಲು ಬಾಲಿವುಡ್ ಮತ್ತು ಹಾಲಿವುಡ್ ನಟ ನಟಿಯರ ಮಕ್ಕಳು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯಾಗುತ್ತಿದ್ದರು. ಈಗ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಮಕ್ಕಳು ಕೂಡಾ ನಾವ್ಯಾರಿಗೂ ಕಮ್ಮಿ ಇಲ್ಲ ಎಂದು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಕೇಳಿ ಬಂದ ಹೆಸರು ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯಾ ಉಪೇಂದ್ರ. ಹೌದು. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಸಾಕಷ್ಟು ಫಾಲೋವರ್ಸ್ ಇದ್ದಾರೆ. ಅಪ್ಪನಂತೆಯೇ ಐಶ್ವರ್ಯಾ ಸಹ ಸಖತ್ ಬುದ್ದಿವಂತೆ , ದಿ ವ್ಯಾಲಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾಳೆ. ಓದಿನಲ್ಲಿ ಸದಾ ಮುಂದು. ಕ್ರೀಡೆಯಲ್ಲೂ ಎತ್ತಿದ ಕೈ. ಇದೆಲ್ಲದರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲೂ ಫುಲ್ ಆ್ಯಕ್ಟೀವ್. ಈ ವರ್ಷದ ಆರಂಭದಲ್ಲೇ ಇನ್‌ಸ್ಟಾಗ್ರಾಮ್‌ಗೆ ಬಂದ ಐಶ್ವರ್ಯಾ, ತನ್ನ ಫೋಟೋ ಮತ್ತು ಕುಟುಂಬದ ಜತೆಗಿನ ವಿದೇಶ ಪ್ರಯಾಣದ ಫೋಟೋಗಳನ್ನು ಆಪ್‌ಲೋಡ್ ಮಾಡಿದ್ದಾರೆ. ಅಲ್ಲದೆ ತನ್ನ ಸಹೋದರ ಆಯುಷ್ ಉಪೇಂದ್ರ ಜತೆಯ ಚಿತ್ರಗಳು, ತನ್ನ ಪ್ರೀತಿಯ ನಾಯಿ ಸಿಂಬಾ ಫೋಟೋಗಳು ಐಶ್ವರ್ಯ ಅಕೌಂಟ್‌ನಲ್ಲಿವೆ. ಅಪ್ಪ ಉಪೇಂದ್ರ ಮತ್ತು ಅಮ್ಮ ಪ್ರಿಯಾಂಕಾ ಅವರಿಗೆ ಇರುವಂತೆ ಐಶ್ವರ್ಯಾ ಅವರಿಗೂ ಫ್ಯಾನ್ಸ್ ಫಾಲೋಯರ್ಸ್ ಇದ್ದಾರೆ. ಸುಮಾರು 600 ಕ್ಕೂ ಹೆಚ್ಚು ಮಂದಿ ಐಶ್ವರ್ಯಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಬರೀ ಐದನೇ ತರಗತಿಗೆ ಇಷ್ಟೋಂದು ಖ್ಯಾತಿಯಾಗಿರುವ ಐಶ್ವರ್ಯಾ ಮುಂದಿನ ದಿನಗಳಲ್ಲಿ ಅಪ್ಪನಂತೆ ಆಗಬೇಕು ಎಂದು ಕನಸು ಕಂಡಿದ್ದಾಳೆ. ನನ್ನ ಮಗಳು ಐಶ್ವರ್ಯಾ ಸೋಷಿಯಲ್ ಮಿಡಿಯಾಗೆ ಬರುತ್ತೇನೆ ಎಂದಾಗ ನಾನು ಬೇಡವೆಂದಿದ್ದೆ. ಆದರೆ ಅವಳು ಸ್ವಲ್ಪ ಕ್ರಿಯೇಟಿವ್ ಆಗಿದ್ದಾಳೆ, ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾಳೆ, ನಮ್ಮ ಕುಟುಂಬದವರು ಕೊಲ್ಕತ್ತಾ, ಅಮೇರಿಕ ಸೇರಿದಂತೆ ಬೇರೆ ಬೇರೆ ಕಡೆ ಇರುವ ಕಾರಣ ಅವರೊಂದಿಗೆ ಸಂಪರ್ಕದಲ್ಲಿರಲಿ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಅಲ್ಲದೆ ಫೇಸ್‌ಬುಕ್ ಮತ್ತು ಟ್ವಿಟರ್‌ಗಿಂತಲೂ ಇನ್‌ಸ್ಟಾಗ್ರಾಮ್ ಸೇಫ್ ಎಂದು ತಿಳಿಯಿತು. ಫೇಸ್‌ಬುಕ್‌ನಂತೆ ಸುಖಾಸುಮ್ಮನೆ ಟ್ಯಾಗ್ ಮಾಡಲು ಸಾಧ್ಯವಿಲ್ಲ, ಇನ್ನು ಹಾಕಿರುವ ಫೋಟೋಗಳನ್ನು ಕಾಪಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇನ್‌ಸ್ಟಾಗ್ರಾಮ್‌ನ್ನು ಆಯ್ಕೆ ಮಾಡಿಕೊಂಡೆವು. ಸಾಮಾಜಿಕ ಜಾಲತಾಣದಿಂದ ಒಳ್ಳೆಯದು ಇದೆ, ಕೆಟ್ಟದ್ದೂ ಇದೆ. ಅದನ್ನು ಬಳಸಿಕೊಳ್ಳುವುದರ ಮೇಲೆ ಎಲ್ಲವೂ ಅವಲಂಭಿಸಿದೆ. -ಪ್ರಿಯಾಂಕಾ ಉಪೇಂದ್ರ, ನಟಿ
↧
ಇನ್‌ಸ್ಟಾಗ್ರಾಮ್‌ನಲ್ಲಿ ಉಪ್ಪಿ ಮಗಳು ಫುಲ್ ಫೇಮಸ್
↧