Quantcast
Channel: VijayKarnataka
Viewing all articles
Browse latest Browse all 6795

ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡದಲ್ಲಿ ವಿಜೇಂದರ್‌

$
0
0

ಡಿ.17ಕ್ಕೆ ವಿಜೇಂದರ್‌-ಫ್ರಾನ್ಸಿಸ್‌ ಚೇಕಾ ಮುಖಾಮುಖಿ

ಹೊಸದಿಲ್ಲಿ: ಭಾರತದ ಬಾಕ್ಸಿಂಗ್‌ ತಾರೆ ವಿಜೇಂದರ್‌ ಸಿಂಗ್‌ ತಮ್ಮ ಡಬ್ಲ್ಯುಬಿಒ ಸೂಪರ್‌ ಮಿಡಲ್‌ವೇಟ್‌ ಏಷ್ಯಾ ಪೆಸಿಫಿಕ್‌ ಪ್ರಶಸ್ತಿ ಉಳಿಸಿಕೊಳ್ಳಲು ಡಿಸೆಂಬರ್‌ 17ರಂದು ಮಾಜಿ ವಿಶ್ವ ಮತ್ತು ಪ್ರಸ್ತುತ ಇಂಟರ್‌ಕಾಂಟಿನೆಂಟಲ್‌ ಚಾಂಪಿಯನ್‌ ಫ್ರಾನ್ಸಿಸ್‌ ಚೇಕಾ ಅವರನ್ನು ಎದುರಿಸಲಿದ್ದಾರೆ.

ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಫ್ರಾನ್ಸಿಸ್‌ ಚೇಕಾ ವೃತ್ತಿಪರತೆಯಲ್ಲಿ ಇತ್ತೀಚೆಗಷ್ಟೇ ಹಂಬೆಗಾಲಿಡುತ್ತಿರುವ ಭಾರತೀಯ ಬಾಕ್ಸರ್‌ಗೆ ದೊಡ್ಡ ಸವಾಲೆನಿಸಿದ್ದಾರೆ. ತಾಂಜೇನಿಯಾ 34 ವರ್ಷದ ಅನುಭವಿ ಬಾಕ್ಸರ್‌ ಚೇಕಾ, ಈವರೆಗೆ ಆಡಿರುವ 43 ಪಂದ್ಯಗಳ ಪೈಕಿ 17 ನಾಕೌಟ್‌ ಸೇರಿದಂತೆ 32ರಲ್ಲಿ ವಿಜಯೋತ್ಸವ ಆಚರಿಸಿದ್ದಾರೆ. ಮತ್ತು ಅಗ್ರ ಸೂಪರ್‌ ಮಿಡಲ್‌ವೇಟ್‌ ಸ್ಟಾರ್‌ಗಳಾದ ರಷ್ಯಾದ ಡಬ್ಲ್ಯುಬಿಎ ವಿಶ್ವ ಚಾಂಪಿಯನ್‌ ಫೆಡೋರ್‌ ಚುಡಿನೊವ್‌ ಮತ್ತು ಅಮೆರಿಕದ ಡಬ್ಲ್ಯುಬಿಸಿ ಇಂಟರ್‌ನ್ಯಾಷನಲ್‌ ಚಾಂಪಿಯನ್‌ ಮ್ಯಾಥ್ಯೂ ಮೆಕ್ಲಿನ್‌ ವಿರುದ್ಧ ಹೋರಾಡಿದ ಅನುಭವ ಹೊಂದಿದ್ದಾರೆ.

ಮಾಜಿ ಡಬ್ಲ್ಯುಬಿಎಫ್‌ ವಿಶ್ವ ಚಾಂಪಿಯನ್‌ ಮತ್ತು ಪ್ರಸ್ತುತ ಅಂಟರ್‌ಕಾಂಟಿನೆಂಟಲ್‌ ಸೂಪರ್‌ ಮಿಡಲ್‌ವೇಟ್‌ ಚಾಂಪಿಯನ್‌ಷಿಪ್‌ ಕಿರೀಟ ಗೆದ್ದಿರುವ ಚೇಕಾ, ಕಳೆದ ಫೆಬ್ರವರಿಯಲ್ಲಿ ಸರ್ಬಿಯಾದ ಗಿಯಾರ್ಡ್‌ ಅಜೆಟೊವಿಕ್‌ ವಿರುದ್ಧ ಗೆದ್ದು ಚಾಂಪಿಯನ್‌ ಆಗಿದ್ದಾರೆ.

ಇತ್ತ ಅಮೆಚೂರ್‌ನಿಂದ ವೃತ್ತಿಪರ ಬಾಕ್ಸಿಂಗ್‌ಗೆ ಹೊರಳಿರುವ ವಿಜೇಂದರ್‌ ವೃತ್ತಿ ಬದುಕಿನಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಎದುರಾಳಿಗಳಲ್ಲಿ ನಡುಕ ಉಂಟು ಮಾಡಿದ್ದಾರೆ. ವಿಜೇಂದರ್‌ ಇತ್ತೀಚೆಗೆ ವೃತ್ತಿಪರ ಬಾಕ್ಸಿಂಗ್‌ ಆರಂಭಿಸಿದ್ದರೂ ಸಾಕಷ್ಟು ಅನುಭವ ಗಳಿಸಿದ್ದು, ಪ್ರಬಲ ಎದುರಾಳಿ ಎನಿಸಿದ್ದಾರೆ. ಸದ್ಯ ಆರು ನಾಕೌಟ್‌ ಸೇರಿದಂತೆ ಆಡಿದ ಏಳು ಪಂದ್ಯಗಳಲ್ಲೂ ವಿಜೇಂದರ್‌ ಗೆಲುವಿನ ದಾಖಲೆ ಬರೆದಿದ್ದಾರೆ. ಕಳೆದ ಜುಲೈನಲ್ಲಿ ದಿಲ್ಲಿಯ ತ್ಯಾಗ್‌ರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನಲ್ಲಿ ಆಸ್ಪ್ರೇಲಿಯಾದ ಕೆರ್ರಿ ಹೋಪ್‌ ಅವರನ್ನು ಮಣಿಸಿದ್ದ ವಿಜೇಂದರ್‌, ಮೊದಲ ಬಾರಿಗೆ ವೃತ್ತಿ ಬದುಕಿನಲ್ಲಿ ಡಬ್ಲ್ಯುಬಿಒ ಸೂಪರ್‌ ಮಿಡಲ್‌ವೇಟ್‌ ಏಷ್ಯಾ ಪೆಸಿಫಿಕ್‌ ಕಿರೀಟ ಗೆದ್ದುಕೊಂಡ ಸಾಧನೆ ಮಾಡಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>