Quantcast
Channel: VijayKarnataka
Viewing all articles
Browse latest Browse all 6795

ಇತಿಹಾಸ ಬರೆದ ಅದಿತಿ ಅಶೋಕ್‌

$
0
0

ಇಂಡಿಯನ್‌ ಓಪನ್‌ ಮಹಿಳಾ ಗಾಲ್ಫ್‌ ಟೂರ್ನಿ ಗೆದ್ದ ಬೆಂಗಳೂರಿನ ಗಾಲ್ಫರ್‌

ಗುರುಗ್ರಾಮ್‌: ಅಂತಿಮ ಸುತ್ತಿನಲ್ಲಿ ನಿಖರ ಗುರಿಯೊಂದಿಗೆ ಮಿಂಚಿದ ಯುವ ಗಾಲ್ಫರ್‌ ಬೆಂಗಳೂರಿನ ಆದಿತಿ ಅಶೋಕ್‌ ಇಲ್ಲಿ ನಡೆದ ಇಂಡಿಯನ್‌ ಓಪನ್‌ ಮಹಿಳಾ ಗಾಲ್ಫ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಮಹಿಳಾ ಯುರೋಪಿಯನ್‌ ಟೂರ್‌ ಪ್ರಶಸ್ತಿ ಗೆದ್ದ ಭಾರತದ ಮೊಟ್ಟ ಮೊದಲ ಗಾಲ್ಫರ ಎಂಬ ಕೀರ್ತಿಗೆ ಅದಿತಿ ಪಾತ್ರರಾದರು.

ಇಲ್ಲಿನ ಡಿಎಫ್‌ಎಫ್‌ ಗಾಲ್ಫ್‌ ಮತ್ತು ಕಂಟ್ರಿ ಕ್ಲಬ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಎರಡು ಸ್ಟ್ರೋಕ್‌ಗಳ ಮುನ್ನಡೆಯೊಂದಿಗೆ ಆಟ ಮುಂದುವರಿಸಿದ 18ರ ಹರೆಯದ ಗಾಲ್ಫರ್‌ ಅಂತಿಮವಾಗಿ 72 ಶಟ್‌ಗಳಲ್ಲಿ ಪಾರ್‌ನೊಂದಿಗೆ ಗುರಿ ಮುಟ್ಟುವ ಮೂಲಕ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಅದಿತಿಗೆ ತೀವ್ರ ಸ್ಪರ್ಧೆ ನೀಡಿದ ಅಮೆರಿಕದ ಗಾಲ್ಫರ್‌ ಬ್ರಿಟಾನಿ ಲೈನ್ಸಿಕೋಮ್‌ ಮತ್ತು ಸ್ಪೇನ್‌ನ ಬೆಲೆನ್‌ ಮೊಜೊ ಜಂಟಿ ಎರಡನೇ ಸ್ಥಾನ ಗಳಿಸಿದರು.

ಒಲಿಂಪಿಯನ್‌ ಗಾಲ್ಫರ್‌ ಅದಿತಿ ಕೊನೆಯ ಹೋಲ್‌ನಲ್ಲಿ ಬರ್ಡಿ ಗಳಿಸಿದರಷ್ಟೇ ಚಾಂಪಿಯನ್‌ಷಿಪ್‌ ಲಭ್ಯವಾಗುತ್ತಿತ್ತು. ಇಲ್ಲವಾದಲ್ಲಿ ಒಟ್ಟಾರೆ ಮೂವರು ಗಾಲ್ಫರ್‌ಗಳು ಚಾಂಪಿಯನ್‌ಷಿಪ್‌ ಹಂಚಿಕೊಳ್ಳುವಂತಾಗುತ್ತಿತ್ತು. ಈ ಹಂತದಲ್ಲಿ ಒತ್ತಡ ಮೆಟ್ಟಿನಿಂತ ಯುವ ಪ್ರತಿಭೆ ಟೂರ್ನಿಯಲ್ಲಿನ ತಮ್ಮ 13 ಬರ್ಡಿ ಗಳಿಸುವಲ್ಲಿ ಯಶಸ್ವಿಯಾಗಿ ಇತಿಹಾಸ ಸೃಷ್ಟಿಸಿದರು. ಅಲ್ಲದೆ ರೂ. 40 ಲಕ್ಷ ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು.

ಶನಿವಾರದ ಆಟದಲ್ಲಿ ಜಂಟಿ 9ನೇ ಸ್ಥಾನದಲ್ಲಿದ್ದ ಅದಿತಿ, ಅಮೋಘ ಪ್ರದರ್ಶನ ನೀಡಿ 3 ಅಂಡರ್‌ 69 ಶಾಟ್ಸ್‌ಗಳ ಮೂಲಕ ಎರಡು ಶಾಟ್‌ಗಳ ಮುನ್ನಡೆ ಪಡೆದು ಏಕಾಂಗಿಯಾಗಿ ಅಗ್ರಸ್ಥಾನ ಅಲಂಕರಿಸುವಲ್ಲಿ ಸಫಲರಾದರು. ಅಂತೆಯೇ ಅಂತಿಮ ದಿನವಾದ ಭಾನುವಾರ ಮುನ್ನಡೆ ಕಾಯ್ದುಕೊಂಡು ಚಾಂಪಿಯನ್‌ ಪಟ್ಟ ಪಡೆದರು.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>