ಹಾರರ್ ಸಿನಿಮಾಗಳು ಹಿಟ್ ಆಗುತ್ತಿರುವ ಕಾರಣ, ಇಂತಹ ಚಿತ್ರಗಳಲ್ಲಿ ನಟಿಸಲು ನಾಯಕಿಯರು ತುದಿಗಾಲಲ್ಲಿ ನಿಲ್ಲುತ್ತಿದ್ದಾರೆ. ಆ ಸಾಲಿಗೆ ವಂದನಾ ಪ್ರಿಯ ಕೂಡ ಕಾಣಸಿಗುತ್ತಾರೆ. ಕನ್ನಡದಲ್ಲಿ ಹಾರರ್ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಇಂತಹ ಚಿತ್ರಗಳು ಗೆಲ್ಲುತ್ತಿರುವ ಕಾರಣ, ಈ ಸಿನಿಮಾಗಳಲ್ಲಿ ನಟಿಸಲು ನಾಯಕಿಯರೂ ಕೂಡ ತುದಿಗಾಲಲ್ಲಿ ನಿಲ್ಲುತ್ತಿದ್ದಾರೆ. ಆ ಸಾಲಿಗೆ ವಂದನಾ ಪ್ರಿಯ ಕೂಡ ಸೇರ್ಪಡೆ ಆಗಿದ್ದಾರೆ. ಕೆ.ನರೇಂದ್ರ ಬಾಬು ನಿರ್ದೇಶನದಲ್ಲಿ ಹೊಸ ಚಿತ್ರವೊಂದು ಮೂಡಿ ಬರುತ್ತಿದ್ದು, ವಂದನಾ ಪ್ರಿಯ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈಗ ಹೊಸ ಬಗೆಯ ಚಿತ್ರಗಳು ಗೆಲ್ಲುತ್ತಿವೆ. ಹೊಸ ಕಲಾವಿದರು ಕೂಡ ಬೆಳಕಿಗೆ ಬರುತ್ತಿದ್ದಾರೆ. ಹಾಗಾಗಿ ಪ್ರಯೋಗಾತ್ಮಕ ಚಿತ್ರಗಳನ್ನು ಒಪ್ಪಿಕೊಳ್ಳಲು ಖುಷಿ ಆಗುತ್ತಿದೆ ಅನ್ನುವುದು ಇವರ ಮಾತು. ನಿರ್ದೇಶಕರೇ ಚಿತ್ರಕ್ಕೆ ಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ನಂ.9 ಹಿಲ್ ಹೌಸ್ ಎಂಬ ಹೆಸರಿನಲ್ಲಿ ಚಿತ್ರ ಮೂಡಿ ಬರುತ್ತಿದೆ. ಸಿನಿಮಾದ ಕತೆಯೇ ವಿಶೇಷವಾಗಿದೆಯಂತೆ. ಟೀಚರ್ ಒಬ್ಬರು ಬದುಕಿನಲ್ಲಿ ನಡೆಯುವ ಘಟನೆಗಳನ್ನು ಸಿನಿಮಾ ಮಾಡುತ್ತಿದ್ದಾರಂತೆ ನಿರ್ದೇಶಕರು. ಮಧ್ಯೆ ರಾತ್ರಿ ಓದುತ್ತಿದ್ದ ಟೀಚರ್‌ಗೆ ಇದ್ದಕ್ಕಿದ್ದಂತೆಯೇ ಹಾಲ್‌ನಲ್ಲಿದ್ದ ಟಿವಿ ಆನ್ ಆಗುತ್ತದೆ. ಆನಂತರ ಅದು ಕಣ್ಣಾಮುಚ್ಚಾಲೆ ಆಡುತ್ತದೆ. ನಂತರ ಆ ಮನೆಯಲ್ಲಿ ಏನೆಲ್ಲ ಘಟನೆಗಳು ನಡೆಯುವುದಕ್ಕೆ ಶುರುವಾಗುತ್ತವೆ. ಭಯದಿಂದ ಮೊಬೈಲ್‌ನ್ನು ಮುಟ್ಟುವ ಟೀಚರ್, ತಾನಾಗಿಯೇ ಮಸೇಜ್‌ವೊಂದು ಸೆಂಡ್ ಆಗಿರುವುದು ಗೊತ್ತಾಗುತ್ತದೆ. ಆ ಮಸೇಜ್ ಯಾರಿಗೆ ತಲುಪಿದೆ ಮತ್ತು ಅಲ್ಲಿಂದ ಏನಾಗಲಿದೆ ಅನ್ನುವುದೇ ಸಿನಿಮಾದ ಕತೆಯಂತೆ. ವಂದನಾ ಪ್ರಿಯ, ಕಿರಣ್ ಭಗವಾನ್ ಮತ್ತು ದಿವ್ಯ ರಾವ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ನವ, ಮಧು ಸಾಗರ್, ಎಂ. ಭೈರೇಗೌಡ ಮುಂತಾದವರ ತಾರಾಗಣವಿದೆ. ಗಿರಿಧರ್ ದಿವಾನ್ ಹಿನ್ನೆಲೆ ಸಂಗೀತದಲ್ಲಿ ಚಿತ್ರ ಮೂಡಿ ಬಂದಿದ್ದು, ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ.
↧
ಹಿಲ್ ಹೌಸ್‌ನಲ್ಲಿ ವಂದನಾ
↧