Quantcast
Channel: VijayKarnataka
Viewing all articles
Browse latest Browse all 6795

ಸರ್ಜಿಕಲ್‌ ದಾಳಿಗೆ ಅವಮಾನ: ನಿರುಪಮ್‌ಗೆ ಬೆದರಿಕೆ ಕರೆ

$
0
0

ಮುಂಬಯಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ದಾಳಿಗೆ ಪುರಾವೆ ಕೊಡಿ, ಇಲ್ಲದಿದ್ದರೆ ಅದೊಂದು ನಕಲಿ ಕಾರಾರ‍ಯಚರಣೆ ಎನ್ನಬೇಕಾಗುತ್ತದೆ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌ಗೆ ಗ್ಯಾಂಗ್‌ಸ್ಟರ್‌ ರವಿ ಪೂಜಾರಿಯಿಂದ ಜೀವ ಬೆದರಿಕೆ ಕರೆ ಬಂದಿದೆ.

ನಿರುಪಮ್‌ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದ್ದಂತೆಯೇ ಅವರ ಪತ್ನಿ ಗೀತಾ, ''ನಮ್ಮ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ವಾಸಕ್ಕೆ ಭಾರತ ಸುರಕ್ಷಿತವಲ್ಲ ಎಂಬ ಭೀತಿ ಮನೆ ಮಾಡಿದೆ. ಸೂಕ್ತ ರಕ್ಷಣೆ ಒದಗಿಸಿ,'' ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಇದರ ಮಧ್ಯೆ ಶುಕ್ರವಾರ ನಿರುಪಮ್‌, ''ಅಕ್ಟೋಬರ್‌ 5ರಂದು ಗ್ಯಾಂಗಸ್ಟರ್‌ ರವಿ ಪೂಜಾರಿ ನಮ್ಮ ಮನೆಯ ಲ್ಯಾಂಡ್‌ಲೈನ್‌ಗೆ ವಿದೇಶಿ ದೂರವಾಣಿ ಸಂಖ್ಯೆಯಿಂದ ಕರೆ ಮಾಡಿ, ಸರ್ಜಿಕಲ್‌ ದಾಳಿಯನ್ನು ಅವಮಾನಿಸಿದ್ದಕ್ಕಾಗಿ ದೇಶದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ,'' ಎಂದು ಬೆದರಿಕೆ ಹಾಕಿದ್ದಾನೆಂದು ತಿಳಿಸಿದ್ದಾರೆ. ಈ ಸಂಬಂಧ ಅವರು ವಾರ್ಸೊವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಮುಂಬಯಿ ಪೊಲೀಸ್‌ ಆಯುಕ್ತರಿಂದ ಯಾವುದೇ ಭರವಸೆ ಬಂದಿಲ್ಲ ಎಂದವರು ದೂರಿದ್ದಾರೆ.

ಹೇಳಿಕೆಗೆ ಬದ್ಧ: ''ಈ ಸರ್ಜಿಕಲ್‌ ದಾಳಿಗೂ ಮೊದಲು ಸೇನೆಯು ಇದೇ ಬಗೆಯ ಕಾರಾರ‍ಯಚರಣೆಗಳನ್ನು ಕೈಗೊಂಡಿತ್ತು. ಆದರೆ ಎಲ್ಲೂ ಬಹಿರಂಗಗೊಳಿಸಲಾಗಿರಲಿಲ್ಲ. ಈಗ ಬಿಜೆಪಿಯು ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ,'' ಎಂದು ದೂರಿರುವ ನಿರುಪಮ್‌ ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದಿದ್ದಾರೆ. ''ನಮ್ಮ ಸೇನೆಯ ಬಗ್ಗೆ ಹೆಮ್ಮೆ ಇದೆ. ಆದರೆ ದಾಳಿಗೆ ಪುರಾವೆ ಏಕೆ ಕೇಳಬಾರದು? ಪಾಕಿಸ್ತಾನವು ದಾಳಿ ನಡೆದೇ ಇಲ್ಲ ಎಂದು ವಾದಿಸುತ್ತಿರುವ ಹೊತ್ತಿನಲ್ಲಿ ಅದರ ಬಾಯಿ ಮುಚ್ಚಿಸಲು ಸಾಕ್ಷ್ಯಗಳನ್ನು ಕೇಳುವುದರಲ್ಲಿ ತಪ್ಪೇನಿದೆ,'' ಎಂದು ಪ್ರಶ್ನಿಸಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>