Quantcast
Channel: VijayKarnataka
Viewing all articles
Browse latest Browse all 6795

ಸೇವೆಯೆಂದರೆ ಹೀಗಿರಬೇಕು.....

$
0
0

ಒಂದು ಊರು, ಆ ಊರಿನಿಂದ ಎರಡು ಮೈಲು ಅಂತರದಲ್ಲಿ ಒಂದು ಎತ್ತರದ ಬೆಟ್ಟವಿತ್ತು. ಆ ಬೆಟ್ಟದ ಮೇಲೆ ಒಂದು ವಿಶಾಲ ಸ್ಥಳವಿತ್ತು. ಆ ಊರಿನ ರಾಜನಿಗೆ ಆಲ್ಲಿ ಒಂದು ಸುಂದರ ಗುಡಿಯನ್ನು ಕಟ್ಟುವ ಆಶೆ ಇತ್ತು. ಒಂದು ದಿನ ಗುಡಿಯ ಕಟ್ಟಡ ಪ್ರಾರಂಭವಾಯಿತು.''ಪ್ರಜೆಗಳೆಲ್ಲ ಗುಡಿಗೆ ಯಥಾಶಕ್ತಿ ಉಚಿತ ಸೇವೆ ಮಾಡಬೇಕು,'' ಎಂದು ರಾಜನು ಡಂಗುರ ಸಾರಿಸಿದ. ಜನರು ರಾಜನ ಆಜ್ಞೆಯಂತೆ ಅತ್ಯಂತ ಉತ್ಸಾಹದಿಂದ ಗುಡಿಯ ಸೇವೆಗೆ ಮುಂದಾದರು. ತಮ್ಮ ತಮ್ಮ ಎತ್ತು, ಗಾಡಿಗಳನ್ನು ಹೂಡಿ; ಬೆಟ್ಟದ ಮೇಲೆ ಕಲ್ಲು, ಕಟ್ಟಿಗೆ, ನೀರು, ಮಣ್ಣು ಎಲ್ಲವನ್ನೂ ಸಾಗಿಸಿದರು. ಶ್ರೇಷ್ಠ ಶಿಲ್ಪಿಗಳು ಗುಡಿಯನ್ನು ಕಟ್ಟಲು ತೊಡಗಿದರು.

ಆ ಊರಿನ ಬಡ ಮುದುಕಿ ಏನಾದರೂ ದೇವರ ಸೇವೆ ಮಾಡಬೇಕೆಂದು ಬೆಟ್ಟದ ಮೇಲೆ ಹೋದಳು. ಅಪಾರ ಜನರು ಇರುವುದು ಹೋಗುವುದು ಎತ್ತು, ದನಕರುಗಳ ಓಡಾಟ ನಡೆದಿತ್ತು. ಇದರಿಂದಾಗಿ ಗುಡಿಯ ಸುತ್ತಮುತ್ತ ನಿತ್ಯವೂ ವಿಪರೀತ ಕಸ ಬೀಳುತಿತ್ತು. ಮುದುಕಿಗೆ ಒಂದು ಸೇವೆ ಸಿಕ್ಕಂತಾಯಿತು. ಜನರು ಸಂಜೆ ಬೆಟ್ಟದಿಂದ ಕೆಳಗಿಳಿದ ಕೂಡಲೇ ಮುದುಕಿ ಬೇಗ ಎದ್ದು ಮೇಲೆ ಏರುತ್ತಿದ್ದಳು. ಗುಡಿಯ ಆವರಣದಲ್ಲಿ ಒಂದು ಕಡ್ಡಿಯೂ ಉಳಿಯದಂತೆ ಕಸಗುಡಿಸಿ ಬೇಗ ಎದ್ದು ನಸುಕಿನಲ್ಲಿ ಕೆಳಗೆ ಇಳಿದು ಬಿಡುತ್ತಿದ್ದಳು. ಯಾರು ಕಸಗುಡಿಸುತ್ತಾರೆಂದು ಯಾರಿಗೂ ಗೊತ್ತಾಗಲಿಲ್ಲ. ಎರಡು ವರುಷಗಳ ನಿರಂತರ ಪರಿಶ್ರಮದ ನಂತರ ಒಂದು ದಿನ ಗುಡಿಯ ಉದ್ಘಾಟನೆ ವೈಭವದಿಂದ ನೆರವೇರಿತು. ರಾಜನಿಗೆ, ಪ್ರಜೆಗಳಿಗೆ ಎಲ್ಲಿಲ್ಲದ ಹರ್ಷ ! ರಾಜನು ತನ್ನ ಹೆಸರಿನಲ್ಲಿ ಒಂದು ಶಿಲಾಶಾಸನ ಬರೆಯಿಸಿ ಗುಡಿ ಎದುರು ನಿಲ್ಲಿಸಿದ. ಶಿಲ್ಪಿಗಳಿಗೆ ಕೆಲಸಗಾರರಿಗೆಲ್ಲ ಕಾಣಿಕೆ ಕೊಟ್ಟು ಕಳುಹಿಸಿದ. ಅದೇ ದಿನ ರಾತ್ರಿ ರಾಜನ ಕನಸಿನಲ್ಲಿ ದೇವರು ಪ್ರತ್ಯಕ್ಷನಾದ. ರಾಜನು ಸಂತಸದಿಂದ ದೇವರಿಗೆ ವಂದಿಸಿ ಕೇಳಿದ -''ನನ್ನ ಸೇವೆ ನಿನಗೆ ಸಂತೋಷ ನೀಡಿತೇ?,'' ದೇವರು -''ನೀನೆಲ್ಲಿ ಸೇವೆ ಮಾಡಿರುವೆ?,''

ರಾಜ -''ಈ ವಿಶಾಲ ಗುಡಿ ಕಟ್ಟಿಸಿದ್ದು ಸೇವೆಯಲ್ಲವೇ ?,''

ದೇವರು - ''ಅಲ್ಲ, ಅದು ನೀನು ನಿನ್ನ ಶಿಲಾಶಾಸನಕ್ಕಾಗಿ ಮಾಡಿದ ಕೆಲಸವಷ್ಟೇ!,''

ರಾಜ -''ಎರಡು ವರುಷ ನಿರಂತರ ನನ್ನ ಪ್ರಜೆಗಳು, ಶಿಲ್ಪಿಗಳು ಮಾಡಿದ್ದು ಸೇವೆಯಲ್ಲವೇ ?,'' ದೇವರು-''ಪ್ರಜೆಗಳು ನಿನ್ನ ಆಜ್ಞೆಗಾಗಿ ಮಾಡಿದ್ದಾರೆ. ಶಿಲ್ಪಿಗಳೆಲ್ಲ ಸನ್ಮಾನ ಸತ್ಕಾರಗಳಿಗಾಗಿ, ಕಪ್ಪು ಕಾಣಿಕೆಗಾಗಿ, ಮಾಡಿದ್ದಾರೆ ! ಇದಾವುದೂ ಸೇವೆಯಲ್ಲ. ನಿನ್ನ ರಾಜ್ಯದಲ್ಲಿಯೇ ಒಂದೇ ಒಂದು ವ್ಯಕ್ತಿ ಮಾತ್ರ ನನ್ನ ಸೇವೆಯನ್ನು ಮನಮುಟ್ಟಿ ಮಾಡಿದೆ!,'' ರಾಜ-''ಆ ವ್ಯಕ್ತಿ ಯಾರು ?,''ದೇವರು-''ಇನ್ನಾರೂ ಅಲ್ಲ;ಒಂದು ಹಣ್ಣು ಹಣ್ಣಾದ ಮುದುಕಿ -ಈ ಗುಡಿಯ ಆವರಣವನ್ನೆಲ್ಲ ಇವತ್ತಿನವರೆಗೆ ಒಂದು ದಿನವೂ ಬಿಡದೇ ಕಸಗೂಡಿಸಿ ಹಸನ ಮಾಡಿ ಮರೆತು ಎಲೆಯ ಮರೆಯ ಕಾಯಿಯಂತೆ ಉಳಿದು ಬಿಟ್ಟಿದ್ದಾಳೆ. ಆ ಮುದುಕಿಯ ನಿಷ್ಕಾಮ ಸೇವೆಗಾಗಿ ನಾನು ಈ ಗುಡಿಯಲ್ಲಿ ನಿರಂತರ ಉಳಿಯುತ್ತೇನೆ!'' ರಾಜನು ಕನಸು ಒಡೆದು ಎಚ್ಚರವಾದಾಗ ಹಸನಾದ ಹೃದಯದ ಆ ಮುದುಕಿಯ ಗುಡಿಸಲು ಎದುರು ತಲೆಬಾಗಿ ನಿಂತಿದ್ದ. ''ದೇವದರ್ಶನದ ಮತ್ತೊಂದು ಸುಗಮೋಪಾಯವೆಂದರೆ ಈ ರೀತಿ 'ಮಾಡಿಮರೆ' ಯಾಗುವುದು !!

* ಶ್ರೀ ಸಿದ್ದೇಶ್ವರ ಸ್ವಾಮೀಜಿ


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>