Quantcast
Channel: VijayKarnataka
Viewing all articles
Browse latest Browse all 6795

ಮದುವೆ ನಂತರ ನಟನೆ ಬಿಡೋಲ್ವಂತೆ ರಾಧಿಕಾ ಪಂಡಿತ್

$
0
0

ಬೆಂಗಳೂರು: ಇದೀಗ ಬಿಡುಗಡೆಯಾದ 'ದೊಡ್ಮನೆ ಹುಡುಗ'ನಿಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಡಿಸೆಂಬರ್‌ನಲ್ಲಿ ನಟ ಯಶ್‌ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವ ಬಹು ಬೇಡಿಕೆಯ ನಟಿ ರಾಧಿಕಾ ಪಂಡಿತ್ ಮದುವೆ ನಂತರವೂ ಅಭಿನಯವನ್ನು ಮುಂದುವರಿಸುತ್ತಾರಂತೆ.

ಇದೀಗ ಯಶ್‌ನೊಂದಿಗೆ ನಟಿಸುತ್ತಿರುವ 'ಸಂತು ಸ್ಟ್ರೈಟ್‌ಫಾರ್ವಡ್' ಚಿತ್ರದ ಚಿತ್ರೀಕರಣದಲ್ಲಿ ರಾಧಿಕಾ ಬ್ಯುಸಿಯಾಗಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ನಟಿ, ಮದುವೆ ನಂತರ ಚಿತ್ರದಲ್ಲಿ ನಟಿಸುವುದನ್ನು ನಿಲ್ಲಿಸುತ್ತಾರೆಂಬ ಸುದ್ದಿ ಹರಡಿದೆ. ಈ ಊಹಾಪೋಹಕ್ಕೆ ನಟಿಯ ಆಪ್ತ ಮೂಲಗಳು ತೆರೆ ಎಳೆದಿದ್ದು, 'ಮುಂದೆಯೂ ನಟಿಸಲಿದ್ದಾರೆ' ಎಂಬುದನ್ನು ಬೆಂಗಳೂರು ಮಿರರ್‌ಗೆ ಖಚಿತಪಡಿಸಿವೆ.

ಸಾಮಾನ್ಯವಾಗಿ ನಟಿಯರು ಮದುವೆಯಾದ ನಂತರ ನಟನೆಯನ್ನು ಬಿಟ್ಟು ಬಿಡುತ್ತಾರೆ. ರಾಧಿಕಾ ವಿಷಯದಲ್ಲಿಯೂ ಇದೇ ಆಗಲಿದೆ ಎಂದೇ ಜನರು ಭಾವಿಸಿದ್ದಾರೆ. ಆದರೆ, 'ಯಶ್ ಈ ವಿಷಯದಲ್ಲಿ ಸ್ವಾತಂತ್ರ್ಯ ನೀಡಿದ್ದು, ಅಭಿನಯ ಮುಂದುವರಿಸಿರುವುದರಿಂದ ದಾಂಪತ್ಯ ಜೀವನಕ್ಕೆ ತೊಂದರೆಯಾಗುವುದಿಲ್ಲ,' ಎಂದು ಮೂಲಗಳು ಹೇಳಿವೆ.

ಡಿಸೆಂಬರ್ ಕಡೆ ಅಥವಾ ಜನವರಿ ಮೊದಲ ವಾರದಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದ್ದು, ಇನ್ನೂ ದಿನಾಂಕ ಅಂತಿಮಗೊಂಡಿಲ್ಲ. ರಾಜ್ಯದಲ್ಲಿ ಕಾವೇರಿ ವಿವಾದದಿಂದ ಸಮಸ್ಯೆಗಳು ತಲೆದೋರುತ್ತಿರುವುದರಿಂದ ಮದುವೆಯನ್ನು ಮುಂದೂಡುವ ಸಾಧ್ಯತೆಗಳೂ ಇವೆ.

ರಾಧಿಕಾ-ಯಶ್ ಜೋಡಿ ಕೆಲವು ಧಾರಾವಾಹಿಗಳಲ್ಲಿ ಒಟ್ಟಾಗಿ ಅಭಿನಯಿಸಿದ ನಂತರ 'ಡ್ರಾಮಾ,' 'ಮಿ.ಆ್ಯಂಡ್ ಮಿಸಸ್ ರಾಮಾಚಾರಿ,'ಯಲ್ಲಿ ನಟೆಸಿದ್ದು, ಈ ಚಿತ್ರಗಳು ಬಾಕ್ಸ್‌ ಆಫೀಸ್ ಕೊಳ್ಳೆ ಹೊಡೆದಿವೆ. ಇದೀಗ ತಮ್ಮ 20ನೇ ಚಿತ್ರ 'ಸಂತು ಸ್ಟ್ರೈಟ್‌ಫಾರ್ವಡ್' ಶೂಟಿಂಗ್‌ನಲ್ಲಿದ್ದಾರೆ ರಾಧಿಕಾ. ಈ ವರ್ಷದಲ್ಲಿ ತೆರೆ ಕಂಡ 'ಝೂಮ್ 'ಮತ್ತು 'ದೊಡ್ಮನೆ ಹುಡುಗ'ದಲ್ಲಿಯೂ ರಾಧಿಕಾ ನಾಯಕಿ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>