Quantcast
Channel: VijayKarnataka
Viewing all articles
Browse latest Browse all 6795

ತೇರು ಎಳೆದ ಹುಡುಗ

$
0
0

ಪದ್ಮಾ ಶಿವಮೊಗ್ಗ

ಪುನೀತ್‌ ರಾಜ್‌ಕುಮಾರ್‌ ಮತ್ತು ನಿರ್ದೇಶಕ ಸೂರಿ ಕಾಂಬಿನೇಷನ್‌ನ 'ದೊಡ್ಮನೆ ಹುಡುಗ' ಚಿತ್ರದ ಹಾಡುಗಳು ಆನ್‌ಲೈನಲ್ಲಿ ಸದ್ದು ಮಾಡುತ್ತಿವೆ. ನಂಜನಗೂಡಿನ ಜಾತ್ರೆಯಲ್ಲಿ ಹಾಡೊಂದನ್ನು ಚಿತ್ರೀಕರಿಸಿದ್ದು ಚಿತ್ರತಂಡಕ್ಕೇ ವಿಶೇಷ ಅನುಭವ ನೀಡಿದೆ.

ಜಾತ್ರೆಗಳಲ್ಲಿ ಸಿನಿಮಾ ದೃಶ್ಯ ಚಿತ್ರೀಕರಿಸುವುದೆಂದರೆ ಅದೊಂದು ಸಾಹಸವೆ. ಜನದಟ್ಟಣೆ ನಿಭಾಯಿಸಿ, ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಶೂಟಿಂಗ್‌ ಮಾಡುವುದು ರೋಚಕ ಅನುಭವವೂ ಕೂಡ. ಇಂಥದೊಂದು ಪ್ರಯತ್ನ ಮಾಡಿದೆ 'ದೊಡ್ಮನೆ ಹುಡುಗ' ಚಿತ್ರತಂಡ.

ಯೆಸ್‌, ಪುನೀತ್‌ ರಾಜ್‌ಕುಮಾರ್‌ ಅಭಿನಯದ, ಸೂರಿ ನಿರ್ದೇಶನದಲ್ಲಿ ಮೂಡಿಬಂದ ದೊಡ್ಮನೆ ಹುಡುಗ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ನಂಜನಗೂಡಿನ ಜಾತ್ರೆಯಲ್ಲಿ ಮಾಡಲಾಗಿದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗಾಗಿ ಕಾದು, ಹಾಡಿನ ದೃಶ್ಯವನ್ನು ಶೂಟ್‌ ಮಾಡಲಾಗಿದೆ. ಇದರಲ್ಲಿ ಪುನೀತ್‌, ಅಂಬರೀಷ್‌, ಸುಮಲತಾ, ಭಾರತಿ ವಿಷ್ಣುವರ್ಧನ್‌, ರಾಧಿಕಾ ಪಂಡಿತ್‌, ರವಿಶಂಕರ್‌ ಮತ್ತಿತರರು ಸೇರಿ ರಥದ ಹಗ್ಗ ಎಳೆದಿರೋದು ವಿಶೇಷ.

ದೇವಸ್ಥಾನದ ತೇರನ್ನು ಚಿತ್ರೀಕರಣಕ್ಕೆ ಬಳಸಲು ನಿಯಮ ನಿಬಂಧನೆಗಳನ್ನೂ ಹಾಕಲಾಗಿತ್ತು. ಅದರ ಪ್ರಕಾರವೇ ಶೂಟಿಂಗ್‌ ಮಾಡಲಾಗಿದೆ. ಸಂಪ್ರದಾಯದ ಪ್ರಕಾರ ನಡೆಯುವ ಜಾತ್ರೆಯಲ್ಲಿ ಕಲಾವಿದರು ತೇರನ್ನು ಎಳೆಯುವ ದೃಶ್ಯವನ್ನು ಚಿತ್ರೀಕರಿಸುವುದು ಸಾಧ್ಯವಾಗಿಲ್ಲ. ಚಿತ್ರಕ್ಕೆ ಈ ದೃಶ್ಯ ಅಗತ್ಯ ಇತ್ತು ಎನ್ನುವುದು ಸೂರಿ ಅಭಿಪ್ರಾಯ. 'ಜಾತ್ರೆ ಸಂದರ್ಭದಲ್ಲೇ ಚಿತ್ರೀಕರಿಸಬೇಕಿತ್ತು. ರಥ ಎಳೆಯಲು ನಮಗೆ ಅವಕಾಶ ಸಿಗಲಿಲ್ಲ. ಅದನ್ನು ಎಳೆಯುವವರು ಬೇರೆ ಜನ ಇರುತ್ತಾರೆ. ಜಾತ್ರೆಯ ಇತರ ಶಾಟ್‌ಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ನಂಜನಗೂಡಿನಲ್ಲಿ ಚಿತ್ರೀಕರಣ ಮಾಡಲು ಪರವಾನಗಿ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ವಿದೇಶದಲ್ಲಿ ಶೂಟಿಂಗ್‌ ಮಾಡೋದಕ್ಕಿಂತ ಕಷ್ಟ. ಪರ್ಮಿಷನ್‌ ಪಡೆದು ಅಂದುಕೊಂಡಂತೆ ಚಿತ್ರೀಕರಿಸಿದೆವು' ಎನ್ನುತ್ತಾರೆ ನಿರ್ದೇಶಕ. ಜಾತ್ರೆಯ ರಥವನ್ನು ಬಳಸಿಕೊಂಡು ಸುಮಾರು 7 ದಿನಗಳ ಕಾಲ ಶೂಟ್‌ ಮಾಡಲಾಗಿದೆ.

'ಆ ದೊಡ್ಡ ಜಾತ್ರೆಗೆ ಸಿಕ್ಕಾಪಟ್ಟೆ ಜನ ಸೇರಿದ್ದರು. ಹಿರಿಯ ನಟರೆಲ್ಲರೂ ಈ ದೃಶ್ಯದಲ್ಲಿ ತೇರು ಎಳೆಯುವುದನ್ನು ನೋಡುವುದಕ್ಕೆ ಬಹಳ ಖುಷಿ ಎನಿಸುತ್ತಿತ್ತು' ಎಂದು ರವಿಶಂಕರ್‌ ಅನುಭವ ಹಂಚಿಕೊಳ್ಳುತ್ತಾರೆ. ಮೇಲುಕೋಟೆ ದೇವಸ್ಥಾನದಲ್ಲೂ ಕೆಲವು ದಿನ ಚಿತ್ರೀಕರಣ ಮಾಡಲಾಗಿದೆ.

ಇನ್ನೊಂದು ಹಾಡನ್ನು ಹುಬ್ಬಳ್ಳಿಯಲ್ಲಿ ಜನಸಾಗರದ ನಡುವೆ ಚಿತ್ರೀಕರಿಸಲಾಗಿದೆ. ಪುನೀತ್‌ ರಾಜ್‌ಕುಮಾರ್‌ ಮತ್ತು ಶಿವರಾಜ್‌ಕುಮಾರ್‌ ಹಾಡಿರುವ 'ಅಭಿಮಾನಿಗಳೇ ನಮ್ಮನೆ ದೇವ್ರು...' ಎನ್ನುವ ಹಾಡು ಸೂಪರ್‌ ಹಿಟ್‌ ಆಗಿದೆ. 'ತ್ರಾಸ್‌ ಆಕ್ತೈತಿ...' ಹಾಡನ್ನು ವಿ. ಹರಿಕೃಷ್ಣ ಮತ್ತು ಇಂದು ನಾಗರಾಜ್‌ ಹಾಡಿದ್ದಾರೆ. 'ಕನಸಿವೆ...' ಗೀತೆಗೆ ಶ್ವೇತಾ ಮೋಹನ್‌ ಮತ್ತು ಕಾರ್ತಿಕ್‌ ಧ್ವನಿ ನೀಡಿದ್ದಾರೆ. ಇದಲ್ಲದೆ, 'ಕೇರ್‌ ಆಫ್‌ ದೊಡ್ಮನೆ...' ಗೀತೆ ಟಿಪ್ಪು ಮತ್ತು ಸಂಗೀತಾ ರವಿಚಂದ್ರನಾಥ್‌ ಕಂಠದಲ್ಲಿ ಮೂಡಿಬಂದಿದೆ. ಇವುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ವಿ.ಹರಿಕೃಷ್ಣ. ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ.

ಪುನೀತ್‌ ರಾಜ್‌ ಕುಮಾರ್‌ ಅಭಿನಯದ 25ನೇ ಚಿತ್ರ ಇದಾಗಿರುವುದರಿಂದ ಬಿಡುಗಡೆಯು ವಿಶೇಷ ರೀತಿಯಲ್ಲಿ ಆಗುತ್ತಿದೆ. ಬೆಂಗಳೂರಿನ ಐದು ಚಿತ್ರಮಂದಿರಗಳಲ್ಲಿ ಪುನೀತ್‌ ಅಭಿನಯದ ಈ ಹಿಂದಿನ ಐದು ಚಿತ್ರಗಳ ಕಟೌಟ್‌ಗಳನ್ನೂ ನಿಲ್ಲಿಸಲಾಗುತ್ತಿದೆ. ಪುನೀತ್‌ ಜತೆ ರಾಜ್‌ ಕುಮಾರ್‌ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ ಕಟೌಟ್‌ಗಳೂ ಪ್ರದರ್ಶನಗೊಳ್ಳಲಿವೆ. ದೊಡ್ಡ ಕಟೌಟ್‌ಗಳನ್ನು ಹೆಸರಾಂತ ಚಿತ್ರ ಕಲಾವಿದರೊಬ್ಬರು ಕುಂಚದಿಂದ ಚಿತ್ರಿಸಲಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>