* ಹವಾಮಾನ ಮುನ್ಸೂಚನೆ, ಸಾಗರ ಅಧ್ಯಯನಕ್ಕೆ ಸ್ಕ್ಯಾಟ್‌ಸ್ಯಾಟ್ ಉಪಗ್ರಹ * ಜತೆಗೆ ಇತರ 7 ಉಪಗ್ರಹಗಳ ಉಡಾವಣೆ * ಪಿಎಸ್‌ಎಲ್‌ವಿಯಿಂದ ಮೊದಲ ಸಲ 2 ಕಕ್ಷೆಗೆ ಉಪಗ್ರಹ ಉಡಾವಣೆ * ಸೆ.26ರಂದು ಬೆಳಗ್ಗೆ 9.12ಕ್ಕೆ ಮುಹೂರ್ತ ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಸೆಪ್ಟೆಂಬರ್ 26ರಂದು ಸಾಗರ ಮತ್ತು ಹವಾಮಾನ ಸಂಬಂಧಿತ ಅಧ್ಯಯನಗಳನ್ನು ನಡೆಸಲಿರುವ ಸ್ಕ್ಯಾಟ್‌ಸ್ಯಾಟ್ ಉಪಗ್ರಹವನ್ನು ಉಡಾವಣೆಗೊಳಿಸಲು ಸಜ್ಜಾಗಿದೆ.ಇದರ ಜತೆಗೆ ಇತರ 7 ಉಪಗ್ರಹಗಳನ್ನೂ ಉಡಾವಣೆಗೊಳಿಸಲಿದೆ. ಪಿಎಸ್‌ಎಲ್‌ವಿ -ಸಿ35 ಉಡಾವಣಾ ವಾಹಕವು ಸೆಪ್ಟೆಂಬರ್ 26ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹಗಳನ್ನು ಬೆಳಗ್ಗೆ 9.12 ಗಂಟೆಗೆ ಉಡಾವಣೆಗೊಳಿಸಲಿದೆ ಎಂದು ಇಸ್ರೊ ತಿಳಿಸಿದೆ. ಸ್ಕ್ಯಾಟ್‌ಸ್ಯಾಟ್ ಉಪಗ್ರಹವು ಹವಾಮಾನ ಮುನ್ಸೂಚನೆ, ಚಂಡಮಾರುತದ ಚಲನವಲನಗಳ ಬಗ್ಗೆ ಮಾಹಿತಿ ನೀಡಲಿದೆ. ಅಲ್ಜೀರಿಯಾ, ಕೆನಡಾ, ಅಮೆರಿಕ ಮೂಲದ ಇತರ 7 ಉಪಗ್ರಹಗಳನ್ನೂ ಇಸ್ರೊ ಉಡಾವಣೆಗೊಳಿಸಲಿದೆ. ಈ ಸಲ ಪಿಎಸ್‌ಎಲ್‌ವಿ ಮೊದಲ ಬಾರಿಗೆ ಎರಡು ಭಿನ್ನ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರ್ಪಡೆಗೊಳಿಸುತ್ತಿದೆ.
↧
ಇಸ್ರೊ: ಸೆ.26ಕ್ಕೆ 7 ಉಪಗ್ರಹ ಉಡಾವಣೆ
↧