Quantcast
Channel: VijayKarnataka
Viewing all articles
Browse latest Browse all 6795

ಹ್ಯಾಪಿ ಬರ್ತ್‌ಡೇ ಚಿತ್ರ ವಿಮರ್ಶೆ: ಗಮನ ಸೆಳೆಯುವ ಹ್ಯಾಪಿ ಬರ್ತ್‌ ಡೇ

$
0
0

ಚಿತ್ರ: ಹ್ಯಾಪಿ ಬರ್ತ್‌ಡೇ

- ಶರಣು ಹುಲ್ಲೂರು

ಕನ್ನಡದ ಇತ್ತೀಚಿನ ಬಹುತೇಕ ಚಿತ್ರಗಳು ಬೆಂಗಳೂರಿನ ವಾತಾವರಣವನ್ನೇ ಕೇಂದ್ರೀಕರಿಸಿಕೊಂಡು ತಯಾರಾಗುತ್ತಿರುವ ಬೆನ್ನಲ್ಲೇ ಬದಲಾಗುತ್ತಿರುವ ಪ್ರೇಕ್ಷಕನಿಗೆ ಹಿಡಿಸುವಂಥ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮಹೇಶ್‌ ಸುಖಧರೆ. ಅವರ ಹೊಸ ಚಿತ್ರ 'ಹ್ಯಾಪಿ ಬರ್ತ್‌ಡೇ' ಹಳ್ಳಿತನಕ್ಕೆ ಹಾಕಿರುವ ಸೊಗಸಾದ ಚೌಕಟ್ಟಿನಂತಿದೆ. ಈ ವಿಭಿನ್ನತೆಯ ಕಾರಣದಿಂದ ಚಿತ್ರ ಇಷ್ಟವಾಗುತ್ತದೆ.

ಈ ಚಿತ್ರದೊಳಗೆ ದೇಸಿತನವಿದೆ. ಗ್ರಾಮೀಣರ ಬದುಕು, ಅವರ ಆಚರಣೆ, ಹಳ್ಳಿಯ ಸಾಂಸ್ಕೃತಿಕ ಜಗತ್ತೇ ಸಿನಿಮಾದಲ್ಲಿ ಅನಾವರಣಗೊಂಡಿದೆ. ಹೀಗಾಗಿ ಇಡೀ ಸಿನಿಮಾ ಹೊಸತು ಅನ್ನುವಂತೆ ಕಾಣುತ್ತದೆ. ಹಾಗಂತ ಇದು ಕಲಾತ್ಮಕ ಚೌಕಟ್ಟಿನಲ್ಲಿ ತಯಾರಾದ ಚಿತ್ರವಲ್ಲ. ನೋಡುಗನೊಬ್ಬ ಏನೆಲ್ಲ ಇಷ್ಟಪಡಬಲ್ಲನೋ ಅವಷ್ಟೂ ಅಂಶಗಳು ಚಿತ್ರದಲ್ಲಿ ಸೇರಿವೆ.

ಚಿತ್ರಕಥೆ ಬಿಚ್ಚಿಕೊಳ್ಳುವುದೇ ಮಂಡ್ಯ ಮತ್ತು ನಾಗಮಂಗಲದ ಪ್ರದೇಶದಲ್ಲಿ. ನಾಯಕ ಸಚಿನ್‌ ಇದೇ ಭಾಗದವರೇ ಆಗಿರುವುದರಿಂದ ಅವರಿಗೆ ಈ ಪಾತ್ರ ಓಕೆ. ನಟನೆಯಲ್ಲಿ ಇನ್ನಷ್ಟು ಪಳಗಬೇಕೆನಿಸಿದರೂ, ಇದು ಇವರ ಚೊಚ್ಚಲು ಸಿನಿಮಾ ಅಂತ ಅನಿಸುವುದಿಲ್ಲ. ಸಾಹಸ ದೃಶ್ಯಗಳಲ್ಲಂತೂ ಸಚಿನ್‌ ಸಲೀಸಾಗಿ ಇಳಿದಿದ್ದಾರೆ.

ವಿ.ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಬಹುತೇಕ ಹಾಡುಗಳು ಗುನುಗುವಂತೆ ಮಾಡುತ್ತವೆ. ಸಾಹಿತ್ಯ ಮತ್ತು ಸಂಗೀತದ ಜುಗಲ್ಬಂದಿಯೇ ಇಲ್ಲಿ ನಡೆದಿದೆ. ನವೀನ್‌ ಸಜ್ಜು ಹಾಡಿರುವ 'ಹೋಗುಮೆ.. ಹೋಗುಮೆ..' ಹಾಡಂತೂ ಪ್ರೇಮಿಗಳ ಪಾಲಿನ ನಿತ್ಯಗೀತೆಯಂತಿದೆ. ಹಳ್ಳಿಯ ವಾತಾವರಣವನ್ನು ಚಿತ್ರಿಸುವುದು ಸುಲಭದ ಮಾತಲ್ಲ. ಆ ಕೆಲಸವನ್ನು ಸಿನಿಮಾಟೋಗ್ರಾಫರ್‌ ಸುರೇಶ್‌ ಜಯಕೃಷ್ಣ ಸಮರ್ಥವಾಗಿ ನಿಭಾಯಿಸಿದ್ದಾರೆ. ಕುಡುಕ ತಂದೆಯಾಗಿ ಅಚ್ಯುತ್‌ ಕುಮಾರ್‌ ಗಮನ ಸೆಳೆದರೆ, ದೊಣ್ಣೆ ವರಸೆಯ ದೃಶ್ಯಗಳಲ್ಲಿ ಅಚ್ಚರಿ ಮೂಡಿಸುತ್ತಾರೆ. ಚಿಕ್ಕಣ್ಣ ಡಬಲ್‌ ಮೀನಿಂಗ್‌ ಸಂಭಾಷಣೆ ಹೊಡೆದು ಚಪ್ಪಾಳೆ ಗಿಟ್ಟಿಸಿಕೊಂಡರೆ, ರಾಜೇಶ್‌ ನಟರಂಗ, ಅಶ್ವಿನಿ, ಅರುಣಾ ಬಾಲರಾಜ್‌, ರವಿಕಾಳೆ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀನಗರ ಕಿಟ್ಟಿ ಮತ್ತು ಅಂಬರೀಷ್‌ ಕೂಡ ಪ್ರೇಕ್ಷಕರನ್ನು ತಮ್ಮದೇ ಆದ ಕಾರಣಗಳಿಂದ ರಂಜಿಸುತ್ತಾರೆ.

ಈ ಹಿಂದೆ ಸ್ಟಾರ್‌ ನಟರ ಜತೆ ಕಮರ್ಷಿಯಲ್‌ ಸಿನಿಮಾ ಮಾಡಿದ್ದ ನಿರ್ದೇಶಕ ಮಹೇಶ್‌ ಸುಖಧರೆ, ಹೊಸ ಹುಡುಗರ ಜತೆ ಗ್ರಾಮೀಣ ಸೊಗಡಿನ ಚಿತ್ರ ಮಾಡಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>