ಕೆಂಡಸಂಪಿಗೆ ಹುಡುಗಿ ಮಾನ್ವಿತಾ ಈಗ ಬೆವರಿಳಿಸುತ್ತಿದ್ದಾರೆ. ಹೊಸ ಚಿತ್ರದಲ್ಲಿ ಶಿವರಾಜ್ ಕುಮಾರ್ ಎದುರು ನಟಿಸಲಿರುವ ಅವರು ತಮ್ಮ ಫಿಟ್‌ನೆಸ್ ಕಡೆಗೆ ಗಮನ ಕೊಟ್ಟಿದ್ದಾರೆ. ಕೆಂಡ ಸಂಪಿಗೆ ಸಿನಿಮಾ ಮೂಲಕ ಗಮನ ಸೆಳೆದಿದ್ದ ಮಾನ್ವಿತಾ ಹರೀಶ್ ಸೂರಿಯವರ ಹೊಸ ಸಿನಿಮಾ ಟಗರುಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ಟಪೋರಿ ಹುಡುಗಿಯಾಗಿ ನಟಿಸುತ್ತಿದ್ದಾರೆ ಎಂಬ ವಿಷಯ ಇತ್ತೀಚಿಗೆ ಬಿಡುಗಡೆಯಾಗಿರುವ ಫೋಟೊಗಳಿಂದ ಜಾಹಿರಾಗಿದೆ. ಇದೇ ಮಾನ್ವಿತಾ ಪ್ರತಿ ದಿನ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ ಎಂಬುದು ಹೊಸದಾಗಿ ಹೊರಬಿದ್ದಿರುವ ಸುದ್ದಿ. ಮಂಗಳೂರಿನ ಎಫ್‌ಎಂ ಒಂದರಲ್ಲಿ ಆರ್‌ಜೆಯಾಗಿ ಕಾರ್ಯನಿರ್ವಹಸುತ್ತಿದ್ದ ಮಾನ್ವಿತಾ ಸೂರಿ ಕ್ಯಾಂಪಿಗೆ ಸೇರಿದ ಮೇಲೆ ಸಂಪೂರ್ಣ ಚಿತ್ರನಟಿಯಾಗಿ ಬದಲಾದರು. ಕೆಂಡ ಸಂಪಿಗೆಯಲ್ಲಿ ತಮ್ಮ ಚುರುಕು ಅಭಿನಯದ ಮೂಲಕ ಗಮನ ಸೆಳೆದ ಇವರು ಸೂರಿ ಮತ್ತು ಶಿವರಾಜ್‌ಕುಮಾರ್ ಅವರ ಬಹು ನೀರಿಕ್ಷಿತ ಸಿನಿಮಾ ಟಗರುಗೂ ನಾಯಕಿಯಾಗಿ ಆಯ್ಕೆಯಾದರು. ಈ ಸಿನಿಮಾದಲ್ಲಿ ಫಿಟ್‌ನೆಸ್ ಅವಶ್ಯಕತೆ ಇರುವುದರಿಂದ ಕದಿರೇನಹಳ್ಳಿಯ ಸೆಲೆಬ್ರಟಿ ಫಿಟ್ನೆಸ್ ಗುರು ಶ್ರೀನಿವಾಸ ಗೌಡ ಅವರ ಗರಡಿಯಲ್ಲಿ ಪ್ರತಿ ದಿನ ಕೆಲ ಗಂಟೆಗಳ ಕಾಲ ಬೆವರ ಹರಿಸುತ್ತಿದ್ದಾರಂತೆ. ಧನಂಜಯ, ಉದಯ್, ನಿರ್ದೇಶಕ ವಿಕಾಸ್ ಸೇರಿದಂತೆ ಸಾಕಷ್ಟು ಮಂದಿ ನಟರಿಗೆ ಇದೇ ಶ್ರೀನಿವಾಸ ಗೌಡ ಫಿಟ್ನೆಸ್ ಗುರುವಾಗಿದ್ದಾರೆ. ನಿರ್ದೇಶಕ ಸೂರಿ ಮತ್ತು ಅವರ ಪತ್ನಿಯೂ ಇದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಸಿನಿಮಾದಲ್ಲಿ ಯಶಸ್ವಿಯಾಗಬೇಕು ಎಂದರೆ ಫಿಟ್ನೆಸ್ ಅವಶ್ಯ ಎಂಬುದನ್ನು ಮನಗಂಡಿರುವ ಮಾನ್ವಿತಾ ದಿನಕ್ಕೆ ಎರಡು ಗಂಟೆಗೂ ಹೆಚ್ಚು ಕಾಲ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ.
↧
ಜಿಮ್‌ನಲ್ಲಿ ಮಾನ್ವಿತಾ
↧