ಸಿಮೆಂಟ್, ವಿದ್ಯುತ್ ಕಂಪನಿಗಳಿಗೆ ಬಿಸಿ ರೈಲ್ವೆ ಮಂಡಳಿಯು ಮಂಗಳವಾರ ಸರಕು ಸಾಗಣೆ ದರವನ್ನು ಪರಿಷ್ಕರಿಸಿದ್ದು, ಕಲ್ಲಿದ್ದಲು ಸಾಗಣೆಯ ದರ ಪಟ್ಟಿ ಬದಲಾಗಿದೆ. ಕಲ್ಲಿದ್ದಲು ಟರ್ಮಿನಲ್ ಶುಲ್ಕದ ಮೇಲೆ ಮೇಲ್ತೆರಿಗೆಯನ್ನೂ ವಿಧಿಸಲು ರೈಲ್ವೆ ಮಂಡಳಿ ತೀರ್ಮಾನಿಸಿದೆ. ಇದು ಪ್ರತಿ ಟನ್ನಿಗೆ 55 ರೂ. ಇರಲಿದೆ. 100 ಕಿ.ಮೀಗಿಂತ ಹೆಚ್ಚು ದೂರದ ಸರಕು ಸಾಗಣೆಗಳಿಗೆ ಇದು ಅನ್ವಯವಾಗಲಿದೆ. ಪ್ರಯಾಣಿಕರು ಮತ್ತು ಸರಕು ಸಾಗಣೆ ವಿಭಾಗಗಳೆರಡರಲ್ಲೂ ಆದಾಯ ಕುಸಿತದ ಬಿಕ್ಕಟ್ಟು ಎದುರಿಸುತ್ತಿರುವ ರೈಲ್ವೆಗೆ, ಜುಲೈನಲ್ಲಿ ಸರಕು ಸಾಗಣೆಯ ಆದಾಯದಲ್ಲಿ ಇಳಿಕೆಯಾಗಿತ್ತು. ಇದೀಗ ರೈಲ್ವೆ ಸರಕು ಸಾಗಣೆಯ ದರ ಹೆಚ್ಚಿದರೆ, ಹಣದುಬ್ಬರ ಕೂಡ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಆರ್‌ಬಿಐಗೆ ಬಡ್ಡಿ ದರ ಇಳಿಸಲು ಕಷ್ಟಕರವಾದೀತು ಎನ್ನುತ್ತಾರೆ ತಜ್ಞರು. ರೈಲ್ವೆಯ ಈ ನಿರ್ಧಾರದಿಂದ ಮುಖ್ಯವಾಗಿ ಸಿಮೆಂಟ್, ಉಕ್ಕು ಕಂಪನಿಗಳಿಗೆ ಹೊರೆಯಾಗಲಿದೆ. ಈ ವಲಯದ ಕಂಪನಿಗಳು ಸರಕು ಸಾಗಣೆಗೆ ರೈಲ್ವೆಯನ್ನು ಅವಲಂಬಿಸಿರುವುದು ಇದಕ್ಕೆ ಕಾರಣ.
ಹೊಸದಿಲ್ಲಿ: ರೈಲ್ವೆ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರಕು ಸಾಗಣೆ ವಿಭಾಗದಲ್ಲಿ ದರವನ್ನು ಶೇ.19ರ ತನಕ ಏರಿಸಲು ನಿರ್ಧರಿಸಿದೆ. ಇದರಿಂದ ಸಿಮೆಂಟ್ ಮತ್ತು ವಿದ್ಯುತ್ ವಲಯದ ಕಂಪನಿಗಳಿಗೆ ವೆಚ್ಚ ಏರಿಕೆಯಾಗಲಿದೆ.
↧
ರೈಲ್ವೆ ಸರಕು ಸಾಗಣೆ ದರ ಹೆಚ್ಚಳ
↧