Quantcast
Channel: VijayKarnataka
Viewing all articles
Browse latest Browse all 6795

ಜಾಗ್ವಾರ್‌ ಓಟಕ್ಕೆ ಪವನ್ ಪವರ್

$
0
0

ಹೈದರಾಬಾದಿನಲ್ಲಿಯ ಪವನ್‌ ಕಲ್ಯಾಣ್‌ ಹಾಗೂ ಎಚ್‌ಡಿಕೆ ಭೇಟಿ ತುಂಬ ಕುತೂಹಲ ಮೂಡಿಸಿದ್ದು, ಜಾಗ್ವಾರ್‌ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪವನ್‌ ಆಗಮಿಸುವುದು ಪಕ್ಕಾ ಆಗಿದೆ.

- ಶಶಿಧರ್‌ ಚಿತ್ರದುರ್ಗ

ಮಂಡ್ಯದಲ್ಲಿ ಸೆಪ್ಟೆಂಬರ್‌ 2ರಂದು ನಡೆಯಲಿರುವ 'ಜಾಗ್ವಾರ್‌' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ತೆಲುಗು ಸ್ಟಾರ್‌ ಪವನ್‌ ಕಲ್ಯಾಣ್‌ ಆಗಮಿಸಲಿದ್ದಾರೆ. ಈ ವಿಷಯವನ್ನು ತಿಳಿಸಿದ್ದು ಸ್ವತಃ ಈ ಚಿತ್ರದ ನಿರ್ಮಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ.

ಶನಿವಾರ ಪವನ್‌ ಕಲ್ಯಾಣ್‌ರನ್ನು ಹೈದರಾಬಾದಿನಲ್ಲಿ ಭೇಟಿ ಮಾಡಿದ್ದ ಕುಮಾರಸ್ವಾಮಿ ಆಡಿಯೋ ಬಿಡುಗಡೆಗೆ ಪವನ್‌ರನ್ನು ಆಹ್ವಾನಿಸಿದ್ದಾರೆ. 'ಸೆ. 18ರಂದು ಹೈದರಾಬಾದ್‌ನಲ್ಲಿ ಮತ್ತು ಅದೇ ತಿಂಗಳ 25ರಂದು ವಿಶಾಖಪಟ್ಟಣದಲ್ಲಿ ಜಾಗ್ವಾರ್‌ (ತೆಲುಗು) ಆಡಿಯೋ ಬಿಡುಗಡೆ ಮಾಡಲಿದ್ದೇವೆ' ಎನ್ನುತ್ತಾರೆ ಎಚ್‌ಡಿಕೆ.

ಪವನ್‌ ಕಲ್ಯಾಣ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಭೇಟಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ರಾಜಕೀಯ ಉದ್ದೇಶಗಳ ಹೊರತಾಗಿಯೂ ಜಾಗ್ವಾರ್‌ ಸಿನಿಮಾಗೆ ಸಂಬಂಧಿಸಿದಂತೆಯೂ ಈ ಭೇಟಿ ಮಹತ್ವ ಪಡೆದಿದೆ. ಈ ಬಗ್ಗೆ ಮಾತನಾಡಿದ ಎಚ್‌ಡಿಕೆ, 'ಪವನ್‌ ಕಲ್ಯಾಣ್‌ ಅವರು ಸಿನಿಮಾದ ಮೇಕಿಂಗ್‌ ವೀಡಿಯೋ, ಟೀಸರ್‌, ಟ್ರೇಲರ್‌ ಮತ್ತು ಎರಡು ಹಾಡುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ನಾಯಕ ನಿಖಿಲ್‌ ಫಿಟ್‌ನೆಸ್‌, ಬಾಡಿ ಫ್ಲೆಕ್ಸಿಬಲಿಟಿ ಅವರಿಗೆ ಇಷ್ಟವಾಯ್ತು. ಕಾರಣಾಂತರಗಳಿಂದ ನನ್ನೊಂದಿಗೆ ನಿಖಿಲ್‌ರನ್ನು ಕರೆದೊಯ್ಯಲು ಸಾಧ್ಯವಾಗಿರಲಿಲ್ಲ. ಈ ವಾರ ಪವನ್‌ ಬಳಿ ನಿಖಿಲ್‌ನನ್ನು ಕಳುಹಿಸಿಕೊಡುತ್ತಿದ್ದೇನೆ' ಎನ್ನುವ ಎಚ್‌ಡಿಕೆ ಈ ಭೇಟಿಯ ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ.

ಇನ್ನು ಇಲ್ಲಿಯವರೆಗಿನ ಸಿನಿಮಾದ ಎಲ್ಲ ಬೆಳವಣಿಗೆಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ಪೂರ್ಣ ತೃಪ್ತಿ ಇದೆಯಂತೆ. 'ಚಿತ್ರಕತೆ ಹಂತದಲ್ಲಿ ನಾವೇನು ಅಂದುಕೊಂಡಿದ್ದೆವೋ ಅದೆಲ್ಲವೂ ಸೂಕ್ತ ರೀತಿಯಲ್ಲೇ ತೆರೆ ಮೇಲೆ ಮೂಡಿದೆ. ಯಾವ ಹಂತದಲ್ಲಿಯೂ ಚಿತ್ರಕತೆಗೆ ಧಕ್ಕೆಯಾಗಿಲ್ಲ. ಕತೆಗೆ ಪೂರಕವಾದ ರಿಚ್‌ನೆಸ್‌ ಇದೆ. ಈಗಿನ ದಿನಗಳಲ್ಲಿ ಆ್ಯಕ್ಷ ನ್‌ - ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ ಹೇಗಿರಬೇಕೋ ಆ ಗುಣಮಟ್ಟದಲ್ಲಿ ತಯಾರಾಗಿರುವ ಸಿನಿಮಾ ಪ್ರೇಕ್ಷ ಕರನ್ನು ರಂಜಿಸುವುದರಲ್ಲಿ ಅನುಮಾನವಿಲ್ಲ. ಖಂಡಿತವಾಗಿ ಚಿತ್ರಕ್ಕೆ ರಿಪೀಟೆಡ್‌ ಆಡಿಯನ್ಸ್‌ ಸಿಗ್ತಾರೆ' ಎನ್ನುವ ಭರವಸೆ ಅವರದು.

ಅಕ್ಟೋಬರ್‌ 6ರಂದು 'ಜಾಗ್ವಾರ್‌' ಥಿಯೇಟರ್‌ ಬರುವುದು ಖಚಿತ. ಕನ್ನಡ ಮತ್ತು ತೆಲುಗು ದ್ವಿಭಾಷೆಗಳಲ್ಲಿ ತಯಾರಾಗಿರುವ ಚಿತ್ರವನ್ನು ತಮಿಳು ಮತ್ತು ಮಲಯಾಳಂ ಭಾಷೆಗಳಿಗೂ ಡಬ್‌ ಮಾಡಲಾಗುತ್ತದಂತೆ. 'ಬಾಹುಬಲಿ' ಸಿನಿಮಾ ವಿತರಣೆ ಮಾಡಿದ್ದ ಗ್ಲೋಬಲ್‌ ಡಿಸ್ಟ್ರಿಬ್ಯೂಟರ್ಸ್‌, ಮಲಯಾಳಂ ಡಬ್ಬಿಂಗ್‌ ಅವತರಣಿಕೆಯನ್ನು ಬಿಡುಗಡೆ ಮಾಡಲು ಮುಂದೆ ಬಂದಿದ್ದಾರಂತೆ. ಆದರೆ ತಾವಿನ್ನೂ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎನ್ನುತ್ತಾರೆ ಎಚ್‌ಡಿಕೆ. 'ಕನ್ನಡ, ತೆಲುಗು ಭಾಷೆಗಳಲ್ಲಿ ಚಿತ್ರ ನೇರವಾಗಿ ಬಿಡುಗಡೆಯಾಗಲಿದೆ. ತಮಿಳು, ಮಲಯಾಳಂ ಡಬ್ಬಿಂಗ್‌ ಅವತರಣಿಕೆಗಳಿಗೂ ಡಿಮಾಂಡ್‌ ಇದೆ. ಆದರೆ ಕನ್ನಡ, ತೆಲುಗು ಅವತರಣಿಕೆಗಳಿಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಇತರೆಡೆ ಬಿಡುಗಡೆ ಮಾಡುವುದು ಸೂಕ್ತ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾಗಿ ನಾವಿನ್ನೂ ಈ ಬಗ್ಗೆ ಯೋಚಿಸುತ್ತಿದ್ದೇವೆ' ಎನ್ನುತ್ತಾರವರು.

ಪವನ್‌ ಶ್ರೀರಕ್ಷೆ

ಜಾಗ್ವಾರ್‌ ಸಿನಿಮಾ ಟ್ರೇಲರ್‌ ಟಾಲಿವುಡ್‌ನಲ್ಲಿಯೂ ಭರ್ಜರಿ ಸದ್ದು ಮಾಡುತ್ತಿದೆ. ಹಾಗಾಗಿ ಬಿಡುಗಡೆಗೆ ಮುನ್ನ ಸಿನಿಮಾಗೆ ಉತ್ತಮ ವೇದಿಕೆ ಸೃಷ್ಟಿಸುವುದು ಸದ್ಯದ ಅಗತ್ಯ. ಹೇಳಿಕೇಳಿ ತೆಲುಗು ಚಿತ್ರರಂಗದಲ್ಲಿ ತಾರಾ ಕುಟುಂಬಗಳದ್ದೇ ಪಾರುಪತ್ಯ. ಹೊರಗಿನ ಹೀರೋಗಳು ಅಲ್ಲಿ ಸಾಕಷ್ಟು ಪೈಪೋಟಿ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪವನ್‌-ಎಚ್‌ಡಿಕೆ ಭೇಟಿಗೆ ಮಹತ್ವ ಸಿಕ್ಕಿದೆ. ಟಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸ್ಟಾರ್‌ ಹೀರೋ ಪವನ್‌ ಕಲ್ಯಾಣ್‌ ಆಶೀರ್ವಾದ ಪುತ್ರನ ಮೇಲಿದ್ದರೆ ಒಳಿತು ಎನ್ನುವ ಲೆಕ್ಕಾಚಾರವೂ ಎಚ್‌ಡಿಕೆ ಅವರದ್ದಾಗಿರಬಹುದು. ಒಟ್ಟಾರೆ ಪುತ್ರನ ಸಿನಿಮಾ ಅಭಿಯಾನಕ್ಕೆ ಎಚ್‌ಡಿಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿರುವುದಂತೂ ಸ್ಪಷ್ಟ.

ಜಾಗ್ವಾರ್‌ ಟ್ರೇಲರ್‌, ಮೇಕಿಂಗ್‌ ವೀಡಿಯೋ, ಹಾಡುಗಳನ್ನು ವೀಕ್ಷಿಸಿದ ಪವನ್‌ ಕಲ್ಯಾಣ್‌ ಸಿನಿಮಾದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿಖಿಲ್‌ನ ಫಿಸಿಕಲ್‌ ಫಿಟ್‌ನೆಸ್‌, ಬಾಡಿ ಫ್ಲೆಕ್ಸಿಬಲಿಟಿ ಅವರಿಗೆ ತುಂಬಾ ಇಷ್ಟವಾಯ್ತು. ಈ ವಾರ ಪವನ್‌ರನ್ನು ನಿಖಿಲ್‌ ಭೇಟಿ ಮಾಡಲಿದ್ದಾನೆ.

- ಎಚ್‌.ಡಿ.ಕುಮಾರಸ್ವಾಮಿ, ಜಾಗ್ವಾರ್‌ ನಿರ್ಮಾಪಕರು


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>