ಸಚಿನ್ ನಾಯಕನಾಗಿ ನಟಿಸಿರುವ 'ಹ್ಯಾಪಿ ಬರ್ತ್ ಡೇ' ಚಿತ್ರದ ಆಡಿಯೋ ರಿಲೀಸ್ ಇತ್ತೀಚೆಗೆ ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯಿತು. ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಅಂಬರೀಷ್ ಮತ್ತು ಯಶ್ ಬಂದಿದ್ದು ಎಲ್ಲರಿಗೆ ಥ್ರಿಲ್ ನೀಡಿತ್ತು. ಅಷ್ಟೇ ಅಲ್ಲ, ರಾಜಕೀಯ ಹಾಗೂ ಚಿತ್ರರಂಗದ ಅನೇಕ ಗಣ್ಯರು ಅಲ್ಲಿ ಜಮಾಯಿಸಿದ್ದರು. ರಾಜಕಾರಣಿ ಚೆಲುವರಾಯಸ್ವಾಮಿ ಹೋಂ ಬ್ಯಾನರಿನಲ್ಲಿ ಚಿತ್ರ ನಿರ್ಮಿಸಿ ತಮ್ಮ ಮಗ ಸಚಿನ್‌ನನ್ನು ಈ ಮೂಲಕ ಹೀರೋ ಮಾಡಿದ್ದಾರೆ. ಮಹೇಶ್ ಸುಖಧರೆ ಚಿತ್ರ ನಿರ್ದೇಶನ ಮಾಡಿದ್ದು. ಚಿತ್ರದ ನಾಯಕಿ ಸಂಸ್ಕೃತಿ ಶೆಣೈ, ಹರಿಪ್ರಿಯ, ದೊಡ್ಡಣ್ಣ, ರಾಜಕಾರಣಿ ಜಮೀರ್ ಅಹ್ಮದ್, ಇ. ಕೃಷ್ಣಪ್ಪ, ವಿ. ಹರಿಕೃಷ್ಣ, ರಾಕ್‌ಲೈನ್ ವೆಂಕಟೇಶ್, ಶ್ರೀನಗರ ಕಿಟ್ಟಿ ಮತ್ತಿತರರು ಪಾಲ್ಗೊಂಡು ಕಾರ್ಯಕ್ರಮಕ್ಕೆ ರಂಗು ತುಂಬಿದ್ದರು.
↧
ಹ್ಯಾಪಿ ಹಾಡುಗಳ ರಂಗು
↧