ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಪ್ರಕಟಿಸಿದ್ದು, 229 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2016ರ ಮಾರ್ಚ್‌ನಲ್ಲಿ ಅನುತ್ಪಾದಕ ಆಸ್ತಿಯ ಬಾಬ್ತು ಹೆಚ್ಚಿನ ಹಣವನ್ನು ತೆಗೆದಿಟ್ಟ ಪರಿಣಾಮ ಬ್ಯಾಂಕ್ 3,905 ಕೋಟಿ ರೂ. ನಷ್ಟಕ್ಕೀಡಾಗಿತ್ತು. ಕೆನರಾ ಬ್ಯಾಂಕಿನ ಒಟ್ಟು ಲಾಭ 1,819 ಕೋಟಿ ರೂ.ಗೆ ಏರಿದ್ದು, ಒಟ್ಟಾರೆ ವೆಚ್ಚದಲ್ಲಿ ಶೇ.2.75ರಷ್ಟು ಕಡಿಮೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಠೇವಣಿಗಳ ದರ ಶೇ.7.12ರಿಂದ ಶೇ.6.45ಕ್ಕೆ ತಗ್ಗಿದೆ. ಚಾಲ್ತಿ ಮತ್ತು ಉಳುತಾಯ ಖಾತೆ ಠೇವಣಿ ಶೇ.16.85ರಷ್ಟು ವೃದ್ಧಿಸಿದ್ದು, 1.28 ಲಕ್ಷ ಕೋಟಿ ರೂ.ಗೆ ತಲುಪಿದೆ. ಬಡ್ಡಿಯೇತರ ಆದಾಯದಲ್ಲಿ 42.38 ಪರ್ಸೆಂಟ್ ಹೆಚ್ಚಳವಾಗಿದ್ದು, 1,585 ಕೋಟಿ ರೂ.ಗಳಾಗಿದೆ. ಒಟ್ಟಾರೆ ಆದಾಯದಲ್ಲಿ ಬಡ್ಡಿಯೇತರ ಆದಾಯದ ಪಾಲು ಶೇ.13.45ರಷ್ಟಿತ್ತು. ಒಟ್ಟಾರೆ ಜಾಗತಿಕ ವಹಿವಾಟು 7.86 ಲಕ್ಷ ಕೋಟಿ ರೂ.ಗಳಾಗಿತ್ತು. ಒಟ್ಟು ಶಾಖೆಗಳ ಸಂಖ್ಯೆ 5,855 ಮತ್ತು ಎಟಿಂಎಂಗಳ ಸಂಖ್ಯೆ 9657 ಆಗಿತ್ತು. 39.36 ಲಕ್ಷ ಮೊಬೈಲ್ ಬ್ಯಾಂಕಿಂಗ್ ಮತ್ತು 25.01 ಲಕ್ಷ ಇಂಟರ್‌ನೆಟ್ ಬ್ಯಾಂಕಿಂಗ್ ಗ್ರಾಹಕರಿದ್ದರು. ಈ ತ್ರೈಮಾಸಿಕದಲ್ಲಿ ಒಟ್ಟು 11,786 ಕೋಟಿ ರೂ. ಆದಾಯ ಲಭಿಸಿದೆ. ಕೃಷಿ ಸಾಲವು ಶೇ.13.94ರಷ್ಟು ಸುಧಾರಿಸಿದ್ದು, 69419 ಕೋಟಿ ರೂ.ಗೆ ಏರಿದೆ. ಎಂ.ಎಸ್.ಇ ವಲಯಕ್ಕೆ ಒಟ್ಟು 50,997 ಕೋಟಿ ರೂ. ಸಾಲ ನೀಡಲಾಗಿದೆ. 28 ಲಕ್ಷ ಮಹಿಳೆಯರಿಗೆ 42,871 ಕೋಟಿ ರೂ. ಸಾಲ ವಿತರಿಸಲಾಗಿದೆ. ದುರ್ಬಲ ವರ್ಗಗಳಿಗೆ 44,379 ಕೋಟಿ ರೂ. ಸಾಲ ನೀಡಲಾಗಿದೆ. ನಿರ್ದಿಷ್ಟ ಅಲ್ಪ ಸಂಖ್ಯಾತ ವರ್ಗಗಳಿಗೆ 26,465 ಕೋಟಿ ರೂ. ಸಾಲ ವಿತರಿಸಲಾಗಿದೆ. ಶಿಕ್ಷಣ ಸಾಲವು ಶೇ.18.61ರಷ್ಟು ವೃದ್ಧಿಸಿದ್ದು, 2.90 ಲಕ್ಷ ವಿದ್ಯಾರ್ಥಿಗಳಿಗೆ 6,915 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
↧
ಕೆನರಾ ಬ್ಯಾಂಕ್‌ಗೆ 229 ಕೋಟಿ ರೂ. ಲಾಭ
↧