Quantcast
Channel: VijayKarnataka
Viewing all articles
Browse latest Browse all 6795

ವಿದೇಶಿ ಬ್ಯಾಂಕ್‌ಗಳಲ್ಲಿ 13 ಸಾವಿರ ಕೋಟಿ ರೂ ಕಪ್ಪು ಹಣ ಪತ್ತೆ

$
0
0

ಫಲ ನೀಡಲಾರಂಭಿಸಿದ ಕಾಳಧನದ ವಿರುದ್ಧ ಸಮರ

ಹೊಸದಿಲ್ಲಿ: ಕಾಳಧನದ ವಿರುದ್ಧ ಸರಕಾರ ಸಾರಿರುವ ಸಮರ ನಿಧಾನವಾಗಿ ಫಲ ನೀಡಲಾರಂಭಿಸಿದೆ. ಭಾರತೀಯರು ವಿದೇಶಿ ಬ್ಯಾಂಕ್‌ಗಳ ಖಾತೆಗಳಲ್ಲಿ 13 ಸಾವಿರ ಕೋಟಿ ರೂ. ಅಘೋಷಿತ ಆದಾಯ ಇಟ್ಟಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ. 2011 - 13 ನೇ ಸಾಲಿನ ನಲ್ಲಿ ಕೇವಲ 2 ಸೆಟ್‌ ಮಾಹಿತಿಗಳಿಂದ ಈ ಅಂಶ ಬಯಲಾಗಿದೆ ಎಂಬುದು ಗಮನಾರ್ಹ.

ಕನಿಷ್ಠ 400 ಪ್ರಕರಣಗಳಲ್ಲಿ ಭಾರತೀಯರು ಎಚ್‌ಎಸ್‌ಬಿಸಿ ಜಿನೇವಾ ಬ್ಯಾಂಕ್‌ನಲ್ಲಿ ಇಟ್ಟಿರುವ ಸುಮಾರು 8,186 ಕೋಟಿ ರೂ ಅಘೋಷಿತ ಆದಾಯ ಪತ್ತೆಯಾಗಿದೆ. ಫ್ರೆಂಚ್‌ ಸರಕಾರದಿಂದ ಈ ಮಾಹಿತಿ ಸ್ವೀಕರಿಸಲಾಗಿದೆ.

ಎಚ್‌ಎಸ್‌ಬಿಸಿ ಬ್ಯಾಂಕ್‌ ಪ್ರಕರಣಗಳಲ್ಲಿ ಸುಮಾರು 628 ಖಾತೆಗಳ ಮಾಹಿತಿಯನ್ನು ಸರಕಾರ ಪಡೆದಿದ್ದು, ಇದರಲ್ಲಿ ಸುಮಾರು 213 ಖಾತೆಗಳ ಸ್ಥಗಿತಗೊಂಡಿವೆ. ಇಲ್ಲವೇ ಅವುಗಳಲ್ಲಿ ಯಾವುದೇ ಹಣವಿಲ್ಲ ಅಥವಾ ಅವೆಲ್ಲ ಅನಿವಾಸಿ ಭಾರತೀಯರ ಖಾತೆಗಳಾಗಿವೆ ಎನ್ನಲಾಗಿವೆ. ಆದರೆ ಐಟಿ ಇಲಾಖೆಯ ಈ ಎಲ್ಲ ಆರೋಪಗಳನ್ನು ಎಚ್‌ಎಸ್‌ಬಿಸಿ ಅಲ್ಲಗಳೆದಿದೆ. ಇನ್ನೊಂದು ಮೂಲದ ಪ್ರಕಾರ 2013 ರಲ್ಲಿ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ( ಐಸಿಐಜೆ) ದ ತನಿಖೆಯಿಂದ ಬಯಲಾದ ಮಾಹಿತಿ ಆಧರಿಸಿ, ಐಟಿ ನಡೆಸಿದ ತನಿಖೆಯಲ್ಲಿ ಸುಮಾರು 700 ಭಾರತೀಯರ ವಿದೇಶಿ ಖಾತೆಗಳಲ್ಲಿ ಸುಮಾರು 5 ಸಾವಿರ ಕೋಟಿ ರೂ. ಅಘೋಷಿತ ಆದಾಯ ಪತ್ತೆ ಹಚ್ಚಲಾಗಿದೆ.

ಐಸಿಐಜೆ ತನಿಖೆ ಆಧಾರದ ಮೇಲೆ, ತೆರಿಗೆ ತಪ್ಪಿಸಲು ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಬಗ್ಗೆ ಐಟಿ ಇಲಾಖೆ ಸುಮಾರು 55 ದೂರುಗಳನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದೆ. ಈ ಕುರಿತಂತೆ ದಾಖಲೆಗಳ ಪರಿಶೀಲನೆ ವೇಳೆ, ಸಂಸ್ಥೆಗಳು ತೆರಿಗೆ ತಪ್ಪಿಸಲು ಸುಳ್ಳು ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಎಚ್‌ಎಸ್‌ಬಿಸಿ ಜಿನೇವಾದ ಸುಮಾರು 75 ಪ್ರಕರಣಗಳಲ್ಲಿ ತೆರಿಗೆ ಅಧಿಕಾರಿಗಳು ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>