Quantcast
Channel: VijayKarnataka
Viewing all articles
Browse latest Browse all 6795

ಮಿಡಲ್‌ ಕ್ಲಾಸ್‌ ಸಂಯುಕ್ತ

$
0
0

ಗುಜರಾತಿ ಸೇರಿದಂತೆ ಹಲವು ಸಿನಿಮಾ ರಂಗಗಳಲ್ಲಿ ಬಿಝಿ ಆಗಿರುವ ಸಂಯುಕ್ತ ಬೆಳವಾಡಿ, ಸದ್ಯ ಎಸ್‌ಆರ್‌ವಿ ಮತ್ತು ಕಿಚ್ಚ ಸುದೀಪ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಆಗಿರುವ 'ಜಿಗರ್‌ ಥಂಡ' ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಆ ಕುರಿತು ಲವಲವಿಕೆಯ ಜತೆ ಅವರು ಮಾತಾಡಿದ್ದಾರೆ.

- ಶರಣು ಹುಲ್ಲೂರು

ಒಗ್ಗರಣೆ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಸಂಯುಕ್ತ ಬೆಳವಾಡಿ, ಸದ್ಯ ಬಿಝಿ ನಟಿ. ಗುಜರಾತಿ ಸೇರಿದಂತೆ ನಾನಾ ಭಾಷೆಗಳಲ್ಲಿ ಇವರು ನಟಿಸುತ್ತಿದ್ದಾರೆ. ಜೂ.24ರಂದು ಸಂಯುಕ್ತ ನಾಯಕಿಯಾಗಿ ನಟಿಸಿರುವ 'ಜಿಗರ್‌ ಥಂಡ' ಚಿತ್ರವು ರಿಲೀಸ್‌ ಆಗುತ್ತಿದೆ. ಇದೇ ಮೊದಲ ಬಾರಿಗೆ ಮಧ್ಯಮ ವರ್ಗ ಕುಟುಂಬ ಹುಡುಗಿಯಾಗಿ ನಟಿಸಿರುವ ಇವರು, ಆ ಪಾತ್ರದ ಬಗ್ಗೆ ಮಾತಾಡಿದ್ದಾರೆ.

* ಜಿಗರ್‌ ಥಂಡದಲ್ಲಿ ನಿಮ್ಮದು ವಿಭಿನ್ನ ಪಾತ್ರವಂತೆ. ಯಾವ ರೀತಿಯ ಕ್ಯಾರೆಕ್ಟರ್‌ ಅದು?

ಲಕ್ಷ್ಮಿ ಅನ್ನುವ ಪಾತ್ರವದು. ಆಕೆ ತೀರಾ ಬಡತನ ಕುಟುಂಬದಲ್ಲಿ ಹುಟ್ಟಿದ ಹುಡುಗಿ. ಬೆಂಗಳೂರು ಮತ್ತು ಅಲ್ಲಿನ ಜನ ಹೇಗಿರುತ್ತಾರೆ ಅನ್ನುವ ಕಲ್ಪನೆಯೂ ಇಲ್ಲದ ಮುಗ್ಧ ಹುಡುಗಿ. ಆದರೂ, ಆಕೆಗೆ ಬೆಂಗಳೂರಿಗೆ ಹೋಗುವ ಕನಸು. ಬೆಂಗಳೂರಿಗೆ ಹೋಗುತ್ತಿರುವ ಹುಡುಗರ ಪರಿಚಯ ಅವಳಿಗಾಗುತ್ತದೆ. ಅವರೊಂದಿಗೆ ನಾನೂ ಹೊರಟರೆ, ನನ್ನ ಕನಸಿನ ಊರು ಸೇರಬಹುದು ಅನ್ನುವ ನಂಬಿಕೆಯೊಂದಿಗೆ ಹೊರಡುತ್ತೇನೆ. ಆಗ ಅವಳು ಎಷ್ಟೆಲ್ಲ ಕಷ್ಟ ಪಡುತ್ತಾಳೆ ಅನ್ನುವುದೇ ಕ್ಯಾರೆಕ್ಟರ್‌ ಹಿನ್ನಲೆ.

* ಈ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?

ಎಂಥವರಿಗೂ ಮುದ್ದು ಬರುವ ಪಾತ್ರವದು. ಸಹಾಯ ಮಾಡುವುದೇ ಅವಳ ಪರಮ ಗುರಿ. ಹೀಗೆ ಹೆಲ್ಪ್‌ ಮಾಡೋಕೆ ಹೋಗಿ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾಳೆ. ಅದರಿಂದ ಪಾರಾಗುವ ಬಗೆ ಇದೆಯಲ್ಲ, ಅದು ಎಲ್ಲರಿಗೂ ಕಣ್ಣೀರು ತರಿಸಿಬಿಡುತ್ತದೆ. ತಮಾಷೆಯಾಗಿಯೇ ಸಿನಿಮಾ ಸಾಗಿದರೂ, ಆ ಹುಡುಗಿಯ ಬಗ್ಗೆ ಕನಿಕರ ಹುಟ್ಟುತ್ತದೆ. ಈ ಕಾರಣಗಳಿಂದಾಗಿ ನಾನು ಪಾತ್ರ ಒಪ್ಪಿಕೊಂಡೆ.

* ನಿಮ್ಮ ನಿಜ ಜೀವನಕ್ಕೂ, ಪಾತ್ರಕ್ಕೂ ಸಾಕಷ್ಟು ವಿರುದ್ಧ ಗುಣಗಳಿವೆ. ಹೇಗೆಲ್ಲ ತಯಾರಿ ಮಾಡಿಕೊಂಡಿರಿ?

ಈವರೆಗೂ ನಾನು ಸಖತ್‌ ಬೋಲ್ಡ್‌ ಪಾತ್ರವನ್ನೇ ಮಾಡಿಕೊಂಡು ಬಂದವಳು. ಇದೇ ಮೊದಲ ಮಿಡಲ್‌ ಕ್ಲಾಸ್‌ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ವೆರಿ ಫನ್ನಿ ಮತ್ತು ವೆರಿ ಕ್ಯೂಟ್‌ ಪಾತ್ರವಿದ್ದರೂ, ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಯಿತು. ಹೇರ್‌ಸ್ಟೈಲ್‌, ಕಾಸ್ಟ್ಯೂಮ್‌ ಅಷ್ಟೇ ಅಲ್ಲ, ಅವಳು ಜೀವನ ರೀತಿಯಲ್ಲೂ ಸಾಕಷ್ಟು ಬದಲಾವಣೆಗಳಿವೆ. ಅವೆಲ್ಲವನ್ನೂ ನಾನು ರೂಢಿಸಿಕೊಂಡು ನಟನೆ ಮಾಡಿದ್ದೇನೆ. ಮೇಕಪ್‌ ಇಲ್ಲದೇ ಒಂದಿಷ್ಟು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೇನೆ.

* ಗುಜರಾತಿನ ಸಿನಿಮಾದ ಎಕ್ಸ್‌ಪಿರಿಯನ್ಸ್‌ ಹೇಗಿತ್ತು?

ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸುವಾಗ ಸಖತ್‌ ಥ್ರಿಲ್‌ ಅನಿಸಿತು. ಆ ಭಾಷೆಯನ್ನು ಅರ್ಥ ಮಾಡಿಕೊಳ್ಳುವಾಗಂತೂ ಇನ್ನಷ್ಟು ಖುಷಿ ಆಯಿತು. ಕನ್ನಡದ ಅನೇಕ ನಟಿಯರು ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಕೀರ್ತಿಯನ್ನು ಪಸರಿಸುತ್ತಿದ್ದಾರೆ. ಆ ಫೀಲ್‌ ನನಗೂ ಆಯಿತು. ಇಂತಹ ಹೆಮ್ಮೆಯು ಕನ್ನಡದಲ್ಲಿ ನಟಿಸುವಾಗಲೂ ಸಹಜವಾಗಿ ಅನಿಸುತ್ತದೆ. ಸದ್ಯ ನಾನು 'ಮಾರಿಕೊಂಡವರು' ಎಂಬ ಕಲಾತ್ಮಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕನ್ನಡದಲ್ಲಿ ಇನ್ನೂ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಇವೆಲ್ಲವೂ ಬೇರೆ ಬೇರೆ ಅನುಭವನನ್ನು ಕೊಟ್ಟಿವೆ.

* ಜಿಗರ್‌ ಥಂಡ ಸಿನಿಮಾದ ನಾಯಕ ರಾಹುಲ್‌ ಜತೆಗಿನ ಕೆಮೆಸ್ಟ್ರಿ ಹೇಗಿತ್ತು?

ರಾಹುಲ್‌ ಜತೆಗಿನ ಕಾಂಬಿನೇಷನ್‌ ತುಂಬಾ ಚೆನ್ನಾಗಿದೆ. ರಾಹುಲ್‌ ನಿರ್ವಹಿಸಿದ ಪಾತ್ರಕ್ಕೆ ಪ್ರೀತಿ ಪ್ರೇಮ ಎರಡೂ ಬೇಡ. ನನ್ನ ಪಾತ್ರ ಹಾಗಲ್ಲ. ತುಂಬಾ ಕನಸಿಟ್ಟುಕೊಂಡಿರುವ ಹುಡುಗಿ. ಹೀಗಾಗಿ ಕಾಂಬಿನೇಷನ್‌ ಸಖತ್‌ ವರ್ಕ ಆಗಿದೆ. ನಾನು ಇನ್ನೊಂದು ಮಾತನ್ನು ಹೇಳಲೇಬೇಕು. ಕಿಚ್ಚ ಸುದೀಪ್‌ ಅವರ ಬ್ಯಾನರ್‌ನಲ್ಲಿ ನಟಿಸುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶಾಕಿಂಗ್ ನ್ಯೂಸ್: ಶಾಲೆಯಲ್ಲೇ ಸೆಕ್ಸ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ