Quantcast
Channel: VijayKarnataka
Viewing all articles
Browse latest Browse all 6795

ಸೆನ್ಸೆಕ್ಸ್‌ 193 ಅಂಕ ಏರಿಕೆ

$
0
0

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 193.20 ಅಂಕ ಚೇತರಿಸಿತು. ದಿವಾಳಿತನ ಕುರಿತ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರವಾಗಿರುವುದು ಷೇರು ಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿತು. ಸೆನ್ಸೆಕ್ಸ್‌ 25,790.22ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ನಿಫ್ಟಿ 51.55 ಅಂಕ ಚೇತರಿಸಿಕೊಂಡು 7,916.05 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಐಸಿಐಸಿಐ ಬಾಕ್ಕ್‌ ಸೇರಿದಂತೆ ಬ್ಯಾಂಕಿಂಗ್‌ ವಲಯದ ಷೇರುಗಳು ಭಾರಿ ಲಾಭ ಗಳಿಸಿತು. ಜಪಾನ್‌, ಸಿಂಗಾಪುರದಲ್ಲಿ ಷೇರು ಸೂಚ್ಯಂಕ ಏರಿಕೆ ದಾಖಲಿಸಿತ್ತು. ಆದರೆ ಯುರೋಪಿನಲ್ಲಿ ಇಳಿಕೆ ಕಂಡು ಬಂದಿತು. ಒಟ್ಟು 1,569 ಷೇರುಗಳು ಲಾಭ ಗಳಿಸಿದರೆ, 1,001 ಷೇರುಗಳು ನಷ್ಟಕ್ಕೀಡಾಯಿತು. ಒಟ್ಟು ವಹಿವಾಟು 2,650.92 ಕೋಟಿ ರೂ.ನಷ್ಟಿತ್ತು.



Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>