Quantcast
Channel: VijayKarnataka
Viewing all articles
Browse latest Browse all 6795

ಸ್ಟೈಲ್‌ ಕಿಂಗ್‌ ಮೇನಿಯಾ

$
0
0

* ಪದ್ಮಾ ಶಿವಮೊಗ್ಗ

ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಮುಂಗಾರು ಮಳೆ ಚಿತ್ರದಿಂದ ಹುಟ್ಟಿಕೊಂಡ ಅಭಿಮಾನಿಗಳು ಮೊದಲಿನಿಂದ ತಮ್ಮ ಅಭಿಮಾನವನ್ನು ಚಿತ್ರ ರಿಲೀಸ್‌ ಟೈಮಲ್ಲಿ ತೋರಿಸುತ್ತಾ ಬಂದಿದ್ದಾರೆ. ಆದರೆ, ಈಗ ಬರಲಿರುವ ಸ್ಟೈಲ್‌ ಕಿಂಗ್‌ ಸ್ಪೆಷಾಲಿಟಿನೇ ಬೇರೆ. ಕಾರಣ ಇದುವರೆಗೆ ಪ್ರೇಕ್ಷಕ ಕಂಡ ಗಣೇಶ್‌ ಬೇರೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಗಣೇಶ್‌ ಬೇರೆ. ನಿರ್ದೇಶಕ ಪಿ.ಸಿ. ಶೇಖರ್‌ ಕೈಚಳಕದಿಂದ ಮೊದಲ ಬಾರಿಗೆ ಹೊಸ ಗೆಟಪ್‌ನಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಲವರ್‌ ಬಾಯ್‌ ಗಣೇಶ್‌ ಆಗಿ ಇನ್ನಷ್ಟು ಯಂಗ್‌ ಆಗಿ ಕಾಣಿಸಿಕೊಂಡಿರುವ ಗಣೇಶ್‌ ಇನ್ನೊಂದು ಪಾತ್ರದಲ್ಲಿ ಭೂಗತ ಜಗತ್ತಿನ ದೊರೆಯಾಗಿ ಗುರುತೇ ಸಿಗದಂತಿದ್ದಾರೆ. ಈಗ ಡಾನ್‌ ಕ್ಯಾರೆಕ್ಟರ್‌ನ ಗೆಟಪ್‌ಗೆ ಮಾರುಹೋಗಿದ್ದಾರೆ. ಇದಕ್ಕೆ ಸಾಕ್ಷಿ ಇಲ್ಲಿರುವ ಫೋಟೋಗಳು. ಅಭಿಮಾನಿಗಳು ಅದೇ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿಯ ಗಡ್ಡ ಮೀಸೆ ಬಿಟ್ಟುಕೊಂಡು ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ಅವರಂತೆಯೇ ಫೋಸ್‌ ಕೊಟ್ಟಿರುವ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

ಸ್ಟೈಲ್‌ ಕಿಂಗ್‌ ಚಿತ್ರಕ್ಕಾಗಿ ಹುಚ್ಚರಂತೆ ಅಭಿಮಾನಿಗಳು ಕಾಯುತ್ತಿರುವುದಕ್ಕೆ ಇನ್ನೊಂದು ಕಾರಣ ನಿರ್ದೇಶಕ ಪಿ.ಸಿ. ಶೇಖರ್‌. ಗಣೇಶ ಮತ್ತು ಶೇಖರ್‌ ಇಬ್ಬರ ಬಗ್ಗೆಯೂ ಈ ಅಭಿಮಾನ ಬೆಳೆಯಲು ಕಾರಣ 'ರೋಮಿಯೋ' ಚಿತ್ರ ಎಂದರೆ ತಪ್ಪಾಗದು.

ಇವರಿಬ್ಬರ ಕಾಂಬಿನೇಷನ್‌ನಲ್ಲಿ ತೆರೆಕಂಡ ಮೊದಲ ಚಿತ್ರ ರೋಮಿಯೋ. ಸೂಪರ್‌ ಹಿಟ್‌ ಆದ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಟಿವಿ ವಾಹಿನಿಗಳಲ್ಲಿ ನೂರಾರು ಬಾರಿ ಪ್ರಸಾರಗೊಂಡಿದೆ. ಇಲ್ಲಿಂದ ಶುರುವಾದ ಈ ಜೋಡಿಯ ಸಕ್ಸಸ್‌ ಯಾನ ಈಗ ಸ್ಟೈಲ್‌ ಕಿಂಗ್‌ ಹುಟ್ಟಿಗೆ ಕಾರಣವಾಗಿದೆ. ಹಾಗಾಗಿಯೇ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಪ್ರೀತಿ.

ಸ್ಟೈಲ್‌ ಕಿಂಗ್‌ನಲ್ಲಿ ಗಣೇಶ್‌ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಹೇಗೆ ಹಬ್ಬಿದೆ ಎನ್ನುವುದಕ್ಕೆ ಇಲ್ಲಿರುವ ಫೋಟೋಗಳೇ ಸಾಕ್ಷಿ. ಒಬ್ಬನ ಟೀ ಶರ್ಟ್‌ ಮೇಲೆ ಸ್ಟೈಲ್‌ ಕಿಂಗ್‌ ಅವತರಿಸಿದ್ದರೆ, ಇನ್ನೊಬ್ಬ ತೋಳಿನಲ್ಲೇ ಹಚ್ಚೆ ಹಾಕಿಸಿಕೊಂಡಿದ್ದಾನೆ. ಆಟೋ, ಕಾರು, ಟೂವೀಲರ್‌, ಜೀಪ್‌ಗಳ ಮೇಲೂ ಸ್ಟೈಲ್‌ ಕಿಂಗ್‌ ರಾರಾಜಿಸುತ್ತಿದ್ದಾರೆ. ವಾಹನದ ನಂಬರ್‌ ಪ್ಲೇಟ್‌ ಮೇಲೆ, ಕೀ ಬಂಚ್‌, ಮನೆಯ ಗೋಡೆ, ಕಂಪ್ಯೂಟರ್‌ ಮೌಸ್‌, ಎಲ್ಲೆಲ್ಲೂ ಸ್ಟೈಲ್‌ ಕಿಂಗ್‌ದೇ ಹವಾ. ಬಿ.ಟಿ. ಬಸವರಾಜ್‌ ಎನ್ನುವವರು ಇನ್ನೂ ಮುಂದೆ ಹೋಗಿ ಸ್ಟೈಲ್‌ ಕಿಂಗ್‌ನ ಗಣೇಶ್‌ ಲುಕ್‌ ಅನ್ನು ಯಥಾವತ್ತಾಗಿ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಫ್ಯಾನ್ಸ್‌ಗಳ ಅಭಿಮಾನ ಇಷ್ಟಕ್ಕೇ ಮುಗಿಯಲಿಲ್ಲ. ತಾವೇ ಪೊಸ್ಟರ್‌ಗಳು ಕ್ರಿಯೇಟ್‌ ಮಾಡಿದ್ದಾರೆ. ತಾವೇ ಗಣೇಶ್‌ರಂತೆ ನಟಿಸಿ ವೀಡಿಯೋ ಟ್ರೇಲರ್‌ ಕೂಡಾ ಸೃಷ್ಟಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈಗ ಗಣೇಶ್‌ ಫೋಟೋಗಳನ್ನು ಟೀ ಶರ್ಟ್‌ ಮೇಲೆ ಮುದ್ರಿಸಿ ಧರಿಸಲು ಸಿದ್ಧರಾಗಿದ್ದಾರೆ.

ಅಭಿಮಾನಿಗಳ ಫೇಸ್‌ಬುಕ್‌ನ ಪ್ರೊಫೈಲ್‌ ಫೋಟೋಗಳೆಲ್ಲಾ ಸ್ಟೈಲ್‌ ಕಿಂಗ್‌ಮಯವಾಗಿವೆ. ಚಿತ್ರ ರಿಲೀಸ್‌ಗೆ ಇನ್ನೂ ಒಂದು ವಾರ ಇರುವುದರಿಂದ ಈ ಮೇನಿಯಾ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಗಣೇಶ್‌ ಇದುವರೆಗೆ ಕಾಣಿಸಿಕೊಂಡಿರುವ ಲವರ್‌ ಬಾಯ್‌ ಆಗಿಯೂ ಪ್ರೇಕ್ಷಕರಿಗೆ ನಿರಾಶೆ ಆಗುವುದಿಲ್ಲ. ಚಿತ್ರದಲ್ಲಿ ನಾಯಕಿ ಒಬ್ಬಳೇ ಇರೋದು ಇನ್ನೊಂದು ಕುತೂಹಲವನ್ನು ಉಂಟು ಮಾಡಿದೆ. ಮಲಯಾಳ ನಟಿ ರೆಮ್ಯಾ ನಂಬೀಸನ್‌ ಈ ಪಾತ್ರದಲ್ಲಿ ನಟಿಸಿದ್ದಾರೆ. ಇವರಲ್ಲದೆ, ಗಿರೀಶ್‌, ಸಾಧು ಕೋಕಿಲಾ, ರಂಗಾಯಣ ರಘು ಮತ್ತಿತರರು ನಟಿಸಿದ್ದು, ಪಕ್ಕಾ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಎಂಬುದನ್ನು ಹೇಳಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>