Quantcast
Channel: VijayKarnataka
Viewing all articles
Browse latest Browse all 6795

ಕಿರುಚಿತ್ರಗಳತ್ತ ನಾಯಕಿಯರು

$
0
0

* ಪದ್ಮಾ ಶಿವಮೊಗ್ಗ

ಇತ್ತೀಚೆಗೆ ಚಲನಚಿತ್ರಗಳಂತೆಯೇ ಕಿರುಚಿತ್ರಗಳು ಕೂಡ ಸುದ್ದಿ ಮಾಡುತ್ತಿವೆ. ಯುವ ಪೀಳಿಗೆ ಕಡಿಮೆ ಬಜೆಟ್‌ನ ಕಿರುಚಿತ್ರಗಳನ್ನು ಮಾಡಿ ತಮ್ಮ ಕನಸಿಗೆ ಮುನ್ನುಡಿ ಹಾಡುತ್ತಿದೆ. ಇವುಗಳಲ್ಲಿ ನಟಿಸಲು ನಾಯಕಿಯರು ಕೂಡ ಮುಂದಾಗಿದ್ದಾರೆ. ಶ್ರುತಿ ಹರಿಹರನ್‌, ರಾಧಿಕಾ ಚೇತನ್‌, ನಿವೇದಿತಾ ಮತ್ತಿತರರು ಈಗಾಗಲೇ ಕಿರುಚಿತ್ರಗಳಲ್ಲಿ ನಟಿಸಿ ಸುದ್ದಿಯಾಗಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ಸಿಗದೆ ಕಿರುಚಿತ್ರದತ್ತ ಹೊರಳಿದ್ದಾರೆ ಅಂತ ಹೇಳಲು ಬರುವುದಿಲ್ಲ. ಈಗಷ್ಟೇ ಬೇಡಿಕೆ ಪಡೆಯುತ್ತಿರುವ ನಟಿಯರೂ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ.

ಎಬಿಸಿಗೆ ಶ್ರುತಿ ಹರಿಹರನ್‌:

ಶ್ರುತಿ ಹರಿಹರನ್‌ ಈಗ ಬಿಝಿ ನಟಿ. ಕನ್ನಡ ಚಿತ್ರಗಳಲ್ಲಿ ಮಾತ್ರ ಅಲ್ಲ ತಮಿಳಿನಲ್ಲೂ ನಟಿಸುತ್ತಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಬ್ಯೂಟಿಫುಲ್‌ ಮನಸುಗಳು, ಭುಜಂಗ ಮತ್ತಿತರ ನಾಲ್ಕೈದು ಚಿತ್ರಗಳು ಕೈಯಲ್ಲಿವೆ. ಇದರ ನಡುವೆ ಹಿಂದಿಯ 'ಎಬಿಸಿ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಶಾಜನ್‌ ಸ್ಯಾಮುಯಲ್‌ ನಿರ್ದೇಶನದ 19 ನಿಮಿಷಗಳ ಕಿರುಚಿತ್ರದಲ್ಲಿ ಕಾರು ತೊಳೆಯುವ ಹುಡುಗನ ಕತೆ ಇದೆ. ಹುಡುಗನ ಪಾತ್ರದಲ್ಲಿ ನಟಿಸಿರುವ ಶಹಬಾಜ್‌ ಮತ್ತು ಶ್ರುತಿ ನಡುವೆ ಚಿತ್ರದ ಕತೆ ಸಾಗುತ್ತದೆ. 'ಜೀವನದಲ್ಲಿ ಸಣ್ಣಪುಟ್ಟ ಸಂಗತಿಗಳೂ ಹೇಗೆ ಸಂತೋಷವನ್ನು ನೀಡುತ್ತವೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಹೊಸ ಚಿತ್ರಗಳಲ್ಲಿ ಪ್ರಯೋಗ ಹೆಚ್ಚಾಗಿದೆ. ಕರ್ನಾಟಕದಲ್ಲೂ ಕಿರುಚಿತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ' ಎನ್ನುತ್ತಾರೆ ಶ್ರುತಿ ಹರಿಹರನ್‌.

ನೆವರ್‌ ಎಂಡ್‌ನಲ್ಲಿ ರಾಕಾ ಚೇತನ್‌:

ಕಳೆದ ವರ್ಷ ರಂಗಿತರಂಗ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದವರು ರಾಕಾ ಚೇತನ್‌. ೕರಜ್‌ ನಿರ್ದೇಶನದ 'ನೆವರ್‌ ಎಂಡ್‌' ಕನ್ನಡ ಕಿರುಚಿತ್ರದಲ್ಲಿ ಇವರು ಸಿ.ಬಿ.ಐ. ಪಾತ್ರದಲ್ಲಿ ಮಿಂಚಿದ್ದಾರೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕತೆಯಿರುವ ಚಿತ್ರ ಭಾರೀ ಸದ್ದು ಮಾಡಿದೆ. ಇನ್ನು ಅವರ ಅಭಿನಯದ ಯು ಟರ್ನ್‌ ಚಿತ್ರ ಕೂಡಾ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಅನ್ನೋದು ವಿಶೇಷ. ನೆವರ್‌ ಎಂಡ್‌ ಕಿರುಚಿತ್ರದ ಟ್ರೇಲರ್‌ ಈಗಾಗಲೇ ಆನ್‌ಲೈನ್‌ನಲ್ಲಿ ಹೆಚ್ಚು ರೆಸ್ಪಾನ್ಸ್‌ ಗಿಟ್ಟಿಸಿದೆ. ಚರಣ್‌ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪರಾಗ ಸ್ಪರ್ಶದಲ್ಲಿ ನಿವೇದಿತಾ:

ರಾಜ್ಯ ಪ್ರಶಸ್ತಿ ವಿಜೇತೆ ನಿವೇದಿತಾ ಕೂಡಾ ಈಗ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಪ್ರಸನ್ನ ಕಾಡ್‌ಪಾಡಿ ನಿರ್ದೇಶನದ 'ಪರಾಗ ಸ್ಪರ್ಶ'ದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ಪ್ರಸನ್ನ ತಮ್ಮ ಕಿರುಚಿತ್ರಕ್ಕೆ ಬಾಡಿಗೆ ತಾಯಿಯ ಕತೆ ಆಯ್ಕೆ ಮಾಡಿಕೊಂಡಿದ್ದಾರೆ. ನಿವೇದಿತಾ ಸರೋಗೇಟ್‌ ಮದರ್‌ ಆಗಿ ನಟಿಸಿರೋದು ವಿಶೇಷ. ವಿದೇಶಿ ದಂಪತಿ, ಹೂ ಮಾರುವ ಮಹಿಳೆಯನ್ನು ಸರೋಗೇಟ್‌ ಮದರ್‌ ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಮಗುವಾಗುವ ಮೊದಲೇ ಆ ದಂಪತಿ ಡೈವೋರ್ಸ್‌ ಪಡೆಯುತ್ತಾರೆ. ಮಗು ಮತ್ತು ತಾಯಿ ಏನು ಮಾಡುತ್ತಾರೆ ಎನ್ನುವ ಕತೆಯನ್ನು ಕಿರುಚಿತ್ರ ಮಾಡಿದ್ದಾರೆ ಪ್ರಸನ್ನ. ರಂಗಭೂಮಿ ಕಲಾವಿದೆ ಸಿತಾರಾ ಕೂಡ ಇದರಲ್ಲಿ ನಟಿಸಿದ್ದಾರೆ.

ನಾಯಕಿಯರಷ್ಟೇ ಅಲ್ಲ, ಜನಪ್ರಿಯ ಹಿರಿಯ ಕಲಾವಿದರೂ ಈಗ ಕಿರು ಚಿತ್ರಗಳತ್ತ ಆಸಕ್ತಿ ತೋರುತ್ತಿದ್ದಾರೆ. 'ಜೀವನ ಜರ್ನಿ ಚೌಕಾ ಬಾರಾ' ಕಿರುಚಿತ್ರವೊಂದು ನಿರ್ಮಾಣವಾಗಿದ್ದು, ಇದರಲ್ಲಿ ಅಚ್ಯುತ್‌ ಕುಮಾರ್‌ ಮತ್ತು ಶರತ್‌ ಲೋಹಿತಾಶ್ವ, ಅಶ್ವಿನಿ ಗೌಡ ಮತ್ತಿತರರು ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಬಲ್ಲ ಪ್ರತಿಭೆಗಳ ಪ್ರಾಥಮಿಕ ಪ್ರಯತ್ನಕ್ಕೆ ಇವರೆಲ್ಲ ಬೆಂಬಲ ನೀಡುತ್ತಿರುವುದು ಖುಷಿಯ ವಿಚಾರ.

-

ಎಬಿಸಿ ಕಿರು ಚಿತ್ರ ಒಪ್ಪಿಕೊಳ್ಳಲು ಅದರ ಕತೆಯೇ ಕಾರಣ. ಕಿರು ಚಿತ್ರವಾದರೂ ಕತೆ ಬಹಳ ಹಿಡಿಸಿತು.
-ಶ್ರುತಿ ಹರಿಹರನ್‌, ನಟಿ


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>