Quantcast
Channel: VijayKarnataka
Viewing all articles
Browse latest Browse all 6795

ಮಲ್ಟಿ ಟಾಸ್ಕ್‌ನಲ್ಲಿ ಹೊಸ ಸಿನಿಮಾ

$
0
0

ನಿರ್ದೇಶಕ ಗುರು ದೇಶಪಾಂಡೆ ಎರಡು ಚಿತ್ರಗಳ ಜತೆ ಈಗ ಇನ್ನೊಂದು ಮಲ್ಟಿ ಸ್ಟಾರ್‌ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗ ಮೂವರು ನಾಯಕರ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಗುರು ದೇಶಪಾಂಡೆ ಚಿರಂಜೀವಿ ಸರ್ಜಾ ನಾಯಕನಾಗಿರುವ ರುದ್ರತಾಂಡವ ಚಿತ್ರ ನಿರ್ದೇಶನ ಮಾಡಿದ್ದರು. ನಂತರ ಎರಡು ಸಿನಿಮಾಗಳಿಗೆ ಸಿದ್ಧರಾದರು. ಒಂದು ನೀನಾಸಂ ಸತೀಶ್‌ ಅಭಿನಯದ ಚಿತ್ರ. ಇನ್ನೊಂದು ಆದಿತ್ಯ ಅಭಿನಯದ ಥಾಕರೆ ಚಿತ್ರ. ಇವೆರಡು ಚಿತ್ರಗಳ ಜತೆಯಲ್ಲೇ ಮೂರನೇ ಚಿತ್ರ ಪ್ರಕಟಿಸಿದ್ದಾರೆ. ಈ ಬಾರಿ ಮೂವರು ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಜಯ್‌ ರಾವ್‌, ಯೋಗಿ ಮತ್ತು ಮದರಂಗಿ ಕೃಷ್ಣ ಒಟ್ಟಿಗೆ ಈ ಚಿತ್ರದಲ್ಲಿ ನಟಿಸಲಿರುವುದು ವಿಶೇಷ. ಚಿತ್ರದ ಹೆಸರನ್ನೂ ಈಗಾಗಲೇ ಪ್ರಕಟಿಸಿದ್ದಾರೆ. 'ಮೂವರು ಹೀರೊಗಳಿರುವ ಚಿತ್ರಕ್ಕೆ ಜಾನ್‌ ಜಾನಿ ಜನಾರ್ದನ್‌ ಎಂದು ಹೆಸರಿಡಲಾಗಿದೆ. ಮುತ್ತಪ್ಪ ರೈ ಬ್ಯಾನರ್‌ನಡಿ ಚಿತ್ರ ನಿರ್ಮಾಣಗೊಳ್ಳಲಿದೆ. ಅಜಯ್‌, ಯೋಗಿ ಮತ್ತು ಕೃಷ್ಣ ಮೂವರ ಕಾಂಬಿನೇಷನ್‌ ಚೆನ್ನಾಗಿ ಮೂಡಿಬರಲಿದೆ' ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>