Quantcast
Channel: VijayKarnataka
Viewing all articles
Browse latest Browse all 6795

ಬಾಂಗ್ಲಾ; ಜಾತ್ಯತೀತವಾದಿ ವಿದ್ಯಾರ್ಥಿ ಕೊಲೆ

$
0
0

ಢಾಕಾ: ತೀವ್ರವಾದಿ ಮುಸ್ಲಿಮರ ವಿರುದ್ಧ ಫೇಸ್‌ಬುಕ್‌ನಲ್ಲಿ ಬರೆದ ಬಾಂಗ್ಲಾದೇಶಿ ಕಾನೂನು ವಿದ್ಯಾರ್ಥಿಯನ್ನು ಜನನಿಬಿಡ ರಸ್ತೆಯಲ್ಲೇ ಶಸ್ತ್ರಸಜ್ಜಿತ ಉಗ್ರಗಾಮಿಗಳು ಇರಿದು, ಬಳಿಕ ಗುಂಡು ಹೊಡೆದು ಕೊಂದ ಘಟನೆ ಗುರುವಾರ ರಾತ್ರಿ ಇಲ್ಲಿನ ಸೂತ್ರಪುರದಲ್ಲಿ ನಡೆದಿದೆ.

ಜಾತ್ಯತೀತ ಬ್ಲಾಗರ್‌ಗಳು ಹಾಗೂ ಚಳುವಳಿಕಾರರ ಮೇಲೆ ಬಹುಸಂಖ್ಯಾತ ಮುಸ್ಲಿಂ ದೇಶದಲ್ಲಿ ನಿರಂತರ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಲೇ ಇದ್ದು, ಆ ಸಾಲಿಗೆ ಹೊಸ ಸೇರ್ಪಡೆ ಇದಾಗಿದೆ.

ಇಲ್ಲಿನ ಜಗನ್ನಾಥ್‌ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ, ನಾಜಿಮುದ್ದೀನ್‌ ಸಮದ್‌(28) ಶಂಕಿತ ಐಸಿಸ್‌ ಉಗ್ರರಿಂದ ಹತ್ಯೆಯಾದವರು.

ತೀವ್ರವಾದಿ ಸಂಘಟನೆಯೊಂದು ತಯಾರಿಸಿ ಬಾಂಗ್ಲಾದ ಆಂತರಿಕ ಸಚಿವಾಲಯಕ್ಕೆ ನೀಡಿದ 84 ನಾಸ್ತಿಕವಾದಿಗಳ ಹಿಟ್‌ಲಿಸ್ಟ್‌ನಲ್ಲಿ ಸಮದ್‌ ಕೂಡಾ ಇದ್ದರು ಎಂಬುದು ಗಮನಾರ್ಹ.

ಕಾಲೇಜು ಮುಗಿಸಿ, ಗೆಳೆಯನೊಂದಿಗೆ ಮನೆಗೆ ನಡೆದುಕೊಂಡು ಹೊರಟಿದ್ದ ಸಮದ್‌ ಮೇಲೆ ಜನರಿಂದ ತುಂಬಿದ ರಸ್ತೆಯಲ್ಲೇ ಮೂವರು ಉಗ್ರರು ದಾಳಿ ನಡೆಸಿದರು. ಅವರನ್ನು ಕೊಲ್ಲುವಾಗ 'ಅಲ್ಲಾ- ಓ- ಅಕ್ಬರ್‌' ಎಂದು ಘೋಷಣೆ ಕೂಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

''ಪೊಲೀಸರು ಸ್ಥಳಕ್ಕೆ ಹೋಗುವಾಗ ದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಪ್ರಕರಣ ನಡೆದ ಸಮಯದಿಂದಲೂ, ಸಮದ್‌ ಜೊತೆಗಿದ್ದ ಗೆಳೆಯ ನಾಪತ್ತೆಯಾಗಿದ್ದಾನೆ'' ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾಗುವ ಹಿಂದಿನ ದಿನವಷ್ಟೇ ದೇಶದ ಕಾನೂನು ಕುರಿತು ವಿಮರ್ಶಾತ್ಮಕವಾಗಿ ಸಮದ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಬಾಂಗ್ಲಾ ಸಂವಿಧಾನದಲ್ಲಿ ಇಸ್ಲಾಂನ್ನು ರಾಷ್ಟ್ರೀಯ ಧರ್ಮ ಎಂದು ಘೋಷಿಸಿರುವುದರ ವಿರುದ್ಧ ಮಾತನಾಡುತ್ತಿದ್ದರು ಎಂದು ಸಮದ್‌ ಗೆಳೆಯರು ತಿಳಿಸಿದ್ದಾರೆ.

ಸಮದ್‌ ಹತ್ಯೆಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತಿಲ್ಲವಾದರೂ, ದೇಶದಲ್ಲಿ ಜಾತ್ಯಾತೀತ ಬ್ಲಾಗರ್‌ಗಳ ಮೇಲೆ ಈ ಹಿಂದೆ ನಡೆದ ಹಲವು ದಾಳಿಗಳ ಹೊಣೆಯನ್ನು ಐಸಿಸ್‌ ಹೊತ್ತಿತ್ತು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>