Quantcast
Channel: VijayKarnataka
Viewing all articles
Browse latest Browse all 6795

ಬ್ರಿಟನ್‌ನಲ್ಲಿನ ಟಾಟಾ ಸ್ಟೀಲ್‌ ಘಟಕ ಮಾರಾಟಕ್ಕೆ

$
0
0

ಮುಂಬಯಿ : ಬ್ರಿಟನ್‌ನಲ್ಲಿ ತೀವ್ರ ನಷ್ಟ ಅನುಭವಿಸುತ್ತಿರುವ ತನ್ನ ಉದ್ಯಮವನ್ನು ಮಾರಾಟ ಮಾಡಲು ಟಾಟಾ ಸ್ಟೀಲ... ಮುಂದಾಗಿದೆ. ಇದರಿಂದ ಉದ್ಯಮ ನೆಚ್ಚಿಕೊಂಡಿದ್ದ ಸಾವಿರಾರು ಕಾರ್ಮಿಕರಲ್ಲಿ ಅಭದ್ರತೆ ನೆಲೆಯೂರಿದೆ.

ಬ್ರಿಟನ್‌ನಲ್ಲಿ ನೆಲೆ ಕಾಣಲು ದಶಕದಿಂದ ನಡೆಸಿದ ಟಾಟಾ ಸ್ಟೀಲ್‌ನ ಪ್ರಯತ್ನಗಳು ಫಲ ನೀಡದೇ, ಅಂತಿಮವಾಗಿ ಮಾರಾಟದ ಆಯ್ಕೆಯನ್ನು ಕಂಪನಿ ಆಯ್ದುಕೊಂಡಿದೆ. ''ಭವಿಷ್ಯದಲ್ಲೂ ಅಭಿವೃದ್ಧಿಯ ಚಹರೆಗಳು ಕಾಣಿಸುತ್ತಿಲ್ಲ. ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಬೇಡಿಕೆ ಕುಸಿಯುತ್ತಿದೆ,'' ಎನ್ನುವ ಅಂಶಗಳನ್ನು ಟಾಟಾ ಸ್ಟೀಲ್‌ ಪರಾಮರ್ಶಿಸಿ ತೀರ್ಮಾನ ಕೈಗೊಂಡಿದೆ. ಮಾರಾಟ ಸಂಬಂಧ ಕೆಲವು ಕಂಪನಿಗಳ ಜತೆ ಮಾತುಕತೆಯೂ ನಡೆದಿದೆ.

ಯುರೋಪ್‌ನಲ್ಲಿರುವ ತನ್ನ ಉದ್ಯಮದ ಪ್ರಗತಿ ಪರಿಶೀಲಿಸಿರುವ ಟಾಟಾ ಸ್ಟೀಲ... ಮಂಡಳಿಯು, ಕಳೆದ 12 ತಿಂಗಳುಗಳಿಂದ ಬ್ರಿಟನ್‌ನಲ್ಲಿನ ಟಾಟಾ ಸ್ಟೀಲ... ಘಟಕ ಮಾರಾಟಕ್ಕೆ ನಿರ್ಧರಿಸಿದೆ. 12.1 ಶತಕೋಟಿ ಡಾಲರ್‌ಗಳ ವ್ಯವಹಾರದಲ್ಲಿ 2007ರಲ್ಲಿ ಕೋರಸ್‌ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿದ್ದ ಟಾಟಾ ಸ್ಟೀಲ್‌, ಇಲ್ಲಿನ ವ್ಯವಹಾರದಲ್ಲಿ ತೀವ್ರ ನಷ್ಟ ಅನುಭವಿಸಿದೆ.

ತಾತ್ಕಾಲಿಕ ಒಡೆತನಕ್ಕೆ ಸರಕಾರದ ಚಿಂತನೆ

ಟಾಟಾ ಸ್ಟೀಲ್‌ ಘಟಕವನ್ನು ತಾತ್ಕಾಲಿಕವಾಗಿ ತಾನೇ ನಿರ್ವಹಿಸಿ, ಇಲ್ಲಿನ ಸಾವಿರಾರು ಉದ್ಯೋಗಾವಕಾಶಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬ್ರಿಟನ್‌ ಸರಕಾರ ಆಲೋಚನೆ ನಡೆಸುತ್ತಿದೆ. ತಾತ್ಕಾಲಿಕ ಒಡೆತನ ಸೇರಿದಂತೆ ಎಲ್ಲ ಆಯ್ಕೆಗಳನ್ನೂ ಹೊಂದಿರುವುದಾಗಿ ಸರಕಾರ ಹೇಳಿದೆ. ಬ್ರಿಟನ್‌ನಲ್ಲಿನ ಟಾಟಾ ಸ್ಟೀಲ್‌ ಘಟಕದಲ್ಲಿ 15,000 ಕೆಲಸಗಾರರು ಇದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>