Quantcast
Channel: VijayKarnataka
Viewing all articles
Browse latest Browse all 6795

ರಾಧಿಕಾ ಸಿಬಿಐ ಆಫೀಸರ್

$
0
0

ರಾಧಿಕಾ ಚೇತನ್ ಕಿರು ಚಿತ್ರವೊಂದರಲ್ಲಿ ನಟಿಸಲಿದ್ದಾರೆ. 'ನೆವರ್ ಎಂಡ್' ಎಂಬ ಶಾರ್ಟ್ ಮೂವಿಯಲ್ಲಿ ರಾಧಿಕಾ ನಟಿಸುವುದು ಪಕ್ಕಾ ಆಗಿದೆ.

ಧೀರಜ್ ಆರ್. ನಿರ್ದೇಶನದ ಈ ಚಿತ್ರದಲ್ಲಿ ಪ್ರಾಣ್ ಉದಿಯಾನ ಕೂಡ ಮುಖ್ಯ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ನೆವರ್ ಎಂಡ್ ಚಿತ್ರದಲ್ಲಿ ರಾಧಿಕಾ ಹಾಗೂ ಪ್ರಾಣ್ ಸಿಬಿಐ ಆಫೀಸರ್ ಆಗಿ ನಟಿಸಲಿದ್ದಾರೆ. ರಾಧಿಕಾ ಇಲ್ಲಿ ಕೊಲೆಯೊಂದನ್ನು ಬೆನ್ನಟ್ಟಿ ಹೋಗಲಿದ್ದಾರೆ. ಕೊಲೆಗಾರ ಯಾರು ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದಾಗಿದೆ.

'ಇದು ಮಹಿಳಾ ಪ್ರಧಾನ ಚಿತ್ರ. ರಾಧಿಕಾ ಈ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತಾರೆ ಅನಿಸಿತ್ತು. ಹಾಗಾಗಿ ಅವರನ್ನು ಅಪ್ರೋಚ್ ಮಾಡಿದೆವು. ಸ್ಕ್ರಿಪ್ಟ್ ಅದ್ಭುತವಾಗಿದೆ. ಹಾಗಾಗಿ ರಾಧಿಕಾ ಮರು ಮಾತಿಲ್ಲದೆ ಒಪ್ಪಿಕೊಂಡರು. ನೀವು ರಾಧಿಕಾ ಅವರನ್ನು ಸಿಬಿಐ ಆಫೀಸರ್ ಆಗಿ ಸದ್ಯದಲ್ಲೇ ಕಾಣಲಿದ್ದೀರಿ' ಎನ್ನುತ್ತಾರೆ ನಿರ್ದೇಶಕ ಧೀರಜ್.

ರಾಧಿಕಾ ಚೇತನ್ ಯು ಟರ್ನ್ ಎಂಬ ಚಿತ್ರದಲ್ಲಿಯೂ ನಟಿಸುತ್ತಿದ್ದು , ಆ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ರಂಗಭೂಮಿ ಹಿನ್ನಲೆ ಇರುವ ನಟಿ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಾಣುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಈ ಹಿಂದೆ ರಂಗತರಂಗದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದ ನಟಿಯಿಂದ ಇನ್ನಷ್ಟು ಚಿತ್ರಗಳ ನಿರೀಕ್ಷೆಯಲ್ಲಿದ್ದಾರೆ ಅವರ ಅಭಿಮಾನಿಗಳು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>